ಮಂಗಳವಾರ, ಅಕ್ಟೋಬರ್ 12, 2021

ಪುನರ್ಜನ್ಮ (ಸಣ್ಣ ಕತೆ) - ಭವ್ಯ ಟಿ. ಎಸ್. ಶಿಕ್ಷಕರು. - ಹೊಸನಗರ.


ಪುನರ್ಜನ್ಮ

ಸುಮಿತ್ರಾಳಿಗೆ ಇಂದು ಎಲ್ಲಿಲ್ಲದ ಸಂಭ್ರಮ. ಸೈನಿಕ
ವೀರಪುತ್ರ ಆಕಾಶ್ ನಿಂದ ಒಂದು ವಾರದ ನಂತರ
ಕರೆ ಬಂದಿತ್ತು. ಇನ್ನು ಹದಿನೈದು ದಿನದಲ್ಲಿ ತನ್ನ
ಪತ್ನಿಯ ಹೆರಿಗೆ ದಿನಕ್ಕೆ ಸರಿಯಾಗಿ ರಜೆ ಪಡೆದು
ಊರಿಗೆ ಬರುವೆನೆಂದು ತಿಳಿಸಿದ್ದನು.ಹೆರಿಗೆಗೆಂದು
ತವರಿಗೆ ತೆರಳಿದ್ದ ಪತ್ನಿ ಉಷಾ ಕೂಡ ಈ ವಿಷಯ
ಕೇಳಿ ಸಂಭ್ರಮಿಸಿದ್ದಳು.

ಕುಟುಂಬದವರೊಂದಿಗೆ ಬಹುದಿನಗಳ
ನಂತರದ ಮಾತುಕತೆಯ ಸಂತಸದಲ್ಲಿದ್ದ ಆಕಾಶ್
ಮೊಬೈಲ್ ಪಕ್ಕದಲ್ಲಿಡುತ್ತಿದ್ದಂತೆ ಹೊರಗೆ ಗುಂಡಿನ
ಮೊರೆತ.ಪಹರೆಯಲ್ಲಿದ್ದ ಸೈನಿಕರಿಗೆ ಸನ್ನದ್ಧರಾಗಲು
ಆದೇಶ ಬಂದಿತು.ಕಳೆದ ವಾರದಿಂದ ವೈರಿಸೈನಿಕರು
ನಡೆಸುತ್ತಿದ್ದ ಪಿತೂರಿ ಇಂದು ಸ್ಫೋಟಗೊಂಡಿತ್ತು.
ಈಗಾಗಲೇ ಇಬ್ಬರು ವೀರಯೋಧರನ್ನು ಶತ್ರುಗಳು
ಬಲಿತೆಗೆದುಕೊಂಡಿದ್ದರು.ಹಿಮಪಾತವೂ ಜೋರಾಗಿತ್ತು.
ಆದರೂ ಧೃತಿಗೆಡದ ವೀರಯೋಧರು ವೈರಿಗಳ
ಬೆನ್ನಟ್ಟಿ ಹೋರಾಡಿದರು.ಆಕಾಶ್ ಹಿಮದಲ್ಲಿ ಸಿಕ್ಕಿ
ಕೊಳ್ಳುತ್ತಿದ್ದ ತನ್ನ ಕಾಲುಗಳನ್ನು ಎತ್ತಿ ಹಾಕುತ್ತಾ
ಮುನ್ನುಗ್ಗಿ ಶತ್ರುಪಡೆಯ ಮೇಲೆರಗಿ ಗುಂಡಿನ
ದಾಳಿ ನಡೆಸಿ ಮೂವರು ಸೈನಿಕರನ್ನು ಮಣಿಸಿದನು.
ಈ ಹೋರಾಟದಲ್ಲಿ ಅವನ ಎದೆಭಾಗಕ್ಕೆ ಗುಂಡು
ತಗಲಿತು.ಪ್ರಜ್ಞೆ ತಪ್ಪಿ ಬಿದ್ದವನ ಮೇಲೆ ಹಿಮಪಾತ
ಆರಂಭವಾಯಿತು.ರಕ್ತವು ಹರಿಯತೊಡಗಿತು.
ಶತ್ರುಪಡೆಯ ಬೇಟೆಯಲ್ಲಿ ತಲ್ಲೀನರಾದ ಆಕಾಶ್ ನ
ಮಿತ್ರರು ಕೊರೆಯುವ ಚಳಿಯಲ್ಲಿ ಎಡೆಬಿಡದೆ
ಸುರಿಯುತ್ತಿರುವ ಗುಂಡಿನ ದಾಳಿಗೆ ಕೆಚ್ಚೆದೆಯ
ಪ್ರತ್ಯುತ್ತರ ನೀಡುತ್ತಿದ್ದರು.ಆಕಾಶ್ ಬಿದ್ದ ಪ್ರದೇಶಕ್ಕೆ
ಯೋಧರು ತುಂಬಿದ್ದ ವಾಹನ ಒಂದು ಬಂದಿತು.

ಮಾರ್ಗದಲ್ಲಿ ಯೋಧನ ಸ್ಥಿತಿ ಕಂಡು ತಕ್ಷಣವೇ
ತುರ್ತು ಚಿಕಿತ್ಸೆಗೆ ಕರೆದೊಯ್ಯಲಾಯಿತು.ವೈದ್ಯರು
ಪರೀಕ್ಷೆ ನಡೆಸಿ ಬದುಕುವುದು ಕಷ್ಟ ಕೈಲಾದ ಪ್ರಯತ್ನ
ಮಾಡುತ್ತೇವೆ ಎಂದಿದ್ದರು.ಸತತ ಒಂದು ವಾರ
ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಯೋಧ ಆಕಾಶ್. ಇತ್ತ
ನಮ್ಮ ಸೈನ್ಯ ಪಡೆ ಹಂತಹಂತವಾಗಿ ವೈರಿಗಳನ್ನು
ಹಿಮ್ಮೆಟ್ಟಿಸುತ್ತಲೇ ಸಾಗಿ ಜಯಗಳಿಸಿತು.ಆಸ್ಪತ್ರೆಯಲ್ಲಿ
ಆಕಾಶ್ ನಿಗೆ ಪ್ರಜ್ಞೆ ಮರುಕಳಿಸಿದ ವಿಷಯ ತಿಳಿದು
ಯೋಧರು ಸಂಭ್ರಮಿಸಿದರು.ಈ ವಿಜಯೋತ್ಸವವನ್ನು
ರಾಷ್ಟ್ರಧ್ವಜವನ್ನು ಹಾರಿಸುತ್ತಾ ಭಾರತಾಂಬೆಗೆ
ಜಯಕಾರ ಕೂಗುತಾ ಹಿಮದ ನಡುವೆ ಆಚರಿಸಿದರು.

ಆಕಾಶ್ ಇನ್ನು ಕೆಲವು ದಿನ ಆಸ್ಪತ್ರೆಯಲ್ಲಿ
ಚಿಕಿತ್ಸೆ ಪಡೆಯಬೇಕಾಯಿತು.ತಾನಂದುಕೊಂಡಂತೆ
ತನ್ನ ಮಗುವಿನ ಆಗಮನ ನೋಡಲು ಮನೆಗೆ
ಹೋಗಲು ಸಾಧ್ಯವಾಗಲಿಲ್ಲ.ಇಂದು ಪತ್ನಿ ಉಷಾ
ಮಗುವಿಗೆ ಜನ್ಮ ನೀಡಿದ್ದಾಳೆ.ಪತಿಯ ಧಾರುಣ
ಸ್ಥಿತಿ ಅವಳ ಎದೆಗೆ ಬರಸಿಡಿಲು ಬಡಿದಂತಾಗಿತ್ತು.
ಆತನ ಚೇತರಿಕೆಯ ವಿಷಯ ಸಮಾಧಾನ
ನೀಡಿತು.ದೂರದಿಂದಲೇ ಆಕಾಶ್ ತನ್ನ ಮಗುವಿಗೆ
ಹಾರೈಸಿದ.ಮುಂದೆ ನನ್ನಂತೆಯೇ ಆ ಮಗುವು
ದೇಶ ಕಾಯುವ ವೀರಯೋಧನಾಗಬೇಕೆಂದು
ಆಶಿಸಿದ.

ಹೀಗೆ ಅಸಂಖ್ಯಾತ ವೀರ ಕಟ್ಟಾಳುಗಳು
ತಮ್ಮ ವೈಯಕ್ತಿಕ ಬದುಕಿನ ಆಸೆಗಳನ್ನು ಬದಿಗಿಟ್ಟು
ಭಾರತಾಂಬೆಯ ಮಡಿಲಿನಲ್ಲಿ ತಮ್ಮ ಜೀವ 
ಮುಡಿಪಿಟ್ಟು ದೇಶಕ್ಕಾಗಿಯೇ ಬದುಕುತ್ತಿದ್ದಾರೆ.
ಅವರ ತ್ಯಾಗ ಬಲಿದಾನಗಳನ್ನು ಸ್ಮರಿಸುವುದು
ನಮ್ಮೆಲ್ಲರ ಕರ್ತವ್ಯವಾಗಿದೆ.

ವೀರ ಸೇನಾನಿಗಳಿಗೆ ಜಯವಾಗಲಿ
ಭವ್ಯ ಟಿ.ಎಸ್.
ಶಿಕ್ಷಕರು.ಹೊಸನಗರ
ಶಿವಮೊಗ್ಗ.


( ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...