ಗುರುವಾರ, ಜುಲೈ 15, 2021

ಜನಸಂಖ್ಯೆಯ ಏರಿಕೆಯ ಭಾರ ಸಂಪನ್ಮೂಲಗಳ ಮೇಲೆ ಒತ್ತಡವನ್ನು ಹೇರುತ್ತಿದೆ ( ಲೇಖನ) - ಶ್ರೀ ಶಿವನಗೌಡ ಪೊಲೀಸ್ ಪಾಟೀಲ.

ಜನಸಂಖ್ಯೆಯ ಏರಿಕೆಯ  ಭಾರ ಸಂಪನ್ಮೂಲಗಳ ಮೇಲೆ ಒತ್ತಡವನ್ನು ಹೇರುತ್ತಿದೆ ...


ವಿಶ್ವದ ಬಹುತೇಕ ಕಡೆಗಳಲ್ಲಿ ಕಳೆದ ಶತಮಾನದಲ್ಲಿ ಕಂಡ ಜನಸಂಖ್ಯೆಯ ಹೆಚ್ಚಳದಲ್ಲಿನ ತೀವ್ರಗತಿ ಇಂದು ಜಗತ್ತಿನಲ್ಲಿ ಲಭ್ಯವಿರುವ ಸೀಮಿತ ಸಂಪನ್ಮೂಲಗಳ ಮೇಲೆ ತೀವ್ರ ಪರಿಣಾಮಗಳನ್ನು ಬೀರುತ್ತಿವೆ. ಐಷಾರಾಮಿ ಜೀವನದತ್ತ ಚಿಂತಿತ ಇಂದಿನ ವೈಜ್ಞಾನಿಕ ಯುಗದಲ್ಲಂತೂ ಇದರ ಪರಿಣಾಮ ಹೇಳತೀರದ್ದಾಗಿದೆ. ಚರಿತ್ರೆಯಲ್ಲಿ ಹಿಂದೆ ಜನನ ಸಂಖ್ಯೆಯ ತೀವ್ರತೆಯ ಜೊತೆ ಜೊತೆಗೆ ಮರಣ ಸಂಖ್ಯೆಯ ತೀವ್ರತೆಯೂ ಹೆಚ್ಚಿತ್ತು. ಮುಂದುವರಿದ ವಿಜ್ಞಾನ ಯುಗದಲ್ಲಿ ಮನುಷ್ಯನ ಆಯುಷ್ಯದ ಹೆಚ್ಚಳ ಇರುವ ಜನಾಂಗದ ಬದುಕನ್ನು ಹೆಚ್ಚಿಸುವುದರ ಜೊತೆಗೆ ಜನನ ಸಂಖ್ಯೆಯನ್ನೂ ಹೆಚ್ಚಿಸುತ್ತಾ ನಡೆದಿದೆ.

ಜುಲೈ 11ರ ದಿನಾಂಕವನ್ನೂ 'ವಿಶ್ವ ಜನಸಂಖ್ಯಾ ದಿನ'ವೆಂದು ಕರೆಯಲಾಗುತ್ತಿದೆ. ಜಾಗತಿಕವಾಗಿ ಜನಸಂಖ್ಯೆ ಏರುತ್ತಿರುವ ವೇಗ ನೋಡಿ ವಿಶ್ವಸಂಸ್ಥೆ 1987ರ ವರ್ಷದಲ್ಲಿ ಈ ವಿಶ್ವ ಜನಸಂಖ್ಯಾ ದಿನಾಚರಣೆಗೆ ಮುನ್ನುಡಿ ಬರೆಯಿತು. ಆ ದಿನದಂದು ವಿಶ್ವ ಜನಸಂಖ್ಯೆ 5 ಬಿಲಿಯನ್ ತಲುಪಿತಂತೆ. ಹೀಗೆ ಈ ದಿನವನ್ನು ಆಚರಿಸುವುದರ ಮೂಲಕ ವಿಶ್ವದಲ್ಲಿ  ಜನಸಂಖ್ಯಾ ಸ್ಫೋಟದಿಂದ ಆಗುವ ಅಪಾಯಗಳು, ಕುಟುಂಬ ಯೋಜನೆ, ಬಡತನ,ಶಿಶುಮರಣ ಮತ್ತು ಮಾನವ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸಲು, ವಿವಿಧ ಸಮಸ್ಯೆಗಳ ಕುರಿತಾಗಿ ವಿಶ್ವ ಸಮುದಾಯದ ಗಮನ ಸೆಳೆಯುವುದು ಈ ಆಚರಣೆಯ ಪ್ರಮುಖ ಉದ್ದೇಶ.

ಕ್ರಿಸ್ತ ಶಕ 1000 ರಲ್ಲಿ ಜಗತ್ತಿನಲ್ಲಿ 40 ಕೋಟಿ ಜನರಿದ್ದರು ಜಗತ್ತಿನ ಜನಸಂಖ್ಯೆ ನೂರು ಕೋಟಿ ದಾಟಲು 1804 ರ ವರೆಗೆ ಕಾಯಬೇಕಾಯಿತು ಮುಂದೆ 1960ಕ್ಕೆ  300 ಕೋಟಿ.  ಕಳೆದ 40 ವರ್ಷದಲ್ಲಿ 700 ಕೋಟಿ ಜನಸಂಖ್ಯೆ ಆಯಿತು
 1991ರಲ್ಲಿ 6೦೦ ಕೋಟಿ,2011ರಲ್ಲಿ 7೦೦ ಕೋಟಿ ಇದ್ದು ಇದೀಗ 720 ಕೋಟಿಗಳನ್ನು ದಾಟಿದೆ. ಇದೇ ಮುಂದುವರಿದ ಗತಿಯಲ್ಲಿ ಇದು 2024ರ ವೇಳೆಗೆ 8೦೦ ಕೋಟಿ,2039ರ ವೇಳೆಗೆ 9೦೦ ಕೋಟಿ ತಲುಪಿ 2060ರ ವರ್ಷದಲ್ಲಿ 1೦೦೦ ಕೋಟಿಯನ್ನು ತಲುಪುತ್ತದೆ ಎಂಬುದು ಸಂಖ್ಯಾಶಾಸ್ತ್ರಜ್ಞರ ಊಹೆಯಾಗಿದೆ.

ವಿಶ್ವದ ಹೆಚ್ಚು ಜನಸಂಖ್ಯೆಯುಳ್ಳ ದೇಶಗಳು ಇಂತಿವೆ: ಚೀನಾ 138ಕೋಟಿ, ಭಾರತ 129 ಕೋಟಿ, ಅಮೆರಿಕ 32 ಕೋಟಿ, ಇಂಡೋನೇಷ್ಯಾ 26 ಕೋಟಿ, ಬ್ರೆಜಿಲ್ 20 ಕೋಟಿ, ಪಾಕಿಸ್ಥಾನ 20 ಕೋಟಿ, ನೈಜೀರಿಯಾ 20.9 ಕೋಟಿ, ಬಾಂಗ್ಲಾದೇಶ 16 ಕೋಟಿ, ರಷ್ಯಾ 14ಕೋಟಿ, ಜಪಾನ್ 13 ಕೋಟಿ.

 ಜಗತ್ತಿನ ಒಟ್ಟು ಜನಸಂಖ್ಯೆ 7.4 ಶತಕೋಟಿ.ಜಗತ್ತಿನ ಜನಸಂಖ್ಯೆಯ ಅರ್ಧದಷ್ಟು ಭಾಗ 30 ವರ್ಷ ದಾಟಿದವರು ಇದ್ದಾರೆ.ಜಗತ್ತಿನ ಜನಸಂಖ್ಯೆಯ ಶೇ 17.5  ಪ್ರತಿಶತ         ಭಾರತದಲ್ಲಿದ್ದಾರೆ.ವಿಶ್ವದಲ್ಲಿ ವರ್ಷಕ್ಕೆ 73 ಕೋಟಿ ಜನ ಹುಟ್ಟಿದರೆ, ಮೂವತ್ತು ಕೋಟಿ ಜನ ಸಾಯುತ್ತಿದ್ದಾರೆ.8 ಸೆಕೆಂಡಿಗೆ ಒಂದು ಮಗುವಿನ ನನ್ನ 12 ಸೆಕೆಂಡಿಗೆ ಒಂದು ಮಗುವಿನ ಮರಣ.ಭಾರತದ ಜನಸಂಖ್ಯೆಯಲ್ಲಿ ಶೇಕಡ 41ರಷ್ಟು ಜನರು 30 ವರ್ಷದ ಒಳಗಿನವರ ಇದ್ದಾರೆ.ಪ್ರತಿ ಸೆಕೆಂಡಿಗೆ 4.3 ಮಕ್ಕಳು ಹುಟ್ಟಿದರೆ 1.8 ಜನ ಸಾಯುತ್ತಿದ್ದಾರೆ. ಹುಟ್ಟಿದ ಮೂರು ಮಕ್ಕಳಲ್ಲಿ ಒಂದು ಮಗುವಿನ ನೊಂದಣಿ ಹಾಗುವುದಿಲ್ಲ.ನಿನ್ನೆ ಹೋಲಿಸಿದರೆ 12 ಲಕ್ಷಕ್ಕಿಂತ ಹೆಚ್ಚು ಜನಸಂಖ್ಯೆ ಹೆಚ್ಚಾಗಿದೆ ಇದು ಸಂಪನ್ಮೂಲಗಳ ಮೇಲೆ ಒತ್ತಡವನ್ನು ಹೆಚ್ಚಿಸಿದೆ

 ಭಾರತೀಯ ಜನಸಂಖ್ಯೆಯ ಚಿತ್ರಣ
 ಜಾಗತಿಕವಾಗಿ ಭಾರತವು ಚೀನಾದ ನಂತರದ ಎರಡನೆಯ ಅತಿ ದೊಡ್ಡ ಜನಸಂಖ್ಯೆ ಹೊಂದಿರುವ ರಾಷ್ಟ್ರವಾಗಿದೆ 2011ರ ಜನಗಣತಿಯ ಪ್ರಕಾರ ಭಾರತದ ಒಟ್ಟು ಜನಸಂಖ್ಯೆ 121 ಕೋಟಿ
 1.ಭಾರತೀಯ ಜನಸಂಖ್ಯೆ ಗಾತ್ರ ಮತ್ತು ಬೆಳವಣಿಗೆ 1951 ರ ಅವಧಿಯಲ್ಲಿ ಸರಾಸರಿ 1.3 ರಷ್ಟು ಬೆಳವಣಿಗೆ ಯಲ್ಲಿತ್ತು, 1918-19 ರಲ್ಲಿ ಜನರಿಗೆ ಬಾಧಿಸಿದ ವಿಷಮಶೀತ ದೊರದಿಂದ ದೇಶದ ಒಟ್ಟು ಜನಸಂಖ್ಯೆಯಲ್ಲಿ ಶೇಕಡಾ ಐದರಷ್ಟು ಜನಸಂಖ್ಯೆ ಬಲಿಯಾಯಿತು ಇದರಿಂದ ಜನಸಂಖ್ಯೆಯ ಬೆಳವಣಿಗೆ ಶೇಕಡ 0.03ರಷ್ಟು ಋಣಾತ್ಮಕ ಬೆಳವಣಿಗೆಯನ್ನು ಕಂಡಿತು.  1921 ಕ್ಕಿಂತ ಮುಂಚೆ ಜನಸಮೂಹದ ಬೆಳವಣಿಗೆಯ ಪ್ರಮಾಣವು ಸ್ಥಿರವಾಗಿರಲಿ ಲ್ಲ ಕೆಲವೊಮ್ಮೆ ಅದು ಹೆಚ್ಚಾಗುತ್ತಿತ್ತು ಮತ್ತು ಇನ್ನು ಕೆಲವೊಮ್ಮೆ ಅದು ಕಡಿಮೆಯಾಗುತ್ತಿತ್ತು ಆದ್ದರಿಂದ 1921ನೇ ಜನಸಂಖ್ಯಾ ವಿಭಜಕ ವರ್ಷ ಎಂದು ಪರಿಗಣಿಸಲಾಗಿದೆ.
2. ಭಾರತೀಯ ಜನಸಮೂಹದ ವಯೋ ರಚನೆ ಒಂದು ದೇಶದಲ್ಲಿ ಜನಸಂಖ್ಯೆಯಲ್ಲಿ  ಆಗುತ್ತಿರುವ ಯೋಜನೆಯ ಪ್ರಮಾಣವು ಕೂಡ ದೇಶದ ಅಭಿವೃದ್ಧಿಗೆ ಪೂರಕವಾಗಿರುತ್ತದೆ ಎಂಬುದಕ್ಕೆ ಭಾರತದ ಜನಸಂಖ್ಯೆ ಪ್ರಮುಖವಾದ ಉದಾಹರಣೆಯಾಗಿದೆ.ಒಟ್ಟು ಜನಸಂಖ್ಯೆಯಲ್ಲಿ ಯುವಕರ ಸಂಖ್ಯೆ ಹೆಚ್ಚಾಗಿರುವುದರಿಂದ ದೊರೆಯಬಹುದಾದ ಅನುಕೂಲವನ್ನು ಜನಸಂಖ್ಯಾ ಲಾಭಾಂಶ ಎನ್ನಬಹುದು.
3. ಭಾರತದಲ್ಲಿ ಕುಸಿಯುತ್ತಿರುವ ಲಿಂಗಾನುಪಾತ ಸಾವಿರ ಪುರುಷರಿಗೆ ಅನುಗುಣವಾಗಿ ಮಹಿಳೆಯರ ಒಟ್ಟು ಸರಾಸರಿ ಸಂಖ್ಯಾ ಪ್ರಮಾಣವನ್ನು ಲಿಂಗಾನುಪಾತ ಎನ್ನಲಾಗುತ್ತದೆ. ದೇಶದ ಜನಸಂಖ್ಯೆಯಲ್ಲಿ ಲಿಂಗಾನುಪಾತವು ಕೂಡ ದೇಶದ ಜನಸಂಖ್ಯೆ ಮತ್ತು ದೇಶದ ಅಭಿವೃದ್ಧಿಯನ್ನು ನಿರ್ಧರಿಸುತ್ತದೆ. ಗಂಡು ಮತ್ತು ಹೆಣ್ಣಿನ ಲ್ಲಿ ವ್ಯತ್ಯಾಸವಾದರೆ ದೇಶದ ಅಭಿವೃದ್ಧಿಗೆ ಮಾರಕವಾಗುತ್ತದೆ ಇದಕ್ಕೆ ಹಲವಾರು ಕಾರಣಗಳು ಉಂಟು ಗಂಡು ಸಂತತಿಯ ಬಯಕೆ ಮಾಡುವ ರಾಜ್ಯಗಳ ಆಗುತ್ತಿರುವಂತೆ ಉತ್ತರಪ್ರದೇಶ ರಾಜಸ್ಥಾನ ಬಿಹಾರ ಪಂಜಾಬು ಹರಿಯಾಣ ಕರ್ನಾಟಕ ರಾಜ್ಯಗಳು, ಹೆಣ್ಣು ಸಂತತಿಯನ್ನು ಬಯಸದೆ ಇರುವಂತ ಧಾರ್ಮಿಕ ಸಂಪ್ರದಾಯಗಳು, ಜನಸಂಖ್ಯೆ ಎಚ್ಚರವಾಗಿದ್ದರೂ ಕೂಡ ಅನಕ್ಷರಸ್ತೆ ಪ್ರಮಾಣ ಹೆಚ್ಚಾಗಿರುವಂತಹ ಬಿಮಾರು ರಾಜ್ಯಗಳು, ದೆಮಾರು ಹೆಣ್ಣು ಭ್ರೂಣ ಹತ್ಯೆ ಮಾಡುವಂಥ ರಾಜ್ಯಗಳು ಎಲ್ಲಾ ಕಾರಣದಿಂದಾಗಿ ಲಿಂಗಾನುಪಾತದಲ್ಲಿ ವ್ಯತ್ಯಾಸವಾಗುವುತ್ತಿದೆ.  ಭಾರತೀಯ ಜನಸಮೂಹದಲ್ಲಿ ಹೆಚ್ಚುತ್ತಿರುವ ಸಾಕ್ಷರತೆಯ ಪ್ರಮಾಣ ಒಂದು ದೇಶದ ಬೆಳವಣಿಗೆಯಲ್ಲಿ ಪೂರಕವಾಗಿರುವುದು ಸಾಕ್ಷರತೆಯ ಪ್ರಮಾಣವು ಆದೇಶದ ಜನಸಂಖ್ಯೆ ಯಾಗುತ್ತಿರುವ ಅಂತಃಪ್ರಜ್ಞೆಯ ಆರೋಗ್ಯ ಕಾರ್ಯಕ್ರಮಗಳಿಂದ ಕಾರಣದಿಂದಾಗಿ ಜನಸಂಖ್ಯೆ ಹೆಚ್ಚಳಕ್ಕೆ ಕಾರಣವಾಗುತ್ತದೆ ಅದು ಭಾರತದಂತಹ ದೇಶದಲ್ಲಿ 1951 ರಲ್ಲಿ ಶೇಕಡ 18 ಕೋಟಿ ಜನಸಂಖ್ಯೆ ಇತ್ತು, 2021ರ ಜನಗಣತಿ ಪ್ರಕಾರ ಒಂದು 121 ಕೋಟಿ ಜನಸಂಖ್ಯೆ ಹೆಚ್ಚಾಗಿದೆ.ಹೆಚ್ಚುತ್ತಿರುವ ಜನಸಂಖ್ಯೆಯನ್ನು ಕಡಿಮೆ ಮಾಡಲು ಭಾರತ ಸರ್ಕಾರ 1952 ರಲ್ಲಿ ಜನಸಂಖ್ಯಾ ನೀತಿ  ಮೂಲಕ ಹಲವಾರು  ಯೋಜನೆಯನ್ನು ಜಾರಿಗೆ ತಂದಿದೆ ಕುಟುಂಬ ಕಲ್ಯಾಣ ಯೋಜನೆ, ರಾಷ್ಟ್ರೀಯ ಜನಸಂಖ್ಯಾ ನೀತಿ 2000,ಇಂತ ಹಲವಾರು ಯೋಜನೆಗಳನ್ನು ಜಾರಿಗೊಳಿಸಿದರೂ ಕೂಡ ಜನಸಂಖ್ಯೆ ಹೆಚ್ಚುತ್ತಿದೆ.ಒಂದು ದೇಶದಲ್ಲಿ ಜನಸಂಖ್ಯೆ ಬೆಳವಣಿಗೆಯಾದಂತೆ ಅಲ್ಲಿರುವ ಸಂಪನ್ಮೂಲಗಳ ಬಳಕೆಯ ಮೇಲೆ ಒತ್ತಡ ಹೆಚ್ಚಾಗಿ ಸಹಜವಾಗಿ ಹಲವಾರು ಸಮಸ್ಯೆಗಳಿಗೆ ಸೃಷ್ಟಿಯಾಗಲಿದೆ ಕಾರಣವಾಗುತ್ತದೆ ಆದ್ದರಿಂದ ಸರ್ಕಾರವು ಕೂಡ ಜನಸಂಖ್ಯೆಯ ಬೆಳವಣಿಗೆಯ ಪೂರಕವಾಗಿರುವಂತೆ ಸೌಲಭ್ಯವನ್ನು ಒದಗಿಸಲು ಮತ್ತು ಇದಕ್ಕೆ ಬೇಕಾಗಿರುವಂತಹ ಪೂರ್ವ ತಯಾರಿಯನ್ನು ಮಾಡಿಕೊಳ್ಳಬೇಕಾದದ್ದು ಅವಶ್ಯವಾಗಿದೆ ಚೀನಾ ದೇಶದಲ್ಲಿ ಜನಸಂಖ್ಯೆ ಹೆಚ್ಚಾದಂತೆ ಕುಟುಂಬ ಕಲ್ಯಾಣ ಯೋಜನೆಯನ್ನು ಜಾರಿಗೊಳಿಸಿದರು ಭಾರತಕ್ಕೆ ಹೋಲಿಸಿದರೆ ಚೀನಾದಲ್ಲಿ ಜನಸಂಖ್ಯೆ ಪ್ರಮಾಣ ಇಳಿಕೆಯನ್ನು ಕಂಡಿದೆ ಅದೇ ರೀತಿಯಾಗಿ ಭಾರತದಲ್ಲಿಯೂ ಕೂಡ ಒಂದು ಯೋಜನೆ ಜಾರಿಗೊಳಿಸಿ ಜನಸಂಖ್ಯೆಯ ಬೆಳವಣಿಗೆಯನ್ನು ನಿಯಂತ್ರಣ ಮಾಡುವುದು ಅವಶ್ಯವಾಗಿದೆ.


ಈ ಜನಸಂಖ್ಯೆಯ ಏರಿಕೆ ಬಹುತೇಕವಾಗಿ ಬಡತನ, ಅಜ್ಞಾನ, ಮೌಢ್ಯಯುತ ಧಾರ್ಮಿಕ ಶ್ರದ್ಧೆ, ಅಪಕ್ವ ಚಾಪಲ್ಯತೆ ಮುಂತಾದವುಗಳು ರಾರಾಜಿಸುತ್ತಿರುವ ದೇಶಗಳಲ್ಲೇ ಹೆಚ್ಚಾಗಿರುವುದು ಕಂಡುಬರುತ್ತಿವೆ. ಇದೇ ಸಮಯದಲ್ಲಿ ಮುಂದುವರಿದ ದೇಶಗಳಲ್ಲಿ ನಡೆಯುತ್ತಿರುವ ಅಪಕ್ವ ಅಮಾನವೀಯ ಜನಸಂಖ್ಯಾ ನಿಯಂತ್ರಣ ಕ್ರಮಗಳು ಸರಿ ಎನ್ನುವಂತಿಲ್ಲ. ನಮ್ಮ ಮಕ್ಕಳನ್ನು ಜವಾಬ್ದಾರಿಯುತವಾಗಿ ಆಹಾರ, ಆರೋಗ್ಯ ಜ್ಞಾನಕೊಟ್ಟು ಸಾಕುತ್ತೇವೆ, ಸಮಾಜಕ್ಕೆ ಹೆಚ್ಚು ಮಕ್ಕಳನ್ನು ಕೊಟ್ಟು ಭಾರ ಹೆಚ್ಚಿಸುವುದಿಲ್ಲ, ಲಿಂಗ ಭೇದವಿಲ್ಲದೆ ಮಾನವೀಯ ನೆಲೆಗಟ್ಟಿನಲ್ಲಿ ಜನಸಂಖ್ಯೆಯ ನಿಯಂತ್ರಣಗಳನ್ನು ಅಳವಡಿಸುತ್ತೇವೆ, ಯಾವುದೇ ಧರ್ಮ, ಜಾತಿ ಭೇದಗಳಿಲ್ಲದೆ ಹೆಚ್ಚು ಮಕ್ಕಳಾಗದಂಥಹ ವ್ಯವಸ್ಥಾತ್ಮಕ ಕಾರ್ಯಕ್ರಮಗಳನ್ನು ಒಪ್ಪಿಕೊಂಡು ಜನಸಂಖ್ಯೆ ಹೆಚ್ಚಳವಾಗದಂತೆ ನಿಗಾವಹಿಸುತ್ತೇವೆ ಎಂಬ ಜವಾಬ್ಧಾರಿ ಈ ಪ್ರಪ್ರಂಚದಲ್ಲಿನ ಪ್ರತಿಯೊಬ್ಬ ಪ್ರಜೆಯ ಕರ್ತವ್ಯವೂ ಆಗಬೇಕಿದೆ.


- ಶಿವನಗೌಡ ಪೊಲೀಸ್ ಪಾಟೀಲ
 ಉಪನ್ಯಾಸಕರು 
ಸಮಾಜಶಾಸ್ತ್ರ ಮತ್ತು ಸಮಾಜಕಾರ್ಯ ವಿಭಾಗ. ಕೊಪ್ಪಳ
9845646370.



(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...