ಚೌಕಾಸಿ ಗುಂಪು
(ಹಾಸ್ಯ ಲೇಖನ)
ಚೌಕಾಸಿ ಮತ್ತು ವ್ಯಾಪಾರ ಎರಡೂ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ವ್ಯಾಪಾರ ಎಂದ ಮೇಲೆ ಚೌಕಾಸಿ ಇರಬೇಕು ಇಲ್ಲವೆಂದರೆ ಅದು ವ್ಯಾಪಾರವೇ ಅಲ್ಲ ಬಿಡಿ. ಅದು ಕೊತ್ತಂಬರಿ ಸೊಪ್ಪು ಇರಲಿ ಅಥವಾ ವರದಕ್ಷಿಣೆ ವಿಚಾರವಿರಲಿ, ಹಣದ ಮಾತುಕತೆ ಇದ್ದ ಕಡೆ "ಚೌಕಾಸಿ" ತನಗೆ ತಾನೇ ಉದ್ಭವಿಸಿರುತ್ತದೆ.
"ಚೌಕಾಸಿ" ಎಂಬುದು ಹೇಗೆ ಬಂತು ಯಾರಿಂದ ಬಂತು ಎಂಬುದನ್ನು ಹೇಳುವುದು ಕಷ್ಟ ಸಾಧ್ಯದ ಮಾತು. ನದಿ ಮೂಲ, ಋಷಿ ಮೂಲಗಳನ್ನು ಹುಡುಕುವುದು ಹೇಗೆ ಕಷ್ಟಕರವಾದ ಹಾಗೆಯೇ "ಚೌಕಾಸಿ "ಮೂಲವನ್ನು ಪತ್ತೆ ಮಾಡುವುದು ಲಾಭವಿಲ್ಲದ ಕೆಲಸ. ಒಂದು ಊಹೆ ಪ್ರಕಾರ ಮನುಷ್ಯನಿಗೆ ಯಾವಾಗ ವ್ಯಾವಹರ ಜ್ಞಾನ ಬಂದಾಗ "ಚೌಕಾಸಿ" ಬಂದಿದೆ ಎಂದು ಹೇಳಬಹುದು.
"ಚೌಕಾಸಿಗೆ" ಸಂಬಂಧಪಟ್ಟಂತೆ ಜನರನ್ನು ಎರಡು ಗುಂಪುಗಳಾಗಿ ಮಾಡಬಹುದು . ಮೊದಲನೇ ಗುಂಪು :- ಕೆಲವರಿಗೆ ಚೌಕಾಸಿ ಮಾಡುವುದೆಂದರೆ ಶುದ್ಧ ಅವಮಾನದ ಕೆಲಸ. ಅದು ಅವರ ಪ್ರೆಸ್ಟೀಜ್ ಗೆ ಬಹಳ ಕಡಿಮೆ. ವ್ಯಾಪಾರಿ ಕೇಳಿದಷ್ಟು ಹಣವನ್ನು ಕೊಟ್ಟು ಬರುವುದು ಅವರ ಜಾಯಮಾನ. ಆದರೆ ಈ ಗುಂಪಿನ ಜನ ಮನೆಗೆ ಬಂದ ಮೇಲೆ ಮನೆಯಾಕೆಯಿಂದ ಹೀನಾಮಾನ ಬೈಸಿಕೊಳ್ಳುವುದಂತು ಖಚಿತ. ಬಹುಶಃ ಇದರಲ್ಲಿ ಪುರುಷರು ಹೆಚ್ಚಾಗಿ ಇರುವುದುಂಟು.
"ಇನ್ನು ಎರಡನೇ ಗುಂಪಿನ ಜನ" :- ಎಂದರೆ ಚೌಕಾಸಿ ಇಲ್ಲದೆ ವ್ಯಾಪಾರ ಮಾಡದವರು. ಇವರಿಗೆ ಚೌಕಾಸಿ ಮಾಡದೆ ಇದ್ದರೆ ತಿಂದ ಅನ್ನ ಮೈಗೆ ಹತ್ತುವುದಿಲ್ಲ. ಹತ್ತಲ್ಲ ಇಪ್ಪತ್ತು ಅಂಗಡಿಗಳನ್ನಾದರೂ ತಿರುಗಿ, ಎಲ್ಲಿ ಕಡಿಮೆ ಬೆಲೆಗೆ ತಮ್ಮ ವಸ್ತು ದೊರಕುತ್ತದೆ ಅಲ್ಲಿ ಕೊಳ್ಳುವ ಮಂದಿ ಇವರು ಬಹುಶಃ ಇದರಲ್ಲಿ ಮಹಿಳೆಯರು ಸಿಂಹಪಾಲು ಪಡೆದಿರುತ್ತಾರೆ. ಇವರು ಕಾಶಿಗೆ ಹೋದರೂ ಚೌಕಾಸಿ ಮಾತ್ರ ಬಿಡುವುದಿಲ್ಲ .ವ್ಯಾಪಾರ ಹೇಗೆ ಒಂದು ಕಲೆಯೋ ಹಾಗೆಯೇ ಚೌಕಾಸಿಯೂ ಸಹ ಒಂದು ಕಲೆ. ಎಲ್ಲರಿಗೂ ಚೌಕಾಸಿ ಮಾಡಲು ಬರುವುದಿಲ್ಲ. ಎಷೋ ಜನ ಚೌಕಾಸಿ ಮಾಡಲು ಹೋಗಿ ಬೈಸಿಕೊಳ್ಳುವುದುಂಟು. ಅದರಲ್ಲೂ ವ್ಯಾಪಾರಿ ಏನಾದರೂ ಹೆಂಗಸಾದರೆ ಮುಗಿಯಿತು ಕತೆ ಒಂದು ರೀತಿಯ ಯುದ್ಧವೆ ಆಗಿಹೋಗುವುದು.
ಇಬ್ಬರೂ ಹೆಂಗಸರಾದರೆ (ವ್ಯಾಪಾರಿ ಮತ್ತು ಕೊಳ್ಳುವವರು) ಜಗಳ ಸ್ವಾರಸ್ಯಕರವಾಗಿರುತ್ತೆ. ಒಂದು ಘಟನೆ ಹೇಳುವುದಾದರೆ ಒಂದು ದಿನ ಬೆಳಿಗ್ಗಿನ ಜವಾ ಮೀನಿನ ವ್ಯಾಪಾರಿ ತಾಂಡದ ಬೀದಿಗೆ ಬಂದಾಗ ಎಲ್ಲಾರೂ ಕೊಳ್ಳಲು ಬಂದರು ಆಗ ಅಮ್ಮನು ಬಂದು ವ್ಯಾಪಾರ ಮಾಡಲು ಬೆಲೆ ಕೇಳಿದರು ಕೆ. ಜಿ 120 ಎಂದು ಹೇಳಿದಾಗ ಅಮ್ಮ ತಮ್ಮ ಚೌಕಾಸಿ ವರಸೆ ಪ್ರಾರಂಭಿಸಿದರು ನೇರವಾಗಿ ಅರ್ಧಕ್ಕೆ 70ಕ್ಕೆ ಕೇಳಿದ್ರು ಇದರಿಂದ ವ್ಯಾಪಾರಿ ಕೆರಳಿ ಕೆಂಡವಾಗಿ ಉಚಿತವಾಗಿ ಕೊಡ್ತೀನಿ ಎಂದು ರೇಗಿದ ನಂತರ ಅದು ಸರಿಯಿಲ್ಲ ಇದು ಸರಿಯಾಗಿ ಇಲ್ಲ ಎಂದು ಚೌಕಾಸಿಯಾಗಿ ಕೊನೆಗೆ 90ಕ್ಕೆ (ರೂಪಾಯಿಗೆ) ಕೊಟ್ಟ .ಇದು ಮಹಿಳೆಯರ ವ್ಯಾಪಾರದ ಲಕ್ಷಣ ಎಂದು ನಮ್ಮನ್ನು ಹೇಳಿದರು .ನಾವು ದೇವರಾಣೆಗೂ ಈ ರೀತಿಯಲ್ಲಿ ಚೌಕಾಸಿ ಮಾಡ್ತಿರಲಿಲ್ಲ ಎಂದು ಕೊಂಡು ಸುಮ್ಮನಾದೆ.
ಅದರಲೂ ನೀವು ಮಾರುಕಟ್ಟೆಯಲ್ಲಿ ಹೂ,ಹಣ್ಣು,ಎಲೆ.ತರಕಾರಿ,ಮುಂತಾದವು ಮಾಡುವ ಹೆಂಗಸರ ಬಳಿ ವ್ಯಾಪಾರ ಅಥವಾ ಚೌಕಾಸಿ ಮಾಡುವುದು ತುಂಬಾ ಕಷ್ಟದ ಸಂಗತಿಯೇ ಸರಿ.
ಈ ರೀತಿಯ ಚೌಕಾಸಿ ದಾಳಿಗೆ ವ್ಯಾಪಾರಸ್ಥರು ಒಂದು ಉಪಾಯ ಮಾಡಿದ್ದಾರೆ ಅದು ಏನೆಂದರೆ ತಮ್ಮ ಅಂಗಡಿಯಲ್ಲಿ "Fixed price " no bargaining "ಎಂದು ಸೂಚನ ಫಲಕದಂತೆ ಹಾಕಿರುತ್ತಾರೆ. ಮತ್ತೆ ಕೆಲವು ಅಂಗಡಿಗಳಲ್ಲಿ "fixed price -sorry"
"no bargaining -thanks "ಎಂದು ಹಾಸ್ಯಮಯವಾಗಿ ಹಾಕಿಸಿಕೊಂಡಿರುತ್ತಾರೆ ಇದನ್ನು ನೋಡಿದರೆ ಚೌಕಾಸಿಯಿಂದ ಎಷ್ಟೂ ನೊಂದಿರಬಹುದು ಎಂದು ನೋಡಬಹುದು.
ಇಂಥಹ ಎಷ್ಟೇ ಫಲಕಗಳನ್ನು ಹಾಕಿದರು ಚೌಕಾಸಿ ಮಂದಿ ಮಾತ್ರ ತಮ್ಮ ಚೌಕಾಸಿ ಮನೋಭಾವವನ್ನು ಬಿಡುವುದಿಲ್ಲ ಅದು ಒಂದು ವಿದ್ಯೆಯೇ ಸರಿ. ಸಾಮಾನ್ಯವಾಗಿ 90ಶೇ ಮಹಿಳೆಯರು ಚೌಕಾಸಿ ಗುಣ ಹೊಂದಿರುತ್ತಾರೆ. 10ಶೇ ಪುರುಷರಲ್ಲಿ ಚೌಕಾಸಿ ಗುಣ ನೋಡಬಹುದು. ಒಟ್ಟಾರೆ ಇದೊಂದು ಪ್ರಾಚೀನ ಕಲೆ ಇದನ್ನು ಉಳಿಸಿ ಬೆಳೆಸಿಕೊಂಡು ಹೋಗಬೇಕಾಗಿ ತಮ್ಮಲ್ಲಿ ವಿನಃತಿ.
- ಮೋಹನ್ ಪ್ರಸಾದ. ಎಸ್.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ