ಬುಧವಾರ, ಜುಲೈ 28, 2021

ಮನುಷ್ಯನ ಗುಣ (ಕವಿತೆ) - ಶ್ರೀ ಜಿ ಟಿ ಆರ್ ದುರ್ಗಾ, ಬಂಗಾರಪೇಟೆ.

ಮನುಷ್ಯನ ಗುಣ

ಹೀಗಿದ್ದದ್ದು ಕಾಲ ಹೀಗೇ ಇರಲ್ಲ
ನಾಳೆ ಹೇಗೆ ಇರುವುದು ಚಿಂತೆ ನಿನಗಿಲ್ಲ
ಬರುವುದನ್ನು ಪಡೆಯಬೇಕು
ಅದೃಷ್ಟವು ಬರುವವರೆಗೆ ಕಾಯಲೆಬೇಕು

ಚಿಂತೆಯಿಂದ ನೂರು ಖಾಯಿಲೆ ಚೆಟ್ಟ ಕಟ್ಟಕೆ 
ಮನಸ್ಸಿನಲ್ಲಿ ಬೇಸರ ಬೇಡ ಜೀವನ ಕಳಿಯಾಕೆ
ತುತ್ತು ಕೂಳಿಗಾಗಿ ಏಕೆ ಮೋಸ ವಂಚನೆ
ಇನ್ನೊಬ್ಬರಿಗೆ ಅನ್ಯಾಯ ಇನ್ನೇನಿದೆ ಯೋಚನೆ

ಬಂಧು ಬಳಗವೆಲ್ಲ ಕೇಳೋದೊಂದೆ ಸಹಕಾರ
ಅದಕ್ಕೆ ಕೋಪಬೇಡ ಮನದಲಿ ಮಾಡು ಸಹಕಾರ
ಇದ್ರೆ ಹಂಚಿ ತಿನ್ನು ಅವರಿಗೆ ತೃಪ್ತಿತಾನೆ
ಕೊಟ್ಟವರ ಎಂದು ಮರಿಬೇಡಿ ಸ್ನೇಹವನ್ನೆ

ಒಂದು ಬಾರೆ ಯೋಚಿಸಿ ಹಿಂದಿನ ಕಷ್ಟ ಆವತ್ತು
ಅದನ್ನು ಯಾವತ್ತು ಮರಿಬೇಡ ಸಿಗೊದಿಲ್ಲ ತುತ್ತು
ಕಷ್ಟ ಎನ್ನುವರಿಗೆ ಕೈ ಹಿಡಿಯುವ ಗುಣವಿರಬೇಕು
ಹಣ ಎಂದು ಶಾಶ್ವತವಲ್ಲ ಮೊದಲು ತಿಳಿಬೇಕು

ಒಳ್ಳೆ ಮಾರ್ಗ ತೋರಿದವರು ದೂರ ತಳ್ಬೇಡ
ನಿನ್ನೆ ಬಂದವರಿಗಿಂತ ಹಳೆಯವರನ್ನು ತೊರಿಬೇಡ
ಕತ್ತಲೆ ಬೆಳಕಿನಂತೆ ಜೀವನ ನೀ ಕೇಳು
ಐಶ್ವರ್ಯ ಇರುತ್ತೆ ನಾಳೆ ಹೋಗುತ್ತೆ  ಹೇಳುವೆ ಕೇಳು

ಆಕಾಶಕ್ಕೆ ಏಣಿಯನ್ನು ಹಾಕಕ್ಕಾಗಲ
ಒಳಗುಟ್ಟಿನ ಮನುಷ್ಯನನ್ನು ನಂಬಕ್ಕಾಗಲ್ಲ
ಇರುವ ಸಂಬಂಧವ ಹಣಕ್ಕಾಗಿ ತೂಕ ಮಾಡ್ಬೇಡಿ
ಮನುಷ್ಯತ್ವ ಯಾವತ್ತು ನೀನು ಕಳ್ಕೊಬೇಡಿ
ಜಿ ಟಿ ಆರ್ ದುರ್ಗ 
ಜಿ ಹೆಚ್ ಎಲ್ ಬಂಗಾರಪೇಟೆ.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ )

1 ಕಾಮೆಂಟ್‌:

ಶ್ರೀಮತಿ ಬಿ ಬಿ ದೇವದುರ್ಗ ಅವರಿಗೆ ಜಿಲ್ಲಾ ಮಟ್ಟದ ಉತ್ತಮ ಪ್ರಶಸ್ತಿ...

ಶ್ರೀಮತಿ ಬಿ ಬಿ ದೇವದುರ್ಗ ಅವರಿಗೆ ಜಿಲ್ಲಾ ಮಟ್ಟದ ಉತ್ತಮ ಪ್ರಶಸ್ತಿ.....            ಜಿಲ್ಲಾ ಆಡಳಿತ ಜಿಲ್ಲಾ ಪಂಚಾಯತ್   ಉಪನಿರ್ದೇಶಕರ ಹಾಗೂ ಕ್ಷೇತ್ರ...