ಗುರುವಾರ, ಡಿಸೆಂಬರ್ 26, 2024

ಕುವೆಂಪು ಹೇಗೆ ನಾ ಮರೆಯಲಿ...

ಕುವೆಂಪು ಹೇಗೆ ನಾ ಮರೆಯಲಿ
ವಸಂತ ಕಾಲ ನನ್ನೇ ನಾ ಮರೆವೆ
ರಾಷ್ಟ್ರಕವಿಯು ಕುವೆಂಪು ತಾನೆ
ಪ್ರಕೃತಿ ಕವಿತೆ ಬರೆದ ನಾಡಪ್ರೇಮಿ
ಜ್ಞಾನಪೀಠ ಪ್ರಶಸ್ತಿ ಪಡೆದ ಕವಿಯ
ಹೇಗೆ ನಾನು ಮರೆಯಲಿ

ಕವಿಯೇ ನಿನ್ನ ಕವಿತೆಯಲ್ಲಿ
ವಿಶ್ವಮಾನವ ಸಂದೇಶ ಇರುವಲಿ
ಅಂಕುಶದ ಹಂಗಿಲ್ಲದೆ ಜಗಕೆ ಬೆಳಕಾದ
ವಿಶ್ವ ಚೇತನ ರಾಷ್ಟ್ರ ಕವಿಯ
ಹೇಗೆ ನಾನು ಮರೆಯಲಿ

ಮಳೆಯ ಗಾಲದ ದಟ್ಟ ಅನುಭವ
ಕಟ್ಟಿ ಬರೆದರು ಕಥೆಗಳಲ್ಲಿ
ಮಲೆನಾಡಿನ ಜನರ ಜೀವನ ಕಣ್ಣ ಮುಂದೆ 
 ತೇಲಿ ಬರುತಲಿ ಕಾನೂರು ಕವಿಯ
 ಕವಿಯ ಹೇಗೆ ನಾನು ಮರೆಯಲಿ

ದೃಶ್ಯ ಕಾವ್ಯ ಬಿರುಗಾಳಿ ರಮ್ಯ ನಾಟಕ
ಬೆರಳ್ಗೆ ಕೊರಳ್ ರಕ್ತಾಕ್ಷಿ ರುದ್ರನಾಟಕ
ಪುರಾಣ ಕಾವ್ಯ ರಾಮಾಯಣ ದರ್ಶನಂ
 ಭಾಗ್ಯ ನೀಡಿದ ಸೃಷ್ಟಿ ಚೈತನ್ಯ ಕವಿಯ
ಹೇಗೆ ನಾನು ಮರೆಯಲಿ
    ___
ಗೊರೂರು ಅನಂತರಾಜು,
ಹಾಸನ
9449462879

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಮಗಾಗಿ ದುಡಿದ ನಾಯಕ ನಮ್ಮ ಜನಕ...

ನಮಗಾಗಿ ದುಡಿದ ನಾಯಕ ನಮ್ಮ ಜನಕ. ಅಪ್ಪ ಎಂದರೆ ಬೆಳಕು. ಅಪ್ಪನಿಂದಲೇ ಈ ಬದುಕು. ಅಪ್ಪನ ಸ್ಥಾನವನ್ನು ಯಾರಿಂದಲೂ ತುಂಬಲು ಸಾಧ್ಯವಿಲ್ಲ. ಅಪ್ಪ ಅಮ್ಮನ ಪ್ರೀತಿ ಅತ್ಯಮೂಲ್ಯವ...