ಗುಡ್ಡ ಗಾಡಿನ ಬೆಟ್ಟದ
ತಪ್ಪಲಿನ ಪ್ರದೇಶದಲ್ಲಿ
ನಮ್ಮ ಆತ್ಮ ರಕ್ಷಣೆಗಾಗಿ ಅಲ್ಲ
ನಮ್ಮ ಮನೆಯ ರಕ್ಷಣೆಗೂ ಅಲ್ಲ
ನಮ್ಮನ್ನ ನಂಬಿರುವ ಕೋಟಿ
ಹೃದಯದ ಜೀವಿಗಳಿಗೆ
ನಾವು ರಕ್ಷಣೆಯ
ಕಾವಲುಗಾರರಾಗಿ ನಿಮ್ಮನ್ನ
ಕಾಯುವ ನಿಮ್ಮ ಕಣ್ಣುಗಳು ನಾವುಗಳು...
ನೀವು ನಮ್ಮ ದೇಶದ ಪ್ರಜೆಗಳು
ನಮ್ಮ ಜೀವಮಾನ ತಾಯ್ನಾಡಿಗೆ
ಅಡಮಾನವಿಟ್ಟು ಶಪಿಸಿ
ನೆನೆದು ಕಾಲ ನಡಿಗೆಯಲ್ಲಿ ನಡೆಯುತ್ತಿರುವೆ...
ಹುಟ್ಟಿದಾಗ ಜೊತೆಯಲ್ಲಿ ಎಲ್ಲರ ಪ್ರೀತಿಯನ್ನು ಪಡೆದು ಅನುಭವಿಸಿದೆ ನಾನು
ಇಂದು ನನ್ನ ಪ್ರೀತಿ, ಆಸೆ , ಅಕಾಂಕ್ಷೆನೆಲ್ಲ,
ಬದಿಗೊತ್ತಿ ಹುಟ್ಟಿ ಬೆಳೆದ ಮನೆಯಲ್ಲಿ
ನನ್ನ ಬಾಲ್ಯದ ಕನಸುಗಳು, ಯೌವ್ವನದ
ಪ್ರೀತಿಯ ಬುಟ್ಟಿಗಳು ತುಂಬಿ
ಪೆಟ್ಟಿಗೆಯೊಳಗೆ ಕೂಡಿಟ್ಟು
ಬಂದಿರುವೆ ನನ್ನ ನೆನಪುಗಳು
ನಮ್ಮ ಮನೆಯವರ
ಜೊತೆಯಲ್ಲಿ ಇರಲಿ
ಸದಾ ಎಂದು ...
ಕಾರ್ತಿಕ್...✍️
(ಶ್ರವಣ ಬೆಳಗೊಳ)