ಭಾನುವಾರ, ಜುಲೈ 25, 2021

ಪ್ರೀತಿಯ ಹರಕೆ (ಕವಿತೆ) - ಸೋಮಶೇಖರ.ಹ.ರಾಂಪೂರ.

ಪ್ರೀತಿಯ ಹರಕೆ

ಎನ-ಮನವು ತಣಿಯುತಿದೆ
ತನ್ನ-ತನವು ಕುಣಿಯುತಿದೆ
ಭಾವ-ಭಾವದಲ್ಲಿ ಅರಳಿದೆ
ಜಗ-ಮಗ ಹೊಳಿಯುತಿದೆ!

ನಿನ್ನ ನೆನೆಯುತಿದೆ ಈ ಹೃದಯ
ಬೆಸೆಯುತಿದೆ ನಿನ್ನೆ ಬೇಡುತಿದೇ
ಕಂಡ ಕ್ಷಣದೀ ಉಲ್ಕೆಯಾಗಿದೆ
ನೀನಾಗು ಬೆಳ್ಳಿಯ ತಾರೇಯೇ!

ಚೆಲುವಿ ನೀನಿಲ್ಲದ ಹೂದೋಟ
ಖಾಲಿಯ ಪಾತ್ರೆಯ ಬಾಡೂಟ
ನೀ ಕಾಣುವ ಹಂಬಲದ ನೋಟ
ಚುಂಬಿದ ಮನ ನಿನ್ನಯ ಮಾಟ

ನಿನ್ನ ನಾ ಕಾಣುವ ಮಹಾದಾಸೇ
ನೀ ಈ ರತಿಯ ಭಾಂಧವ್ಯಕ್ಕೆಗೆ
ಬೆಳದಿಂಗಳದಿ ಮುಂಗುರುಳೆ
ಒಪ್ಪಿಗೆಯ ಸೂಚಿಸುವೇಯಾ?

ಕಾಣದ ಕವಿ-ಭಾವದ ಪ್ರೀತಿಗೆ
ಬಂಗಾರ-ಸಿಂಗಾರದ ಚೆಲುವೇ
ಹೃದಯಕ್ಕೆ ಸಮೀಪವಾಗುವೇ
ನಿನ್ನ ತನು-ಮನವ ಸಂತೈಸುವೇ!

- ಸೋಮಶೇಖರ.ಹ.ರಾಂಪೂರ ಸಹ ಶಿಕ್ಷಕರು ವಿಜಯಪೂರ ಜಿಲ್ಲೆ.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಸಾಧನೆಗೆ ವಯಸ್ಸು ಮುಖ್ಯವಲ್ಲ, ಪ್ರಾಮಾಣಿಕ ಪ್ರಯತ್ನ ಮುಖ್ಯ..

ಸಾಧನೆಗೆ ವಯಸ್ಸು ಮುಖ್ಯವಲ್ಲ, ಪ್ರಾಮಾಣಿಕ ಪ್ರಯತ್ನ ಮುಖ್ಯ...  ಭೂಮಿಯ ಮೇಲೆ ಹುಟ್ಟಿರುವ ಪ್ರತಿಯೊಬ್ಬ ವ್ಯಕ್ತಿಯೂ ಕೂಡ ಒಂದಲ್ಲ ಒಂದು ರೀತಿಯಲ್ಲಿ ಸಾಧನೆ ಮಾಡಬೇಕೆಂಬ ಹಂ...