ನೋಡ ಬನ್ನಿರಿ ಸಾಹಿತ್ಯದ ಸೊಬಗ, ನಮ್ಮ ಸಕ್ಕರೆಯ ನಾಡಲ್ಲಿ,
ಹರಿಯುತ್ತಿದೆ ಕನ್ನಡದ ಕಸ್ತೂರಿಯ ಕಂಪು.
ಕಾವೇರಿ ತಾಯಿಯ ಜುಳು ಜುಳು ನಾದದಲಿ
ಸಕ್ಕರೆಯ ನಗರಕ್ಕೆ ಮೂರನೇ ಬಾರಿಯ ಸಾಹಿತ್ಯದ ಸಂಭ್ರಮ,
48ರ ನುಡಿ ಜಾತ್ರೆಯ ಅಧ್ಯಕ್ಷೆ , ತಾಯಿ ಲಿಗಾಡೆ ಅಮ್ಮ.
ಹಾರಿಹುದು ಮನೆಗಳ ಮೇಲೆ
ಕನ್ನಡ ತಾಯಿಯ ಸುಂದರ ಝಂಡ,
ನುಡಿಯುತ್ತಿದೆ ಎಲ್ಲರ ಜಿಹ್ವಗಳು ಕನ್ನಡ ಕನ್ನಡ.
ನೀ ಕಲಿಯ ಬಾರೋ ಅಂದ ಚಂದದ ಕನ್ನಡವ ಕಂದ,
ನಮ್ಮ ತಾಯಿನುಡಿಯ ಕಲಿಯಲು ಅದೆಷ್ಟು ಆನಂದ.
ಸಕ್ಕರೆಯ ನಾಡಿನ ಕಬ್ಬಿನ ಜಲ್ಲೆಯಲ್ಲಿ ,
ತುಂಬಿಹುದು ಕನ್ನಡದ ಸಿಹಿಯು
ಜಲ್ಲೆಯ ಗೆಣ್ಣು ಗೆಣ್ಣುಗಳಲ್ಲಿ,
ಕಲಾವಿದರ ತಂಡ ಇಳಿದಿದೆ ಸಾಹಿತ್ಯದ ಕಣಕ್ಕೆ,
ಸಾಕ್ಷಿಯಾಗಿದೆ ಈ ಕ್ಷಣ ಪ್ರತಿಭೆಗಳ ಅನಾವರಣಕ್ಕೆ.
ಸಲ್ಲುತಿದೆ ವೇದಿಕೆಯಲ್ಲಿ ಗಣ್ಯರಿಗೆ ಸನ್ಮಾನ,
ಕರತಾಳದ ಕಲರವದಲಿ ಸಾಧಕರಿಗೆ ಅಭಿನಂದನ.
ಎಲ್ಲರೂ ಬನ್ನಿ ಕೂಡೋಣ ಕುಣಿಯೋಣ,
ತೀರಿಸೋಣ ನಮ್ಮ ಕನ್ನಡ ತಾಯಿಯ ಋಣ.
- ಎಂ. ಆಶಾಕಿರಣ್,
ಶಿಕ್ಷಕಿ ಹಾಗೂ ಸಾಹಿತಿ
ಬೇಲೂರು, ಹಾಸನ ಜಿಲ್ಲೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ