ಬುಧವಾರ, ಆಗಸ್ಟ್ 11, 2021

ನಾಗರ ಪಂಚಮಿ (ಕವಿತೆ) - ಶ್ರೀ ಪುರುಷೋತ್ತಮ ಪೆಮ್ನಳ್ಳಿ.

ನಾಗರ ಪಂಚಮಿ
ಶ್ರಾವಣ ಮಾಸದ ಶುಕ್ಲಪಕ್ಷದ ಶುಭದಿನದಿ
ವ್ರತವ ಮಾಡಲು ನೇಮದ ಉಪವಾಸದಿ 
ನಾಗರ ಪಂಚಮಿ ಹಬ್ಬವ ಆಚರಿಸಲು
ಮನಕೆ ಆನಂದದಿ ದೊರೆವುದು ಬಲವು...

ಅಣ್ಣ ತಂಗಿಯರ ಬಾಂಧವ್ಯದ ಹಬ್ಬವು 
ಹೊಂದಿದೆ ಅಣ್ಣಗೆ ಮರುಜನ್ಮದ ಐತಿಹ್ಯವು
ಶುಭದಿನದಿ ನಾಗದೇವತೆಯ ಆರಾಧನೆಯು
ಕೆಡುಕುಗಳಿಂದ ನಮ್ಮ‌ ರಕ್ಷಣೆಯ ಹಾದಿಯು...

ಜನಮೇಜಯ ರಾಜ ತಂದೆ ಸಾವ ಕೋಪದಿ
ಉರಗಗಳ ಕೊಲ್ಲಲು ಪಣವು ಸರ್ಪಯಜ್ಞದಿ
ಆಸ್ತಿಕ ಋಷಿಯ ಮಾತ ಕೇಳಲು ರಾಜನು 
ನಾಗರಪಂಚಮಿಯ ಆಚರಣೆಗೆ ಆದಿಯು...

ಮನದಿ ಇರಲಿ ಉರಗದ ಕಾಳಜಿಯು
ನಾಗರಕಲ್ಲು ನಾಗರ ಹುತ್ತಕ್ಕೆ ಹಾಲೆರೆದು
ದಾರವ ಸುತ್ತಿ ತೊಡಕು ಕೆಡುಕಗಳ ಸರಿಸಲು
ನಾಗದೇವತೆಗೆ ಶಿರಬಾಗಿ ನಮಿಸಿ ಬೇಡಲು...

ಆಚರಿಸೋಣ ಗತದ ಹಬ್ಬದ ಸೊಬಗ ನೆನೆದು
ಮಹತ್ವದ ದಿನಗಳು ಮನದಾಳದಿ ಉಳಿವುದು
ಪೂಜಿಸೋಣ ಏಕಾಗ್ರತೆಯ ಚಿತ್ತದಿ
ಫಲವ ಪಡೆಯೋಣ ನಿರ್ಮಲ ಮನದಿ...

- ಪುರುಷೋತ್ತಮ ಪೆಮ್ನಳ್ಳಿ
ಪಾವಗಡ ತಾ ತುಮಕೂರು ಜಿ
ದೂ.೯೬೩೨೨೯೬೮೦೯.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...