ಮನಸೂರೆ ಮಾಡಿ ಮನಮೆಚ್ಚಿ ಬಂದಾಕೆ
ಮನದಿಂಗಿತ ತಿಳಿದಾಕೆ
ಮುದ್ಧು ಮಡದಿಯೇ
ನೀ ಬಂದೆ ನನ್ನ ಬಾಳಲ್ಲಿ ಬರಗಾಲದಲ್ಲಿ ಮಳೆ ಬಂದಂತೆ
ಬರಡಾದ
ಹೃದಯದ ಭೂಮಿಯ ಹಸಿರಾಗಿಸಿದಾಕೆ
ಹಸಿರಾಗಿಸುವಾಕೆ...
ಸದಾ ಪ್ರೀತಿಯ ತೆಕ್ಕೆಲಿ ತೇಲಾಡಿಸುವಾಕೆ
ಗುಣ ಸಂಪನ್ನೆ ಸುಸಿಲೇ
ಹಾಲು ಜೇನಿನ ಸಂಗಮದಲಿ
ಸದಾ ಸಿಹಿಯನ್ನೆ ಉಣಬಡಿಸುವಾಕೆ
ಮಧುವ ತಿನಿಸುವಾ ಮುದ್ದು ಮಂದಾರ
ನನ್ನೇಲ್ಲ ಹುಸಿಮುನಿಸು ಸಹಿಸಿ
ಮುದ್ದುಮೋಗದಿ ಎಲ್ಲವು ಮರೆಸುವಾಕೆ
ಮಧುವಿನ ಮಡುವಲಿ ತೇಲಾಡಿಸುವ ಮುದ್ದು ಮಹರಾಣಿ
ಹೆಚ್ಚೇನು ಹೇಳಲಿ ನನ್ನ ಭಾಳಿನ
ಅದೃಷ್ಟ
ನೀನು...
ಅರ್ಧಾಂಗಿ ಜಾನು...
ಆ ಶಿವನಲ್ಲಿ ಬೇಡುವೆ ಸದಾ
ನೂರೆಂಟು ಜನ್ಮ ಹೀಗೆ ನಮ್ಮಯ ಜೋಡಿ ಕೂಡಿರಲೆಂದು
ಯಾರ ಕರಾಳ ದೃಷ್ಟಿ
ಬಿಳದಿರಲೇಂದು...
- ಶಿವಾ ಮದಭಾಂವಿ.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ