೧)
ಮಾನವನ ಮನವೆಂಬುದು ದೊಡ್ಡ ಬುಟ್ಟಿ ಇದ್ದಂತೆ. ಅದರಲ್ಲಿ ಅವನು ಮಲ್ಲಿಗೆ ತುಂಬಿಕೊಳ್ಳುವ ನೋ ಅಥವಾ ಮಾಲಿನ್ಯ ತುಂಬಿಕೊಳ್ಳುವನೋ ಅವರ ಅಭಿರುಚಿಗೆ ಬಿಟ್ಟದ್ದು.
ಮಾನವನ ಮನದಲ್ಲಿ
ಒಳ್ಳೆಯದು ಹುಟ್ಟುತ್ತದೆ
ಕೆಟ್ಟದ್ದು ಹುಟ್ಟುತ್ತದೆ.
ಒಳ್ಳೆಯದನ್ನು ಉಳಿಸಿಕೊಂಡರೆ ಉದ್ಧಾರವಾಗುತ್ತಾನೆ. ಕೆಟ್ಟದ್ದನ್ನು ಇಟ್ಟುಕೊಂಡರೆ ಬಿಟ್ಟು ಹೋಗುತ್ತಾನೆ.
೨)
ಪುಸ್ತಕದ ಓದಿನಿಂದ ಪುರುಷಾರ್ಥವಿದೆ ಎನ್ನುವವರಿದ್ದಾರೆ. ಓದುವ ಹವ್ಯಾಸ ಉಳ್ಳವರೊಂದಿಗೆ ವ್ಯವಹರಿಸಿದಾಗ ತಿಳಿಯುತ್ತದೆ. ಅವರ ವ್ಯಕ್ತಿತ್ವಕ್ಕೂ ಅವರ ವ್ಯಕ್ತಿತ್ವಕ್ಕೂ ಇರುವ ವ್ಯತ್ಯಾಸ.
ವಿದ್ಯಾವಂತನೂ ವಿನಯವಂತ ನಾದರೆ ವಿಶ್ವವೇ ಅವನಡಿಗೆ ಬಾಗುತ್ತದೆ. ಶ್ರೀಮಂತನ ವಿನಯವಂತ ನಾದರೆ ವಿಶ್ವವೇ ವಿಸ್ಮಯ ಗೊಳ್ಳುತ್ತದೆ.
೩)
ಮಾಡಿದ ಉಪಕಾರಕ್ಕೆ ಕೃತಜ್ಞತೆಯನ್ನು ನಿರೀಕ್ಷಿಸುವುದು ಮೂರ್ಖತನ. ಪಡೆದ ಉಪಕಾರಕ್ಕೆ ಕೃತಜ್ಞತೆಯನ್ನು ಸಲ್ಲಿಸದಿರುವುದು ಧೂರ್ತತನ. ಮಾಡಿದ ಉಪಕಾರವನ್ನು ಕೇಳಿಕೊಂಡು ತಿರುಗುವುದು ಭಂಡತನ.
ಸತ್ಕಾರ್ಯ ಮಾಡಲು ಧಾವಿಸಬೇಕು.
ದುಷ್ಕಾರ್ಯ ಮಾಡಲು ನಿಧಾನಿ ಸಬೇಕು.
ಎಂಬ ಮಾತನ್ನು ಸದಾ ಧ್ಯಾನ ದಲ್ಲಿಡಬೇಕು.
✍️ ಸವಿತಾ ಆರ್ ಅಂಗಡಿ, ಮುಧೋಳ.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ