ಗಜಲ್
ಮಾತು ಬಲ್ಲವನಿಗೆ ಎದೆಗಾರಿಕೆ ಜಾಸ್ತಿ ಗಾಲಿಬ್
ಮನದ ಮಾತುಗಳ ಅರಿಯದ ಛಲಗಾರಿಕೆ ಜಾಸ್ತಿ ಗಾಲಿಬ್
ಹಸಿವಿನ ಬಳಲಿಕೆಗೆ ನೊಂದಿರುವರೆ
ಬಡತನದ ಗುಂಗಿನ ಬಿಕ್ಕಳಿಕೆ ಜಾಸ್ತಿ ಗಾಲಿಬ್
ದಿಕ್ಕು ತಪ್ಪುವರ ಮಾನಕ್ಕಿಂತಲೂ
ಬೆನ್ನು ತಟ್ಟುವರ ಮೌನಿಕೆ ಜಾಸ್ತಿ ಗಾಲಿಬ್
ಮಾತಿಗೆ ಉತ್ತರ ಕೊಡದ ಮನ ನೊಂದಿದೆ
ಕಣ್ಣಾಲಿಯ ಕಣ್ಣೀರು ಮರೆಯಾಗುವ ಹರಕೆ ಜಾಸ್ತಿ ಗಾಲಿಬ್
ಬಡತನದ ಬಳುವಳಿಯಲ್ಲಿ ಬಳಲಿದೆ
ನೋವನ್ನು ಸಹಿಸುವ ಮಾಜಾಳ ಹೃದಯವಂತಿಕೆ ಜಾಸ್ತಿ ಗಾಲಿಬ್
- ಮಾಜಾನ್ ಮಸ್ಕಿ.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ