ಶನಿವಾರ, ಜುಲೈ 24, 2021

ಬಡತನ (ಕವಿತೆ) - ಪುರುಷೋತ್ತಮ ಪೆಮ್ನಳ್ಳಿ.

ಬಡತನ

ಹಸಿದ ಒಡಲಿಗೆ ಅನ್ನದ ಹಂಬಲ 
ಮಾನದ ರಕ್ಷೆಗೆ ಉಡುಪಿನ ಬೆಂಬಲ
ಬಯಸಿದೆ ತನುವದು ಖುಷಿಯ ಸೆಳೆತ
ಬಡತನವೆಂಬುದು ನರಕದ ಮೆರೆತ...

ತಂದೆಯ ಹೆಗಲಲಿ ಮಗುವ ನೋವು
ತಾಯಿಯ ಮನದಲಿ ಭಯದ ಸಾವು
ಬದುಕಿನ ಭರವಸೆ ಮರೆತಂತಾಗಿದೆ
ಸುಂದರ ಕನಸ ಕನಸಲೆ ಉಳಿಸಿದೆ...

ಬೆಂದು ಬೆಂದು ಬಳಲಿದೆ ದೇಹವೇ
ಕರಗುವುದೆಂದು ಬಾಳಿನ  ನೋವೆ
ಗುಡಿಸಲೇ ಅರಮನೆ ಅಲ್ಲಿ ನೋಡು 
ಸೂರ್ಯ ಚಂದ್ರರೇ ಬೆಳಕಿಗೆ ಪಾಡು...

ಜ್ಞಾನವ ಬಯಸಿದೆ ಮಗುವಿನ ಮನವು
ಆಸೆಯು ತೀರದು ಇರದೆ ಧನವು
ಕಾಲದ ಚಕ್ರವ ಎದುರು ನೋಡುತ
ಜೀವನ ಸಾಗಿದೆ ಬಡತನದಿ ಬೇಯುತ....

- ಪುರುಷೋತ್ತಮ ಪೆಮ್ನಳ್ಳಿ
ಪಾವಗಡ ತಾ ತುಮಕೂರು ಜಿ
ದೂ.೯೬೩೨೨೯೬೮೦೯.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಸಾಧನೆಗೆ ವಯಸ್ಸು ಮುಖ್ಯವಲ್ಲ, ಪ್ರಾಮಾಣಿಕ ಪ್ರಯತ್ನ ಮುಖ್ಯ..

ಸಾಧನೆಗೆ ವಯಸ್ಸು ಮುಖ್ಯವಲ್ಲ, ಪ್ರಾಮಾಣಿಕ ಪ್ರಯತ್ನ ಮುಖ್ಯ...  ಭೂಮಿಯ ಮೇಲೆ ಹುಟ್ಟಿರುವ ಪ್ರತಿಯೊಬ್ಬ ವ್ಯಕ್ತಿಯೂ ಕೂಡ ಒಂದಲ್ಲ ಒಂದು ರೀತಿಯಲ್ಲಿ ಸಾಧನೆ ಮಾಡಬೇಕೆಂಬ ಹಂ...