ಬುಧವಾರ, ಆಗಸ್ಟ್ 11, 2021

ಹಲಗಲಿಯ ಬೇಡರು ( ಕವಿತೆ) - ಶ್ರೀಧರ ಗಸ್ತಿ ಧಾರವಾಡ.

ಹಲಗಲಿಯ ಬೇಡರು

ಸುಟ್ಟುಬೂದಿಯಾದರೂ ಕುಗ್ಗಲಿಲ್ಲ ವೀರರು
ಸ್ವಾತಂತ್ರ್ಯದ ಕಹಳೆಗೆ ಮುನ್ನುಡಿಯ ಬರೆದರು
ಭಾರತೀಯರ ಹೃದಯದಲಿ ಅಚ್ಚಳಿಯದೇ ಉಳಿದರು
ಇತಿಹಾಸವ ಬರೆದರು ಹಲಗಲಿಯ ಬೇಡರು

ಶಸ್ತೃರಹಿತ ಮಾಡುವುದು ಬ್ರಿಟೀಷರ ಇಂಗಿತ
ದೌರ್ಬಲ್ಯವ ಹೆಚ್ಚಿಸೋದು ಮನದಾಳದ ತುಡಿತ
ಶಾಸನವ ಮಾಡಿದರು ಬಂಡಾಯ ಹತ್ತಿಕ್ಕುತ
ಪ್ರತಿರೋಧವ ಮಾಡಿದರು ಬೇಡರೆಲ್ಲ ಕೂಡುತ

ಶಸ್ತ್ರ ವಿದ್ಯೆ ನಮ್ಮ ಆಜನ್ಮ ಕುಲದೈವ ವೆಂದು
ಆವೇಶದ ಕಿಚ್ಚಿನಿಂದ ಸುಟ್ಟಾಕಿತು ವೈರಿಪಡೆ
ಗತಿಕಾಣದೇ ಬ್ರಿಟೀಷರು ಕುತಂತ್ರವ ಮೆರೆದರು
ಅಮಾಯಕ ಬೇಡರನು ಬೆಂಕಿಯಲಿ ಸುಟ್ಟರು

ಹೊರಗೆ ಬರಲಾರದೇ ಪ್ರತಿರೋಧ ಒಡ್ಡಿದರು
ಭರತ ಮಾತೆಗೆ ಜೈ ಎನ್ನುತ ಪ್ರಾಣಬಲಿ ನೀಡಿದರು
ಹೆದರಿದರು ಬೆದರಿದರು ಭಾರತೀಯರ ದಿಟ್ಟತನಕೆ
ನಮಗಿನ್ನು ಉಳಿವಿಲ್ಲ ಎಂಬುದನು ಅರಿತರು

ಹೋರಾಟದ ಕಿಚ್ಚಿಗೆ ಆದದ್ದೆಲ್ಲ ಒಳಿತೆ ಆಯಿತು
ಬ್ರಿಟೀಷರ ಅಧಿಕಾರ ಪ್ರತಿಭಟಿಸಿ ನಿಲ್ಲಲು
ಪ್ರತಿಯೊಬ್ಬ ಭಾರತೀಯ ಪಾಠ ಕಲಿತಾಯಿತು
ಸ್ವಾತಂತ್ರ್ಯದ ಚಳುವಳಿಗೆ ಪೀಠಿಕೆಯೇ ಅಯಿತು

✍ ಶ್ರೀಧರ ಗಸ್ತಿ ಧಾರವಾಡ.



(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...