International WOMEN'S Day...
ಆತ್ಮೀಯ ಗೆಳತಿ ಅಕ್ಷತಾ
ಸಾಂಸ್ಕೃತಿಕ ನಗರಿ
ಮೈಸೂರಿನ ಜಿಲ್ಲೆಯ ತವರೂರಿನ
ಹೆಣ್ಣು ಮಗಳಿವಳು...
ಇವರ ಪರಿಚಯ ಒಂದಿಷ್ಟು
ನಿಮಗೆ ತಿಳಿಸುವೆ ,
ಪ್ರತಿಯೊಬ್ಬ ಹೆಣ್ಣು ಮಗುವೂ ಸಹ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿ ತಮ್ಮ ಛಾಪುವನ್ನ ಗುರುತಿಸಿಕೊಂಡಿರುವರು
ಹಾಗೆಯೇ ಇವರು ಸಹ ಓದಿನ
ಜೊತೆ ಜೊತೆಯಲ್ಲಿ ಇನ್ನು ಚಿಕ್ಕ ವಯಸ್ಸಿನಲ್ಲಿ ಅನೇಕ ಕಾರ್ಯ ಕ್ಷೇತ್ರಗಳಲ್ಲಿ ತಮ್ಮನ್ನ ತಾವು ಮುಡುಪಾಗಿಸಿ ತೊಡಗಿಸಿಕೊಂಡು ಓದಿನ ಜೊತೆಯಲ್ಲಿ
ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡಿಕೊಂಡು ತಮ್ಮ ಜೀವನದ ಒಳ್ಳೆಯ ವಿಷಯಗಳನ್ನು ಸುತ್ತ ಮುತ್ತಲಿನ ಜನಗಳಿಗೆ ಅರಿವು ಮೂಡಿಸುತ್ತ
ತಿಳಿವಳಿಕೆ ಹೇಳುವರು...
ಕಡು ಬಡತನದಲ್ಲಿ ಹುಟ್ಟಿದರು ಸಹ ಈಕೆ ತಂದೆ - ತಾಯಿ ನಿಜಕ್ಕೂ
ಪುಣ್ಯ ವಂತರು
ತಂದೆ ವೃತ್ತಿ ಕೆಲಸ ಮಾಡಿದರು ಸಹ
ತನ್ನ ಮಗಳಿಗೆ ಈ ಸಮಾಜದಲ್ಲಿ
ನೊಂದವರಿಗೆ ನೆರವು ಆಸರೆಯಾಗಬೇಕು ಎನ್ನುತ್ತ
ಉತ್ತಮವಾದ ಶಿಕ್ಷಣದ ಜೊತೆಗೆ
ಸಂಸ್ಕೃತಿಯನ್ನ ,ಗುಣಗಳನ್ನ
ಬೆಳೆಸಿರುವರು ...
ಅಕ್ಷತ ನಾ ಬಗ್ಗೆ ಹೇಳುವುದಾದರೆ
ತನ್ನ ಬಾಲ್ಯದಿಂದ ಇಲ್ಲಿಯ ತನಕ
ಓದಿನಲ್ಲಿ ತುಂಬಾ ಪ್ರಾವೀಣ್ಯ ಹೊಂದಿದ್ದವಳೇ ಈಕೆ
ಈಗ ಮೈಸೂರು ವಿಶ್ವವಿದ್ಯಾಲಯದಲ್ಲಿ
ಶಿಕ್ಷಣ ಮಾಡುತ್ತ
ಅದರ ಜೊತೆಯಲ್ಲೇ ಕೇಂದ್ರ ಸರ್ಕಾರದ ಉನ್ನತ ಹುದ್ದೆ
ಐಎಎಸ್ ಅಧಿಕಾರಿಯಾಗಬೇಕೆಂಬ
ಕನಸು ತುಂಬಿಕೊಂಡಿರುವರು..
ಬಿಡುವಿನ ಸಮಯದಲ್ಲಿ ಅನಾಥ ಮಕ್ಕಳಿಗೆ
ಮೈಸೂರಿನ ಸ್ಲಮ್ ಪ್ರದೇಶಲ್ಲಿ ಟೆಂಟು ಹಾಕಿಕೊಂಡು ನೆಲೆಸಿರುವ ಸ್ಥಳಕ್ಕೆ ತಾನೆ ಖುದ್ದಾಗಿ ಅಲ್ಲಿಗೆ ಹೋಗಿ
ಅಲ್ಲಿನ ಮಕ್ಕಳಿಗೆ ಪಾಠ ಕಲಿಸುತ್ತ ಹಾಗೆಯೇ ಪುಸ್ತಕ,ಪೆನ್ನು,ಇತ್ಯಾದಿ
ಆ ಮಕ್ಕಳಿಗೆ ತನ್ನ ಸ್ವಂತ ಹಣದಿಂದ
ಬರಿಸುವರು ...ಒಮ್ಮೊಮ್ಮೆ ತನ್ನ ತಾಯಿಯಿಂದ ಮನೆಯಲ್ಲಿ ಅಡುಗೆ ಮಾಡಿಸಿಕೊಂಡು ಅಲ್ಲಿನ ಮಕ್ಕಳಿಗೆ ಊಟ ಉಪಾಹಾರ ಮಾಡಿ ಆ ಮುಗ್ಧ ಮಕ್ಕಳಲ್ಲಿ ತನ್ನ ಸಂತೋಷವನ್ನ
ಕಾಣುವರು...
NGO ಅಂತ ಅನಾಥ ಸಂಸ್ಥೆಗಳಲ್ಲಿ
ಅಲ್ಲಿಗೂ ಹೋಗಿ ತನ್ನ ಬಿಡುವಿನ ಸಮಯದಲ್ಲಿ ಅಲ್ಲಿನ ಅಂದ ಮಕ್ಕಳಿಗೂ ಶೈಕ್ಷಣಿಕ ಶಿಕ್ಷಣ ಕಲಿಸುವರು...
ಹೀಗೆಯೇ ಇನ್ನು ಹಲವು ಕಾಯಕ ಕಾರ್ಯ ಕ್ಷೇತ್ರಗಳಲ್ಲಿ ತಮ್ಮನ್ನ ತಾವು ತೊಡಗಿಸಿಕೊಂಡು ಓದಿನ ಜೊತೆಯಲ್ಲಿ ಇಂತ ಚಿಕ್ಕ ವಯಸ್ಸಿನಲ್ಲಿ ಕೆಲಸ ಮಾಡುವ ನಿಮಗೆ ದೇವರು ಇನ್ನಷ್ಟು ಎತ್ತರಕ್ಕೆ ಬೆಳೆಯುವುದಕ್ಕೆ
ಶಕ್ತಿ ಸಾಮರ್ಥ್ಯ ಕೊಟ್ಟು ಕಾಪಾಡಲಿ...
ಹೆಣ್ಣು ಮನಸು ಮಾಡಿದರೆ ಏನನ್ನಾದರೂ ಸಾಧಿಸಬಲ್ಲಳು .
ನಿಮ್ಮಿಂದ ಈ ಸುಂದರ ಮುಂದಿನ ಸಮಾಜಕ್ಕೆ ಹೆಣ್ಣು ಮಕ್ಕಳಿಗೆ ನೀ ಮಾದರಿಯಾಗಿ ಉನ್ನತ ಅಧಿಕಾರಿಯಾಗಬೇಕು ಎಂದು ಪಣ ತೊಟ್ಟು ದಿನ ನಿತ್ಯ ಕಲೆಕೆಯಲ್ಲಿ ತೊಡಗಿಸಿಕೊಂಡು ಓದುತ್ತಿರುವೆ
ನಿನ್ನೆಲ್ಲ ಈ ಕೆಲಸ ಕಾರ್ಯಗಳಿಗೆ
ನಿಮ್ಮ ತಂದೆ - ತಾಯಿಯ ಆರ್ಶಿವಾದ
ತುಂಬಾ ಪ್ರಮುಖವಾದುದ್ದು ನಿಜಕ್ಕೂ
ನಿನ್ನ ಕೈಗಳು ಮುಂದಿನ ದಿನಗಳಲ್ಲಿ ನೊಂದವರ ಬಾಳಿಗೆ ಬೆಳಕಾಗಲೀ
ನೀ ನಡೆಯುವ ಹೆಜ್ಜೆಗಳು ಮತ್ತೊಬ್ಬರಿಗೆ ಮಾದರಿಯಾಗಲಿ...
ಕಾರ್ತಿಕ್
ಶ್ರವಣಬೆಳಗೊಳ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ