ಗುರುವಾರ, ಆಗಸ್ಟ್ 5, 2021

ವೀರರಾಣಿ ಚೆನ್ನಮ್ಮ (ಕವಿತೆ) - ಶ್ರೀ ಅಂಬರೀಶ ನಾಯ್ಕೋಡಿ.

ವೀರರಾಣಿ ಚೆನ್ನಮ್ಮ

ಕಿತ್ತೂರು ಚೆನ್ನಮ್ಮ,
ನೀನಾದೆ ಕರುನಾಡಿನ ಅಮ್ಮ.
ರಕ್ಷಿಸಿದಿ ಕಿತ್ತೂರ,
ಕಾಪಾಡಿದಿ ಕರುನಾಡ ಜನರ..!


ನಿನ್ನ ತಂದೆ ಧೂಳಪ್ಪ ದೇಸಾಯಿ
ಚಿಕ್ಕಂದಿನಿಂದಲೇ ಕಲಿಸಿದ ಲಡಾಯಿ.
ಮಾಡಿದಿ ಕುದುರೆ ಸವಾರಿ,
ನೀನು ಇನ್ನೂ ಹದಿನಾರರ ನಾರಿ..!

ನಿನ್ನ ಬಲಗೈ ಬಂಟ ಸಂಗೊಳ್ಳಿ ರಾಯಣ್ಣ
ನೀನಾದಿ ಅವನಿಗೆ ಎರಡು ಕಣ್ಣ.
ಕಾಪಾಡಿದಿ ಕಿತ್ತೂರ ಮಣ್ಣ
ನೀನು ಸ್ವಾಭಿಮಾನದ ಹೆಣ್ಣ..!

ಕಲಿಸಿದಿ ಥ್ಯಾಕರೆಗೆ ಸರಿಯಾದ ಬುದ್ಧಿ,
ಕರುನಾಡಿನಲ್ಲಿ ಆಯಿತು ನಿನ್ನದೇ ಸುದ್ದಿ.
ಸ್ವಾಭಿಮಾನಕ್ಕೆ ಹೆಸರುವಾಸಿ,
ಕಿತ್ತೂರ ಹೆಮ್ಮೆಯ ಈ ನಿವಾಸಿ.......! 

         - ಅಂಬರೀಶ ನಾಯ್ಕೋಡಿ. 


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...