ಕರುನಾಡು ಸಾಹಿತ್ಯ ಪರಿಷತ್ತು ಹಾಗೂ ಶ್ರೀ ಟ್ರಸ್ಟ್ – ಬೆಂಗಳೂರು ಇವರ ಜಂಟಿ ಸಹಯೋಗದ ಕಥಾ ಸ್ಪರ್ಧೆಗಾಗಿ*
*ವಿಷಯ :ಕೋವಿಡ್ – ೧೯ ನಿಯಂತ್ರಣ ಹಾಗೂ ವ್ಯಾಕ್ಸಿನ್ ಕುರಿತ ಜಾಗೃತಿ”*
*ಶೀರ್ಷಿಕೆ : ಭಯಬೇಡ!*
ಕಾಡಿನ ಎಲ್ಲಾ ಪ್ರಾಣಿ ಪಕ್ಷಿಗಳಿಗೆ ತುರ್ತು ಸಭೆಯ ಸೂಚನೆ ಬಂದಿತ್ತು. ಪ್ರಕಟಣೆಯಲ್ಲಿ ಸಂಜೆ ಸರಿಯಾಗಿ ೬ ಗಂಟೆಗೆ ಆಲದ ಮರದ ಕೆಳಗಡೆ ಎಲ್ಲಾ ಪ್ರಾಣಿ-ಪಕ್ಷಿಗಳಿಗೆ ಒಟ್ಟಾಗುವ ಸೂಚನೆ ಇತ್ತು. ಆಗ ಆನೆ “ ಏನಪ್ಪಾ ಮಂಗ ಏನು ಇವತ್ತು ಇಷ್ಟು ಅವಸರದಲ್ಲಿ ಸಭೆಯನ್ನು ಕರೆದಿದ್ದಾರೆ. ಏನು ವಿಷಯ? “ ಎಂದು ಕೇಳಿದನು. ಆಗ ಮಂಗ “ಆನೆಯಪ್ಪ ನಾವು ಸಭೆಗೆ ಹೋಗೋಣ ಅಲ್ಲೆ ಎಲ್ಲಾ ವಿಷಯ ಗೊತ್ತಾಗುತ್ತೆ ಬಿಡು, ನಡೆಯಿರಿ ಸಭೆಯ ಸಮಯ ಆಗಿದೆ.” ಎಂದು ಹೇಳಿ ಅಲ್ಲಿಂದ ಎಲ್ಲರೂ ಸಭೆಗೆ ನಡೆದರು. ಸಭೆ ಸೇರಿತು ಹುಲಿ ರಾಜನು ಸಭೆಯನ್ನು ಆರಂಭಿಸಿದನು. “ ಎಲ್ಲರಿಗೂ ಸ್ವಾಗತ ಕೋರಿ ಈ ಸಭೆ ಸೇರುವ ಉದ್ದೇಶ ಭೂಮಿ ಮೇಲೆ ಯಾವುದೇ ಒಂದು ವೈರಾಣು ಆಕ್ರಮಣ ಮಾಡಿದೆ ಅಂತೆ, ಆದರೆ ನಮಗೇನು ಈ ವೈರಾಣುವಿನಿಂದ ತೊಂದರೆ ಇಲ್ಲ ಆದರೆ ಮನುಷ್ಯಜಾತಿ ಸಂಕಷ್ಟದಲ್ಲಿದೆ ಅಂತೆ. ನಿಮಗೆ ಯಾರಿಗೂ ಈ ವೈರಾಣು ಬಗ್ಗೆ ಗೊತ್ತಿದ್ದರೆ ಹೇಳಿ” ಎಂದನು. ಆಗ ಗಿಳಿ ರಾಯನು” ಮಹಾರಾಜ ಆ ವೈರಾಣು ಹೆಸರು ‘ಕರೋನಾ’ ಅಂತೆ, ಹೀಗೆ ಹಾರುತ್ತ ಹೋಗಬೇಕಾದರೆ ಕೇಳಿದೆ”. ಇದನ್ನು ಕೇಳಿದ ಕೋಳಿ “ ಮಹಾರಾಜ ಈ ಕರೋನಾ ಕಣ್ಣಿಗೆ ಕಾಣುವುದಿಲ್ಲ ಮನುಷ್ಯನ ದೇಹದಲ್ಲಿ ಪ್ರವೇಶಿಸಿ ಅವರ ಶ್ವಾಸನಾಳ ಗಳನ್ನು ಹಾನಿ ಉಂಟುಮಾಡುತ್ತದೆ “ಎಂದು ಹೇಳಿದನು. “ಇದನ್ನು ಹೇಗೆ ನಿಯಂತ್ರಣ ಮಾಡಬಹುದು” ಎಂದು ಆನೆ ಕೇಳಿತು. ಆಗ ಹೆಬ್ಬಾವು” ಈ ಒಂದು ಸೋಂಕಿಗೆ ಮುಂಜಾಗ್ರತೆಯೇ ಮಹಾ ಮದ್ದು ನಾನು ಅರಣ್ಯ ಬಿಟ್ಟು ಹೊರಗೆ ಹೋಗಿದ್ದೆ ಆಗ ನೋಡಿದೆ ಜನರು ಸೋಂಕಿನಿಂದ ಭಯಬೀತರಾಗಿದಾರೆ ಆದರೆ ಈ ಸೋಂಕಿನ ವಿರುದ್ಧ ಜನರು ಆತ್ಮಬಲದಿಂದ ಹೋರಾಡಿ ಗೆಲ್ಲುವ ಅವಶ್ಯಕತೆ ಇದೆ. ವ್ಯಕ್ತಿಯಿಂದ ವ್ಯಕ್ತಿ ಕನಿಷ್ಠ ೬ ಅಡಿ ಅಂತರವನ್ನು ಕಾಯ್ದುಕೊಳ್ಳಬೇಕು ಮತ್ತು ಮುಖವಾಡ ಧರಿಸಬೇಕು ಸಾಬೂನಿನಿಂದ ಪದೇ ಪದೇ ಕೈಯನ್ನು ತೊಳೆಯಬೇಕು. ಆದಷ್ಟು ಮನೆಯ ಹೊರಗೆ ಹೋಗಬಾರದು ತೀರಾ ಅವಶ್ಯಕತೆ ಇದ್ದರೆ ಮಾತ್ರ ಹೊರಗಡೆ ಹೋಗಬೇಕು” ಎಂದನು. ಇದನ್ನು ಕೇಳಿದ ಮೊಲ ಹೇಳಿತು “ತೋಟದಲ್ಲಿ ಗಜ್ಜರಿ ತಿನ್ನಬೇಕಾದರೆ ನಾನು ನೋಡಿದೆ, ಜನರು ಸೋಂಕಿತರನ್ನು ದೂರದಿಂದ ದೂರುಗುಟ್ಟಿ ನೋಡುತ್ತಾರೆ.” ಆಗ ಆಮೆ ಹೇಳಿತು “ ಜನರು ಸೋಂಕಿತರಿಗೆ ಕೈಲಾದ ಸಹಾಯ ಮಾಡಬೇಕು ಅವರಿಗೆ ಸಮೀಪದ ಆಸ್ಪತ್ರೆಗೆ, ಸಂಬಂಧಪಟ್ಟ ವಾರಿಯರ್ಸ್ಗಳಿಗೆ ವಿಷಯ ಮುಟ್ಟಿಸುವುದು ಅವರ ಕರ್ತವ್ಯ” ಎಂದು ಹೇಳಿತು. ಇದನ್ನು ಕೇಳಿದ ಜಿಂಕೆ” ಸೋಂಕಿತರಲ್ಲಿ ಆತ್ಮಸ್ಥೈರ್ಯ ತುಂಬಬೇಕು ಒಂದಷ್ಟು ಮಾನವೀಯತೆಯೂ ತೋರಿಸಬೇಕು ಎಂದಿತು. ಆಗ ಕರಡಿ” ಈ ಸೋಂಕಿನ ವಿರುದ್ಧ ಜನರು ಒಟ್ಟಾಗಿ ಹೋರಾಡುವುದು ಅವಶ್ಯಕತೆ ಇದೆ ಮತ್ತು ಸೋಂಕಿತರು ಆತ್ಮವಿಶ್ವಾಸ ಬೆಳೆಸಿಕೊಳ್ಳಬೇಕು”. “ಅಯ್ಯೋ! ಹಾಗಾದರೆ ಈ ಒಂದು ಸೋಂಕಿಗೆ ಯಾವುದೇ ಔಷಧಿ ಇಲ್ಲವೇ” ಎಂದು ಕಾಗೆ ಕೇಳಿತು. ಆಗ ಹುಲಿ ರಾಜನು ಎದ್ದು “ಈ ಸೋಂಕಿಗೆ ಮನುಷ್ಯರು ಲಸಿಕೆಯನ್ನು ಕಂಡುಹಿಡಿದಿದ್ದಾರೆ. ಆದರೆ ಜನರಲ್ಲಿ ಲಸಿಕೆ ಬಗ್ಗೆ ಅರಿವನ್ನು ಮೂಡಿಸುವುದು ಅವಶ್ಯಕತೆ ಇದೆ. ಈ ಲಸಿಕೆಯನ್ನು ಪಡೆಯುವುದರ ಮೂಲಕ ಮನುಷ್ಯರಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ ಇದರಿಂದ ಅವರಲ್ಲಿ ರೋಗದ ವಿರುದ್ಧ ಹೋರಾಡುವ ಶಕ್ತಿ ಹೆಚ್ಚಾಗುತ್ತದೆ. ಈ ಒಂದು ಲಸಿಕೆಯು ಮನುಷ್ಯರಿಗೆ ಸಂಜೀವನಿಯಾಗಿದೆ ಪ್ರತಿಯೊಬ್ಬರೂ ಕೂಡ ಭಯ ಇಲ್ಲದೆ ಲಸಿಕೆಯನ್ನು ಪಡೆಯಬಹುದು. ಗೆಳೆಯರೇ ಬನ್ನಿ, ಈ ಒಂದು ಕಾಯಿಲೆಗೆ ಸಂಬಂಧಪಟ್ಟ ಎಲ್ಲಾ ವಿಷಯಗಳನ್ನು ನಾವು ಜನರಿಗೆ ತಿಳಿಸೋಣ ಕರೋನಾ ಬಗ್ಗೆ ಧೈರ್ಯಗೆಡಬೇಡಿ ಬದಲಾಗಿ ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳಿ ಈ ಮಾರಕ ರೋಗದ ವಿರುದ್ಧ ಹೋರಾಡಿ ಈ ಮಹಾಮಾರಿಯನ್ನು ಹೊಡೆದೋಡಿಸಿ ತಪ್ಪದೇ ಮಾಸ್ಕ್ ಧರಿಸಿ ಕೈಗಳನ್ನು ಸಾಬೂನಿನಿಂದ ತೊಳೆದುಕೊಳ್ಳಿ ಸ್ವಚ್ಛತೆಯ ಕಡೆಗೆ ಆದಷ್ಟು ಗಮನಹರಿಸಿ ಅವಶ್ಯಕತೆ ಇದ್ದಾಗ ಮಾತ್ರ ಮನೆಯಿಂದ ಹೊರಗೆ ಹೋಗಿ ಮತ್ತು ತಪ್ಪದೇ ಲಸಿಕೆ ಹಾಕಿಸಿಕೊಳ್ಳಿ ಎಂದು ಸಾರೋಣ”. ಎಂದು ಹುಲಿ ರಾಜನು ಎಲ್ಲಾ ಪ್ರಾಣಿ-ಪಕ್ಷಿಗಳಿಗೆ ಮನವಿ ಮಾಡಿಕೊಂಡನು.
ಹೆಸರು : ಕು. ನಿಧಿ.ಬಿ ನಾಯ್ಕ್
ಊರು : ದಾಂಡೇಲಿ ( ಉ.ಕ )
ತರಗತಿ : ೭ ನೇ
ಶಾಲೆ : ಕೆನರಾ ವೆಲ್ಫೇರ್ ಟ್ರಸ್ಟ್ ಆಂಗ್ಲಮಾಧ್ಯಮ ಹಿರಿಯ ಪ್ರಾರ್ಥಮಿಕ ಶಾಲೆ ದಾಂಡೇಲಿ ( ಉ. ಕ ).
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ : 9448241450 ಸಂಪಾದಕರು ವಿ ಮ ಸಾ ಪತ್ರಿಕೆ)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ