ನಮ್ಮೂರೆ ನಮಗೆ ಚೆಂದ
ನೋಡಲು ಕಣ್ಣಿಗಾನಂದ
ಕವಿ ಇದನು ಶಿಲ್ಪಗಳ ತವರೂರೆ ಎಂದ
ನಮ್ಮೂರ ಇತಿಹಾಸವಿದು ಹೊಯ್ಸಳರಿಂದ.
ಜಕಣಚಾರಿಯ ಕೈಯಲ್ಲೆ ಇತ್ತೇನೋ ಕಲೆಯ ಮಕರಂದ
ಎಷ್ಟು ಹೂಗಳಿದರು ಸಾಲದು ಕೇವಲ ಮಾತುಗಳಿಂದ.
ನೂಡಬನ್ನಿ ನಮ್ಮೂರ ದರ್ಪಣ ಸುಂದರಿಯ ಸೂಬಗನ್ನ
ಒಂದೊಂದು ಶಿಲೆಯ ಇತಿಹಾಸ ಕೇಳಿದರೆ ಮರೆತಂತೆ ನಾವು ನಮ್ಮನ್ನ
ಕಲ್ಲಲ್ಲೆ ಕೆತ್ತಿರುವ ಉಡುಗೆ ತೂಡುಗೆಯನ್ನ
ಕೇಳಿದರೆ ಸಾಲದು ನೋಡುವುದೇ ಚೆನ್ನ.
ಹತ್ತಿರದಲ್ಲೆ ಇದೆ ದ್ವಾರಸಮುದ್ರ ಹಳೇಬೀಡು
ಹೊಯ್ಸಳ ವಂಶದ ನೆಲೆಬೀಡು
ಹೆಣೆದಂತೆ ಗುಬ್ಬಚ್ಚಿಯೊಂದು ಗೂಡು
ಶಿಲ್ಪಗಳ ತಾಯ್ನಾಡಾಗಿದೆ ನಮ್ಮ ಕರುನಾಡು
ಒಮ್ಮೆಯಾದರು ನೋಡಬನ್ನಿ ನಮ್ಮೂರ
ರಾಜ ವಿಷ್ಣುವರ್ಧನರಾಳಿದ ಬೇಲೂರ.
- ಸುಮ ಪ್ರೃಥ್ವಿರಾಜ್ (ದೊರೆಸಾನಿ), ಎನ್. ನಿಡಗೋಡು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ