ಶನಿವಾರ, ಜುಲೈ 24, 2021

*ಸನ್ಯಾಸಿ ಮತ್ತು ಇತರ ಕತೆಗಳು – ಕುವೆಂಪು* (ಪುಸ್ತಕ ವಿಮರ್ಶೆ) - ಶ್ರೀಮತಿ ಗಿರಿಜಾ ಮಾಲಿ ಪಾಟೀಲ.

*ಸನ್ಯಾಸಿ ಮತ್ತು ಇತರ ಕತೆಗಳು – ಕುವೆಂಪು*

ವಿಶ್ವ ಮಾನವತೆಯ ಸಂದೇಶವನ್ನು ನೀಡಿದ ‘ಯುಗದ ಕವಿ ಜಗದ ಕವಿ’ ಎಂದೇ ಪ್ರಸಿದ್ದಿ ಪಡೆದ ಇಪ್ಪನೆ ಶತಮಾನ ಕಂಡ ದೈತ್ಯ ಪ್ರತಿಭೆ ಹಾಗೂ ಅವರೊಬ್ಬ ರಸಋಷಿ. ಕನ್ನಡದ ಎರಡನೇ ರಾಷ್ಟ್ರಕವಿ. ಕುವೆಂಪು, ಇವರ ಪರಿಚಯ ಯಾರಿಗೆ ತಾನೆ ಇಲ್ಲ ಹೇಳಿ? ಇವರ ಗುರು ಟಿ.ಎಸ್.ವೆಂಕಣ್ಣಯ್ಯ. ಮೈಸೂರಿನ ಮಹರಾಜ ಕಾಲೇಜಿನ ಪ್ರಾಧ್ಯಾಪಕರೂ, ಪ್ರಾಂಶುಪಾಲರೂ ಆಗಿದ್ದರು. ನಂತರ ಉಪಕುಲಪತಿಗಳಾದರು. ತಮ್ಮ ಕಲ್ಪನೆಯ ಕೂಸಾದ ಮಾನಸ ಗಂಗೋತ್ರಯನ್ನು ಕಟ್ಟಿ ಬೆಳೆಸಿದರು. 
ಶ್ರೀ ರಾಮಾಯಣ ದರ್ಶನಂ, ಕಾನೂರು ಸುಬ್ಬಮ್ಮ ಹೆಗ್ಗಡತಿ, ಮಲೆಗಳಲ್ಲಿ ಮದುಮಗಳು ಇವು ಇವರನ್ನು ಜಗತ್ತಿನ ಮಹಾನ್ ಸಾಹಿತಿಗಳ ಸಾಲಿನಲ್ಲಿ ನಿಲ್ಲಿಸಿದವು. ಇವರ ಆತ್ಮಕಥನ ನೆನಪಿನ ದೋಣಿಯಲ್ಲಿ. ಅಗಾದವಾದ ಸಾಹಿತ್ಯದ ಸಂಪತ್ತನ್ನೆ ಕನ್ನಡ ಸಾರಸ್ವತ ಲೋಕಕ್ಕೆ ನೀಡಿದ ಇವರು ಜ್ಞಾನಪೀಠ ಪ್ರಶಸ್ತಿಯಿಂದ ಹಿಡಿದು ಸಾಕಷ್ಟು ಪ್ರಶಸ್ತಿ ಪುರಸ್ಕಾರಗಳನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ. ಇವರ ಸನ್ಯಾಸಿ ಮತ್ತು ಇತರ ಕತೆಗಳು ಎನ್ನುವ ಕಥಾ ಸಂಕಲನ ಉತ್ತಮವಾದ ಕತೆಗಳನ್ನು ಒಳಗೊಂಡಿದೆ. ಸಂಕಲನದ ಆರಂಭದಲ್ಲಿ ಬರುವ ‘ಸನ್ಯಾಸಿ’ ಎನ್ನುವ ಕತೆಯು ಎಲ್ಲರೂ ಸನ್ಯಾಸಿಯಾಗುವುದಕ್ಕೆ ಸಾಧ್ಯವಿಲ್ಲ ಹಾಗೂ ಸನ್ಯಾಸವೆಂದರದು ಬದಿಕಿನಲ್ಲಿ ತನಗಿರು ಜವಾಬ್ದಾರಿಗಳಿಂದ ಕಳಚಿಕೊಳ್ಳುವುದಲ್ಲ. ಬದುಕಿನ ಸಮಸ್ಯೆಗಳಿಂದ ವಿಮುಖವಾಗುವುದು ಖಂಡಿತಾ ಅಲ್ಲ. ಇಲ್ಲಿ ಚೈತನ್ಯನಾಗಿ ಸನ್ಯಾಸ ಸ್ವೀಕರಿಸಿದ ರಮೇಶ ಹಾಗೂ ಅವನು ಅಗಲಿದ ಮೇಲೆ ನಿರಾಶ್ರಿತಳಾಗಿ ಅವನನ್ನು ಅರಸಿ ಮುಕುಂದನ ವೇಶ ಧರಿಸಿ ಬಂದ ಅವನ ಪತ್ನಿ ಇಂದಿರೆಯ ಪಾತ್ರ ಮನೋಜ್ಞವಾಗಿ ಮೂಡಿ ಬಂದಿದೆ. ರಮೇಶನಿಗೆ ಮೊದಲಿನಿಂದಲೂ ಆಧ್ಯಾತ್ಮದಲ್ಲಿ ಒಲವಿದ್ದ ಕಾರಣ ಅಬ್ರಹ್ಮಚಾರಿಯಾಗಿ ಉಳಿಯಲು ನಿರ್ಧಾರ ಮಾಡಿರುತ್ತಾನೆ ಆದರೆ ತಾಯಿ ತಂದೆ ಮಗನಿಗೆ ಇಂದಿರೆಯ ಜೊತೆ ಮದುವೆ ಮಾಡಿ ತಮ್ಮಲೆ ಉಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ ಕಡೆಗೆ ಸಾಧ್ಯವಾಗದೆ ಅವನು ಮನೆ ಬಿಟ್ಟು ಸನ್ಯಾಸತ್ವದ ಕಡೆಗೆ ತೆರಳುತ್ತಾನೆ. ಮನ ನೊಂದ ತಾಯಿ ತಂದೆ ಹಾಸಿಗೆ ಹಿಡಿದು ಸಾವನ್ನಪ್ಪುತ್ತಾರೆ. ಆಗ ಇಂದಿರೆಗೆ ಒಬ್ಬಂಟಿ ಬದುಕು ಅಸಹನೀಯವಾಗಿ ಅವಳೂ ಗಂಡು ಸನ್ಯಾಸಿಯ ವೇಶ ಧರಿಸಿ ಮುಕಂದನೆಂಬ ಹೆಸರಿನಿಂದ ಚೈತನ್ಯನಾಗಿ ಬದಲಾದ ರಮೇಶನ ಬಳಿ ಬರುತ್ತಾಳೆ. ತನ್ನ ವಿಚಾರಗಳಿಂದ ರಮೇಶನನ್ನು ತನ್ನತ್ತ ಸೆಳೆದು ರಮೇಶ ಮುಕುಂದನ ವೇಶದಲ್ಲಿರುವ ಇಂದಿರೆಯನ್ನು ತುಂಬಾ ಹಚ್ಚಿಕೊಂಡು ಅರಿಬ್ಬರು ಆತ್ಮೀಯ ಸ್ನೇಹಿತರಾಗಿಬಿಡುತ್ತಾರೆ. ಚೈತನ್ಯ ರಮೇಶನನ್ನು ಬಿಟ್ಟರಲಾರದಷ್ಟು ಗಾಡವಾದ ಸ್ನೇಹ ಅವರೀರ್ವರ ಬೆಳದಾಗ ಮಾತ್ರ ಮುಕುಂದ ಗುರುಗಳ ಬಳಿ ತನ್ನ ವೇಷ ಕಳಚಿ ತಾನು ಮುಕುಂದನಲ್ಲ ರಮೇಶನ ಇಂದಿರೆ ಎನ್ನುವ ಸತ್ಯ ಬಯಲು ಮಾಡಿದಾಗ ಮಾತ್ರ ರಮೇಶ ಆಶ್ರ್ಚರ್ಯದಿಂದ ಗುರುಗಳೆಡೆಗೆ ನೋಡುತ್ತಾನೆ. ಗುರುಗಳು ಆಯ್ಕೆ ಇವನಿಚ್ಚೆಗೆ ಬಿಡುತ್ತಾರೆ. ಇಲ್ಲಿ ಗುರುಗಳು ಹೇಳುವ ಮಾತು ತುಂಬಾ ಅರ್ಥ ಗರ್ಭಿತವಾದದ್ದು. “ನೀನು ಸ್ವತಂತ್ರನು, ಏನುಬೇಕಾದರೂ ಮಾಡು, ಏನು ಮಾಡಿದರೂ ನೀನೂ ಹಾಳಗುವುದಿಲ್ಲ ನೀನು ಒಪ್ಪದಿದ್ದರೆ ಇಂದಿರೆಯ ಬಾಳು ಸಾರ್ಥಕವಾಗುವುದಿಲ್ಲ” “ಇದೇ ಸೃಷ್ಟಿಯ ಸಮಸ್ಯೆ, ಒಬ್ಬನು ಮುಕ್ತ, ಒಬ್ಬನು ಮುಮುಕ್ಷು, ಒಬ್ಬನು ಬದ್ಧ! ಒಂದು ಅವ್ಯಕ್ತ, ಒಂದು ವ್ಯಕ್ತ, ಒಂದು ಮಾಯೆ! ಇದೇ ಭಗವಂತನ ಲೀಲೆ. ಹೌದು ಸೃಷ್ಟಿಯಲ್ಲಿ ಎಲ್ಲರೂ ಸನ್ಯಾಸಿಗಳಾಗಲು ಸಾಧ್ಯವಿಲ್ಲ ಎನ್ನುವ ಅರ್ಥದಲ್ಲಿ ಸಾಗುವ ಈ ಕತೆ ಸನ್ಯಾಸವೆಂದರದು ಬದುಕಿನಲ್ಲಿರುವ ಜವಾಬ್ದಾರಿಯನ್ನು ಕಳಚಿಕೊಳ್ಳುವುದಲ್ಲ ಎನ್ನುವುದನ್ನು ಸಾರುತ್ತದೆ. ಇದರ ಮುಂದಿನ ಕತೆ ‘ಕ್ರಿಸ್ತನಲ್ಲ ಪಾದ್ರಿಯ ಮಗಳ’ ಎನ್ನುವ ಕತೆಯು ಕೊಂಚ ವಿಭಿನ್ನವಾದ ನೆಲೆಯಲ್ಲಿ ಸಾಗುತ್ತದೆ. ಸ್ವತಂತ್ರ್ಯನಂತರ ಭಾರತದ ಮೇಲೆ ಕ್ರಿಶ್ಚಿಯನ್ನರ ಪ್ರಭಾವ ಸಾಕಷ್ಟು ಆಗು ದಲಿತರೆಲ್ಲ ಕ್ರಿಸ್ತ ಧರ್ಮದ ಕಡೆಗೆ ವಾಲುತ್ತಿದ್ದರು. ಇದನ್ನು ತಡೆಯಲೆಂದೆ ಕೆಲವರು ಕಂಕಣ ಬದ್ಧರಾಗಿ. ಹಿಂದೂ ಧರ್ಮದ ಮತ್ವದ ಕುರಿತು ಸಾರಲು ಶುರು ಮಾಡಿದ್ದರು. ವೀರ ಸನ್ಯಾಸಿ, ಸಮಾಜ ಸುಧಾರಕನಾಗಿ ದೇಶ ಸೇವೆಗೆ ನಿಲ್ಲಬೇಕಾದ ವ್ಯಕ್ತಿ ಹೇಗೆ ವಿನಾಶದ ಅಂಚಿಗೆ ಬಂದು ತಲಪಿದನು ಎನ್ನುವುದನ್ನು ಈ ಕತೆ ಸಾರುತ್ತದೆ. ಹೌದು ಇಲ್ಲಿ ಕೈಸ್ತ ಧರ್ಮವನ್ನು ವಿರೋದಿಸುತ್ತಿದ್ದ ಒಬ್ಬನನ್ನು ಪಾದ್ರಿ ತನ್ನ ಮಗಳ ಸೌಂದರ್ಯದ ಮೂಲಕ ಅವನನ್ನು ಸೆರೆಹಿಡಿಯುವಂತೆ ಮಾಡಿ ಅವನು ಆಸ್ತಿ, ಹಣ, ಹೆಸರು ಎಲ್ಲಾ ಪಾದ್ರಿಯ ಮಗಳ ಮೋಹದಲ್ಲಿ ಕಳೆದುಕೊಂಡಾದ ಮೇಲೆ ಪಾದ್ರಯ ಮಗಳು ಇವನನ್ನು ಬಿಟ್ಟು ಬೇರೊಬ್ಬನನ್ನು ಮದುವೆಯಾದಗಲೆ ಇವನಿಗೆ ತನ್ನ ಮಹಾ ತಪ್ಪೊಂದರ ಅರಿವಾಗಿದ್ದು. ಕೆಟ್ಟ ಮೇಲೆ ಬುದ್ದಿಬಂದರೆ ಏನೂ ಪ್ರಯೋಜನ ಹೌದು ಕೆಲವೊಂದು ಸಾರಿ ವಿಧಿ ನಮ್ಮ ಬದುಕಿನಲ್ಲಿ ಯಾವ ರೀತಿಯೆಲ್ಲಾ ಆಟವಾಡುತ್ತದೆ. ಸಾಧನೆಯ ಶಿಖರವೇರಭಯಸುವ ವ್ಯಕ್ತಿಗೆ ಎಷ್ಟೆಲ್ಲಾ ದೃಢ ಸಂಕಲ್ಪ ಇರಬೇಕು ಎನ್ನುವುದರ ಮೇಲೆ ಈ ಕತೆ ಬೆಳಕು ಚಲ್ಲುತ್ತದೆ. 
(ಮುಂದುವರಿಯುವುದು..)
- ಶ್ರೀಮತಿ ಗಿರಿಜಾ ಮಾಲಿ ಪಾಟೀಲ್ ಸಂಸ್ಥಾಪಕ ಅಧ್ಯಕ್ಷರು ಶ್ರೀ ಸಿದ್ದೇಶ್ವರ ಸಾಹಿತ್ಯ ವೇದಿಕೆ, ಕರ್ನಾಟಕ.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಸಾಧನೆಗೆ ವಯಸ್ಸು ಮುಖ್ಯವಲ್ಲ, ಪ್ರಾಮಾಣಿಕ ಪ್ರಯತ್ನ ಮುಖ್ಯ..

ಸಾಧನೆಗೆ ವಯಸ್ಸು ಮುಖ್ಯವಲ್ಲ, ಪ್ರಾಮಾಣಿಕ ಪ್ರಯತ್ನ ಮುಖ್ಯ...  ಭೂಮಿಯ ಮೇಲೆ ಹುಟ್ಟಿರುವ ಪ್ರತಿಯೊಬ್ಬ ವ್ಯಕ್ತಿಯೂ ಕೂಡ ಒಂದಲ್ಲ ಒಂದು ರೀತಿಯಲ್ಲಿ ಸಾಧನೆ ಮಾಡಬೇಕೆಂಬ ಹಂ...