ಗಜಲ್
ಹಸಿದ ಹೊಟ್ಟೆ ಅನ್ನ ಬಯಸುತ್ತೇವೆ ಬೋಧನೆಯನಲ್ಲ
ಭುಜದ ಶ್ರಮಕ್ಕೆ ಕೂಲಿ ಬಯಸುತ್ತೇವೆ ಭಿಕ್ಷೆಯನಲ್ಲ
ಜೀರ್ಣಿಸಲಾಗದೆ ನರಳಿ ಸಾಯುವರೆಷ್ಟೋ ಜನ
ಹೊತ್ತು ಊಟಕ್ಕೆ ಅಪಅಪಿಸುತ್ತೇವೆ ಬಂಗಾರವನಲ್ಲ
ವಂಚಿಸಿ ಬದುಕುವವರೆಷ್ಟೋ ಜನರಿಲ್ಲಿ
ದಾಹಕ್ಕೆ ದಣಿದು ನೀರಲ್ಲಿ ದಣಿಯುತ್ತೇವೆ ಆಜ್ಯವನಲ್ಲ
ಹಣವ ಮುಂದು ಮಾಡಿ ಬದುಕುತ್ತೇವೆ ಇಲ್ಲಿ
ಬಯಲ ಮಣ್ಣಿಗೆ ಸೇರಿ ಸಾಯುತ್ತೇವೆ ಮಹಲಿನಲಲ್ಲ
ಇಲ್ಲವಾಗುವ ಬದುಕಿಗೆ ವೇಷ ಸಾವಿರ ಮಾಡುತ್ತೇವೆ
’ನಾಣಿ’ ಶೂನ್ಯದ ದಾವಂತಕ್ಕೆ ಬದುಕುತ್ತೇವೆ ಅದು ವಾಸ್ತವವಲ್ಲ.
- ಲಕ್ಷ್ಮೀನಾರಾಯಣ ಕೆ ವಾಣಿಗರಹಳ್ಳಿ.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ