ನಾನು ಒಂಟಿಯಾಗಿ ನಡೆಯುತ್ತಿರುವೆ.
ನೀನು ನನ್ನ ಜೊತೆ ಬರುವುದಾದರೆ ಬಾ
ಆದರೆ ಯೋಚಿಸಿ ಬಾ.
ನನ್ನ ನಡಿಗೆಯ ಹಾದಿ.
ಕಲ್ಲು ಮುಳ್ಳುಗಳ ದಾರಿ.
ಕಣ್ಣು ಕಾಲುಗಳು ಕೆಂಪುಗೊಳ್ವುವು.
ಕತ್ತಲಾದರೆ ಇಲ್ಲಿ ದೀಪಗಳಿಲ್ಲ.
ಬೆಳಕು ಬೇಕಾದರೆ
ಆಕಾಶಕ್ಕೆ ಹಾರಿ ಅಲ್ಲಿಂದ
ನಕ್ಷತ್ರಗಳನ್ನು ಕಿತ್ತು ತರಬೇಕು.
ಆ ಕಿತ್ತುತಂದ ನಕ್ಷತ್ರಗಳ ಬೆಳಕಲ್ಲಿ
ದಾರಿ ತುಳಿಯ ಬೇಕು.
ಇಲ್ಲಿ ನೀರಡಿಕೆಯಾದರೆ
ಸುಲಭದಿ ನೀರು ದೊರೆಯುವುದಿಲ್ಲ
ಭೂಮಿಯನ್ನು ಅಗೆದು
ಜಲದ ಬೇರನ್ನು ಹುಡುಕಬೇಕು.
ನಾನು ನಡೆಯುವ ಹಾದಿಯನ್ನು
ಬೇರಾರು ತುಳಿಯುವುದಿಲ್ಲ,,
ನಾನು ನನ್ನ ಜೊತೆ ಬಂದರೆ ನೀನು
ಒಟ್ಟಿನಲಿ ನಾನು ನೀನು..
ಇಷ್ಟನೆಲ್ಲ ಒಪ್ಪಿ ಬರುವುದಾದರೆ ಬಾ
ಆದರೆ ಮತ್ತೊಮ್ಮೆ ಮಗದೊಮ್ಮೆ
ಯೋಚಿಸಿ ಬಾ,,
ಅಂಜಿಕೆ ತೊರೆದು ಬಾ
ಅಭಯವನು ಹೊತ್ತು
ಸುಖದ ತೃಷೆಯ ಬಿಟ್ಟು
ದುಃಖವನ್ನೇ ಉಣ್ಣುವುದಾದರೆ ಬಾ
ಒಮ್ಮೆ ಯೋಚಿಸಿ ಬಾ...
- ಗೌತಮ್ ಗೌಡ
ಕೀರಣಗೆರೆ,, ರಾಮನಗರ.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ