ಶುಕ್ರವಾರ, ಜುಲೈ 16, 2021

ಗಜಲ್ - ಶ್ರೀ ಲಕ್ಷ್ಮೀನಾರಾಯಣ ಕೆ ವಾಣಿಗರಹಳ್ಳಿ.

 ಗಜಲ್

ನಂಬಿಕೆಯ ನಾವದಲಿ ಸಹ ನಾವಿಕನವನು ನಂಬಿಕೆಯಲಿ ಸಾಗಬೇಕು ಸಖಿ
ಅಂಬಿಗನವನು ಬೆನ್ನಿಂದೆಯೇ  ಕಾಯುವನು ನಂಬಿಕೆಯಲಿ ಸಾಗಬೇಕು ಸಖಿ 

ಬರಿದಾದ ಬದುಕಲಿ ಬವಣೆಗಳೆ ಸಾವಿರ.. ಸುಖ ದುಃಖಗಳೂ ಕೂಡ ಸುಖವಿಲ್ಲಿ
ಬರಿದಾದ ಬಾಳಿಗೂ.. ಸಂತಸವ ತರುವನವನು ನಂಬಿಕೆಯಲಿ ಸಾಗಬೇಕು ಸಖಿ

ಸಾಸುವೆಯ ಸತ್ಯಕ್ಕೆ ಸಾವಿನ ಜಂಜಾಟವೇಕೆ? ಇದ್ದು ಬಿಡು ಸುಮ್ಮನೆ ಅವನಿರುವನೆಂದು
ಪಾತಾಳದಲ್ಲಿರುವ ಜೀವಜಂತುವಿಗೂ ಬದುಕಿಸುತ್ತಿರುವನು ನಂಬಿಕೆಯಲಿ ಸಾಗಬೇಕು ಸಖಿ

ಕಲ್ಲೊಳ‌ಗಿನ ಕಪ್ಪೆಗೂ ಬದುಕಿರುವುದಿಲ್ಲ‌ಿ..! ಅಣುರೇಣ ತೃಣಮೂಲದಲು ಇರುವನು
ಗುಹೆಯ ಕರಡಿಗೂ ಬದುಕಿಸಿ ಬಿಡುವನು ನಂಬಿಕೆಯಲಿ ಸಾಗಬೇಕು ಸಖಿ 

ನಾಕ ನರಕದ ಹಾದಿಯಲಿ ಸಾಗುವೆ ನೀನು ಮನುಷ್ಯತ್ವದಲಿ ಬದಿಕಿಬಿಡು ಸಾಕು
ಸದಾಕಾಲವೂ ಎಲ್ಲವನೂ ಕಾಯುತ್ತಿರುವನು ನಂಬಿಕೆಯಲಿ ಸಾಗಬೇಕು ಸಖಿ

       - ಶ್ರೀ ಲಕ್ಷ್ಮೀನಾರಾಯಣ ಕೆ ವಾಣಿಗರಹಳ್ಳಿ.




(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

1 ಕಾಮೆಂಟ್‌:

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...