ಅಪ್ಪ
ಈವೊಂದು ಪದದಲ್ಲಿಹುದು
ಗ್ರಹಗಲನೊಳಗೊಂಡ ಬ್ರಹ್ಮಾಂಡವೆ .
ಅವರ ನಂಬಿ ಬದುಕುತಿರುವರ್
ನಾವು ಗ್ರಹಗಳೆ ..
ತಾಯಿ ಜನ್ಮವ ನೀಡಿದರೆ
ತಂದೆ ಜೀವನವನ್ನೇ ಕೊಟ್ಟರ್
ತಾಯಿ ಬಾಷೆಯ ನುಡಿಯಲ್ ಹೇಳಿಕೊಟ್ಟಲ್ ತಂದೆ ಅದನ್ನ ಉಪಯೋಗಿಸುವ
ಬಗೆಯ ತಿಳಿಸುವರ್ ..
ಅಪ್ಪನಿಲ್ಲದ ಮನೆ
ನೆರಳಿಲ್ಲದ ಮರದಂತೆ
ಆ ಮನೆಯಲ್ಲಿ ಸಂಸ್ಕೃತಿಯೇ ತಪ್ಪಿ ಹೋಗುವಂತಾಗುವುದು
ಅಪ್ಪನಿದ್ದರೆ ನಿಲಯದೊಳ್
ಸಧಾ ನೆಲೆಸಿರುವುದು
ಧೈರ್ಯ ,ವಿಶ್ವಾಸ
ಸರಿ ದಾರಿಯಲ್ ಸೇರುವಂತಾಗುವುದು
ಅಪ್ಪನಿಲ್ಲದೆ ಹೋದರೆ
ಬದುಕೆಂಬುದು ರೈಲು ತಪ್ಪಿದ ಅಳಿಯಂತಾಗುವುದು
ಅಪ್ಪನ ಹಿತ ವಚನಗಳಿದ್ದಲ್ಲಿ
ಬದುಕಾಗುವುದು
ಗುಡಿಯ ಸೇರಿದ
ವಿಗ್ರಹ ಅಪ್ಪನ ಸ್ಥಾನವ ಬೇರಾರು ತುಂಬಲಾರರು
ಸಧಾ ನಿಸ್ವಾರ್ಥಿ ಪ್ರೀತಿಯು ಬೆಲೆಕಟ್ಟಲಾಗದು
ಅಪ್ಪನ ಪ್ರೀತಿಯೇ
ಅದ್ಭುತ ನೆರಳಿನ ರೀತಿಯಲ್ಲಿ ಸಧಾ ಕಾಪಾಡುತ್ತಿರುವುದ್
ಅಪ್ಪನ ಆಧಾರವೇ
ಮಕ್ಕಳ ಮುಂದಿನ ಬದುಕು ನಿನ್ನೀ ಪ್ರೀತಿಗೆ ಯಾರು ಸರಿಸಾಟಿಯಿಲ್ಲ ನಿನ್ನ ಮೀರಿಸುವರಾರಿಲ್ಲ ಅಪ್ಪ
- ಅಕ್ಷತಾ. ಎಸ್.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ