ಬುಧವಾರ, ಆಗಸ್ಟ್ 13, 2025

ಒಳ್ಳೆಯ ವ್ಯಕ್ತಿತ್ವ ಬೆಳೆಸಿಕೊಳ್ಳೋಣ...

ಒಳ್ಳೆಯ ವ್ಯಕ್ತಿತ್ವ ಬೆಳೆಸಿಕೊಳ್ಳೋಣ 

ಮನುಷ್ಯನ ಭಾವನೆಗಳು, ವರ್ತನೆಗಳು, ಸ್ವಭಾವಗಳು  ಅವನ ವ್ಯಕ್ತಿತ್ವದ ಪ್ರತಿಬಿಂಬ.
ಮನಸ್ಸೇ ನಮ್ಮ ಶತ್ರು ಹಾಗು ಮಿತ್ರ. ಒಬ್ಬರ ಮೇಲಿನ ಪ್ರೀತಿ, ಕರುಣೆ, ಸಹಾಯ ಮನೋಭಾವ, ಅನುಕಂಪ ಇವು  ಉತ್ತಮ ರೀತಿಯ ಭಾವಗಳು ನಮ್ಮ ಗೌರವ ಹೆಚ್ಚಿಸುತ್ತವೆ. ನಮ್ಮಲ್ಲಿರುವ ದ್ವೇಷ, ಕೋಪ, ಅಸೂಯೆ, ದುರಹಂಕಾರ, ಭಯ, ದುಃಖ, ಚಿಂತೆ ಇವು ನಮ್ಮ ಕೆಟ್ಟ ರೀತಿಯ ಭಾವಗಳು ನಮಗೆ ಅಗೌರವ ಹೆಚ್ಚಿಸುತ್ತದೆ. ನಮ್ಮ  ಬಗ್ಗೆ ಎಂದಿಗೂ ಆತ್ಮವಿಶ್ವಾಸ ಇರಬೇಕು , ಆರೋಗ್ಯಕರ ಚಿಂತನೆ ಒಳ್ಳೆಯ ಸಂಸ್ಕಾರವನ್ನು ತಂದು ಕೊಡುತ್ತದೆ ,ಒಳ್ಳೆಯ ನಡುವಳಿಕೆ ಉತ್ತಮ ವ್ಯಕ್ತಿತ್ವ ರೂಪಿಸುತ್ತದೆ. ನೀವು ನೂರು ಸರಿ ಸೋತರೂ ಸಹ ವಿಶ್ವಾಸ ಕಳೆದುಕೊಳ್ಳದೆ ನಿಮ್ಮ ಆದರ್ಶವನ್ನು ಬಿಡದೆ ಪ್ರಾಮಾಣಿಕ ಪ್ರಯತ್ನ ಪಟ್ಟು ಮುನ್ನಡೆಯ ಬೇಕು ಆದರೆ ಸೋಲಿನಿಂದ ಕಲಿತ ಪಾಠವನ್ನು ಮರೆಯ ಬಾರದು. ಜೀವನದಲ್ಲಿ ತಪ್ಪು ಮಾಡುವುದು ಒಳ್ಳೆಯದೇ ಇದರಿಂದ ಸರಿ ಪಡಿಸುವಂತ ಒಳ್ಳೆಯ ಪಾಠ ಸಿಗುವುದು. ಇವತ್ತು ನಾವು ಏನಾಗಿದ್ದೇವೆ ಅದಕ್ಕೆ ನಾವೇ ಜವಬ್ದಾರಿ. ಒಬ್ಬ ಮನುಷ್ಯನ ಬದುಕಿನಲ್ಲಿ ನಿಸ್ವಾರ್ಥ ಸೇವೆ ಬಹಳ ಮುಖ್ಯ, ಸ್ವಾರ್ಥ ಇಲ್ಲದೇ ಯಾವುದೇ ಫಲಾಪೇಕ್ಷೆ ಇಲ್ಲದ ಮನೋಭಾವ ಬೆಳೆಸಿಕೊಳ್ಳಬೇಕು. 
ಒಬ್ಬ ಮನುಷ್ಯ ಬೆಳೆಯುವ ಪರಿಸರ, ಪೋಷಕರ ಪಾಲನೆ, ಶಿಕ್ಷಣ, ಅನುವಂಶಿಕ ಗುಣ, ಸ್ನೇಹ ಇವೆಲ್ಲವೂ ಅವನ ವ್ಯಕ್ತಿತ್ವ ನಿರ್ಮಾಣದಲ್ಲಿ ಹೆಚ್ಚಿನ ಪಾತ್ರ ವಹಿಸಿದೆ.. ವ್ಯಕ್ತಿಯ ಉಡುಪು, ಸೌಂದರ್ಯ, ಬಣ್ಣ, ಬಳಸುವ ವಸ್ತು ಇದರಿಂದ ವ್ಯಕ್ತಿತ್ವ ಅಳೆಯುವುದಲ್ಲಾ ವ್ಯಕ್ತಿಯ ರೀತಿ ನೀತಿ ,ಗುಣಗಳು, ಆಚಾರ ವಿಚಾರ, ಹವ್ಯಾಸ, ನಡೆ ನುಡಿ, ಜೀವನ ಶೈಲಿ, ಮಾತು, ಆತ್ಮವಿಶ್ವಾಸ, ಶಕ್ತಿ, ಪ್ರಾಮಾಣಿಕತೆ ಇದರಿಂದ ಅಳೆಯುವುದು.
ಮನಸ್ಸು ಶುದ್ಧವಾಗಿರಬೇಕು,ಆತ್ಮವಿಶ್ವಾಸ ಇರಬೇಕು, ನಾವು ಆಡುವ ಮಾತು ಚೆನ್ನಾಗಿರಬೇಕು, ಹೊಂದಾಣಿಕೆಯ ಗುಣ, ಒಬ್ಬರನ್ನು ಕೀಳಾಗಿ ನೋಡಬಾರದು, ತಾಳ್ಮೆಯಿಂದ ನಡೆದುಕೊಳ್ಳಬೇಕು, ಅರ್ಥ ಮಾಡಿಕೊಂಡು ಹೋಗುವ ಗುಣ ಇರಬೇಕು ಒಬ್ಬರ ಜೊತೆ ನಡೆದು ಕೊಳ್ಳುವ ರೀತಿ ಚೆನ್ನಾಗಿರಬೇಕು, ಒಳ್ಳೆಯವರ ಸಹವಾಸ ಮಾಡಬೇಕು, ನಂಬಿಕೆ ಉಳಿಸಿಕೊಳ್ಳುವ ಮನೋಭಾವ ಇರಬೇಕು. ಮಾನವೀಯತೆ ಗುಣ ಇರಬೇಕು.
ವ್ಯಕ್ತಿಯ ಅರಿವಿನಂತೆ ಅವನ ವ್ಯಕ್ತಿತ್ವ ಇರುತ್ತದೆ. ವ್ಯಕ್ತಿತ್ವ ಎಲ್ಲರ ಹೃದಯವನ್ನು ಗೆಲ್ಲುವುದು, ಒಳ್ಳೆಯ ವ್ಯಕ್ತಿತ್ವದಿಂದ ಎಲ್ಲರನ್ನೂ  ಗೆಲ್ಲೋಣ. 
ಒಳ್ಳೆಯ ವ್ಯಕ್ತಿತ್ವ ಒಳ್ಳೆಯ ಹೆಸರನ್ನ ತಂದುಕೊಡುತ್ತದೆ..


                 ಮಾನಸ ಜೀವನ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಬೆಳಗು...

ಕವನ     ಬೆಳಗು ಬೆಳಗು ಬಾ ಬೆಳಕು ಬೆಳದಿಂಗಳ ಬೆಳಕು ಚೆಲ್ಲುತ ರಂಗು ರಂಗಿನ ಕಾಮನಬಿಲ್ಲಿನಂತೆ ಮಿನು ಮಿನುಗುವ ಬೆಳ್ಳಿಚುಕ್ಕಿಯಂತೆ ರಂಗು ರಂಗಿನ ರಂಗೋಲಿಯಂತ...