ಮಂಗಳವಾರ, ಆಗಸ್ಟ್ 3, 2021

" ಸ್ವಾತಂತ್ರ್ಯ ಗೀತೆ " (ಕವಿತೆ) - ಶ್ರೀ ಅಂಬರೀಶ್ ನಾಯ್ಕೋಡಿ.

" ಸ್ವಾತಂತ್ರ್ಯ ಗೀತೆ "

ಪುಣ್ಯಭೂಮಿ,
ಭರತ ಭೂಮಿ,
ನನ್ನ ಜನ್ಮ ಭೂಮಿ,
ತೀರ್ಥಕ್ಷೇತ್ರಕ್ಕೆ ಹೆಸರಾಯಿತು ನನ್ನ ಈ ತಾಯಿ ಭೂಮಿ.

ನೋಡು ನೋಡು ಬಾವುಟ,
ಬಾನೆತ್ತರಕ್ಕೆ ಹಾರುತ್ತಿದೆ ಪಟಪಟ.
ಕೇಸರಿ, ಬಿಳಿ, ಹಸಿರು,
ಆಯಿತು ಭಾರತೀಯರ ಉಸಿರು.

ನಮ್ಮನ್ನು ಆಳಿತು ಕೆಂಪು ಕೋತಿಗಳು ಸರ್ಕಾರ,
ಆದರೂ ಹೆದರಲಿಲ್ಲ ನಮ್ಮ ಸರದಾರ.
ಕ್ರಾಂತಿಯ ಕಿಚ್ಚು ಹಚ್ಚಿದರು ಸಾವರಕರ,
ಅದನ್ನು ಬೆಳಗಿದರು ನಮ್ಮ ಚಂದ್ರಶೇಖರ. 

ಪರಕೀಯರಿಂದ ಮುಕ್ತವಾಯಿತು ಆಗಸ್ಟನಲ್ಲಿ,
ಏನೋ ಒಂದು ಖುಷಿ ದೇಶದ ಜನರಲ್ಲಿ.
ಬೇಡಿಕೊಂಡರು ಆ ದೇವರಲ್ಲಿ
ಮತ್ತೆ ಈ ಸ್ಥಿತಿ ಬರಬಾರದು ದೇಶದಲ್ಲಿ.

ಸ್ವಾತಂತ್ರ ಪಡೆದ ನಾಡಾಯಿತು ಭಾರತ
ಹಗಲು-ರಾತ್ರಿ ಹೋರಾಡಿದನು ಗಾಂಧಿ ತಾತ
ಹೇಗೆ ತೀರಿಸುವುದು ನಿಮ್ಮ ಉಪಕಾರ
ಭಾರತದ ಜನತೆ ಹಾಕುತ್ತಿದೆ ಜಯಕಾರ...

       - ಅಂಬರೀಶ್ ನಾಯ್ಕೋಡಿ.
ಎಸ್. ಬಿಐ. ಕಲಾ ಮತ್ತು ಕೆ.ಸಿ.ಪಿ ವಿಜ್ಞಾನ ಮಹಾವಿದ್ಯಾಲಯ ವಿಜಯಪುರ...



(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...