ಮಂಗಳವಾರ, ಅಕ್ಟೋಬರ್ 12, 2021

ಕರೋನಾ ಹಾಡು (ಕವಿತೆ) - ಗೂಳೇಶ್ ಬಿ ಯಾಗಾಪೂರ.

ಕರೋನ ಹಾಡು

ಕರೋನ ರೋಗ ಮಹ ಮಾರಿ ರೋಗ
ಕಣ್ಣಿಗೆ ಕಾಣದ ಆ ಒಂದು ಜೀವಿ 
|| ಬಂದೊದಗಿತಿಂದು ಭಾರತ ದೇಶದೊಳಿಂದು || ಪ ||

ಕಂಡೂ ಕಾಣರಿಯದೊಂದು
ಎಂದೂ ಕೇಳರಿಯದೊಂದು
ರೋಗವು ಬಂದೊದಗಿತಿಂದು ಭಾರತ 
ಮಾತೆಯ ಮುದ್ದು ಕಂದಮ್ಮಗಳಿಗೆ || ಕರೋನ ರೋಗ ||

ಜಾತಿ, ಧರ್ಮಗಳ ನೋಡದೆ
ಸಮನಾಗಿ ಹಂಚುತ್ತಿರುವುದಿಂದು...
ಆ ಒಂದು ರೋಗ, ಕರೋನ ರೋಗ...|| ಕರೋನ ರೋಗ ||

ಜಗತ್ತಿನ ಮೂಲೆ ಮೂಲೆಗೂ
ಹಬ್ಬುತ್ತಿರುವ ಆ ಒಂದು ರೋಗ
ಮಹ ಮಾರಿ ರೋಗ || ಕರೋನ ರೋಗ ||

ಚಿಕ್ಕ ಮಕ್ಕಳಲ್ಲಿ, ವಯೋವೃದ್ಧರಲ್ಲಿ 
ಆ ಒಂದು ರೋಗ, ಮಹ ಮಾರಿ ರೋಗ
ಹೆಚ್ಚುತ್ತಲಿದೆ ಇಂದು... || ಕರೋನ ರೋಗ ||

ಎಚ್ಚೆತ್ತುಕೊಳ್ಳಿರೋ... ಯುದ್ಧ ಸನ್ನಧರಾಗಿರೋ...
ಆ ಬ್ರಹ್ಮ ಕಳಿಸಿದ ನಿರಾಯುಧ ಜೀವಿಗೆ
ಕರೋನ ಜೀವಿಗೆ, ಮಹ ಮಾರಿ ಜೀವಿಗೆ... || ಕರೋನ ರೋಗ ||

ಪ್ರಕೃತಿ ವಿನಾಶಕನಿಗೆಚ್ಚರಿಸಲೆಂದೇ 
ಆ ಬ್ರಹ್ಮ ಕಳಿಸಿದ ಆ ಒಂದು ಸೂತ್ರ...
ಕರೋನ ಸೂತ್ರ, ಮಹ ಮಾಯಾವಿ ಸೂತ್ರ || ಕರೋನ ರೋಗ ||

ದಿನೆ ದಿನೆ ಹೆಚ್ಚುತ್ತಿರುವ ಆ ವಿಷದ ಅಂಟು
ಪ್ರಕೃತಿ ನಿಯಮವ ಸರಿಪಡಿಸಲೆಂದೆ...
ಧರೆಗಿಳಿದ ಆ ಒಂದು ಅಸ್ತ್ರ, ಕರೋನ ಅಸ್ತ್ರ || ಕರೋನ ರೋಗ ||

ಚೀನಾ ದೇಶದ ಉದರದಿ ಜನಿಸಿ
ರಾಕ್ಷಸ ಗುಣವನು ಅದು ತಾ ಹೊಂದಿ...
ವಿಶ್ವವನ್ನೇ ತಲ್ಲಣಗೊಳಿಸಿದ ರೋಗ || ಕರೋನ ರೋಗ ||

ತನ್ನ ಮುಷ್ಟಿಯಲ್ಲಿ ಹಿಡಿದ ಆ ಒಂದು ಅಸ್ತ್ರ
ಕಣ್ಣಿಗೆ ಕಾಣದ ಅಸ್ತ್ರ, ಮಾಯದ ಅಸ್ತ್ರ || ಕರೋನ ರೋಗ ||

ಆ ರೋಗ ಒಂದು ಬಂದು ಇಂದು 
ನನ್ನ ಸೃಷ್ಟಿಗೆ ನೀನೆ ಕಾರಣ ಎನ್ನುತ್ತಿದೆ ಇಂದು || ಕರೋನ ರೋಗ ||

ನನ್ನ ತಡೆಯಲು ಯಾವ ಜೀವಿಯಿಂದಲೂ
ಅಸಾಧ್ಯ ಎಂದು ಮೆರಿತೀದೆ ಇಂದು || ಕರೋನ ರೋಗ ||

ಶ್ವಾಸ ಕೋಶದಿ ಶ್ವಾಸ ಏರಿಳಿತದೀ...
ರಾಶಿ ರಾಶಿ ಹೆಣಗಳ ಹಾಕುತ್ತಿದೆ ಇಂದು...
ನನ್ನನ್ನು ಮಣಿಸಲು ಯಾರಿಂದಲೂ ಆಗದೆಂದೂ... || ಕರೋನ ರೋಗ ||

ಆ ಬ್ರಹ್ಮನಿಂದ ತಪಗೈದ ಅಮೃತವ
ವಶಪಡಿಸಿಕೊಂಡೆನಗೆ ಎದುರಾರು ಇಂದು
ಈ ಅಸುರ ಗುಣಕ್ಕೆ,
ಎದುರಾರು ಇಂದು ಎನ್ನುತ್ತೀದೆ ಇಂದು... || ಕರೋನ ರೋಗ ||

ನಿಮ್ಮ ಕಾರ್ಯವ ಕಂಡು ನಾನಾ ರೂಪವ ತಾಳುವೆನು ಎಂದು 
ಜಗದಲ್ಲಿ ಜನರ ಅಟ್ಟಹಾಸ ಮಣಿಸಲೆಂದೇ ಹುಟ್ಟಿಬರುತ್ತಿರುವೆ ಎಂದೀತು 
ಮಹ ಮಾರಿ ರೋಗ, ಕರೋನ ರೋಗ || ಕರೋನ ರೋಗ ||

- ಗೂಳೇಶ್ ಬಿ ಯಾಗಾಪೂರ.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...