ಗುರುವಾರ, ಆಗಸ್ಟ್ 5, 2021

ಶಿಕ್ಷಣ (ಕವಿತೆ) - ಶ್ರೀ ಧ್ಯಾಮ್ ರಾಜ್.ವಾಯ್ಹ್. ಸಿಂದೋಗಿ.

ಶಿಕ್ಷಣ

ಶಿಕ್ಷಣ ಜೀವನ ಮೌಲ್ಯವ ತಿಳಿಸಿ
ನಕ್ಕಿದೆ ಕುಕ್ಕುವ ಜ್ಞಾನವ ಬೆಳೆಸಿ
ಸಂಸ್ಕಾರದ ಆಚಾರ ವಿಚಾರ ಉಳಿಸಿ
ಒಳ್ಳೆಯ ತನುಮನದಿ ಹರಸಿ ಹಾರೈಸಿ//

ಹಳೆದು ಹೊಸದು ಕಳೆದು
ಅಳಿದು ಉಳಿದು ತಿಳಿದು
ಬಾಳಿದೆ ಬೆಳೆದೆ ನಲಿದು//

ನಾನು ನೀನು ಮರೆತೆ
ನಾವು ನೀವು ಕಲಿತೆ
ಎಲ್ಲರೂ ಒಂದೇ ಎನುತೆ//

ಜೀವನ ಭಾವನ ನಂದನ
ಗಾಯನ ಚಿಂತನ ನವಿನ
ತಿಳಿಸಿತು ಗುರುವಿನ ಭವನ//

ಜೊತೆಗೆ  ಶಿಕ್ಷಣ ತುಸು ಅಹಂ ತರಿಸಿ
ಬಂಧು ಬಳಗ ದೂರವೆ ಇರಿಸಿ
ಒಂಟಿತನವೆ ಸುಂದರ ಎನಿಸಿ
ಮೆರೆಯುತ್ತಿದೆ ಶಿಕ್ಷಣ ಸತ್ಯ ನ್ಯಾಯ ಧರ್ಮವ ಮರೆಸಿ//

- ಧ್ಯಾಮ್ ರಾಜ್.ವಾಯ್ಹ್. ಸಿಂದೋಗಿ. ಸಾ!ಭೈರಾಪೂರ, ತಾ!ಜಿ!!ಕೊಪ್ಪಳ.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)



ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...