ಸೋಮವಾರ, ಮಾರ್ಚ್ 3, 2025

ಮಧುರ ಮೌನ...

""ಮಧುರ ಮೌನ""
 ಮಧುರ ಮೌನವಿರಲು ಮಾತಿನ ಹಂಗೇಕೆ ಗೆಳೆಯ
 ಭಾವನೆಯ ತಿಳಿಯಲು ಕಣ್ಣ ಭಾಷೆ ಸಾಕಲ್ಲವೇ ಇನಿಯ

 ಹೃದಯ ತೋಟದ ಪ್ರೇಮ ಸುಮ ಸೌಗಂಧ ಬೀರದೇನು
 ಒಲವ ಪ್ರಕಟಕೆ ಮೌನ ಭಾಷೆಯ ಸಲುಗೆ ಸಾಲದೇನು

 ಕಣ್ಣೋಟವೇ ತಿಳಿಸುವುದು ಮನದ ಭಾಷೆಯ 
ತುಸು ಲಜ್ಜೆಯೇ ಅರುಹುವುದು ಹೃದಯದಾಸೆಯ 

ಸಾವಿರ ಮಾತುಗಳ ಗೊಡವೆ ಬೇಕಿಲ್ಲವಲ್ಲ 
ಒಲವ ಪಯಣದ ಸಿಹಿ ಮೌನವೇ ಹಿತವಾಗಿದೆ ನಲ್ಲ

 ಒಪ್ಪಿ ಅಪ್ಪಿದ ಮೇಲೆ ಮೌನದ ಚಿಪ್ಪು ಮುತ್ತಾದಂತೆ 
ಸ್ವಾತಿ ಹನಿಯೊಂದು ಕಡಲೊಳಗೆ ಮೌನದಿ ಬೆರೆತಂತೆ

 ಸಿಹಿ ಗಾಳಿಯಲಿ ಮೌನದಿ ತೇಲಿದ ಒಲವ ಸಂದೇಶ ಹಿತವಾಗಿದೆ
  ಎದೆಯಪ್ಪಿದ ಹೊಸ ತಲ್ಲಣಕೆ ಮನ ಮೌನದಿ ಸಹಿ ಹಾಕಿದೆ
 
 ಮಧುಮಾಲತಿ ರುದ್ರೇಶ್* ಬೇಲೂರು

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಶ್ರೀಮತಿ ಬಿ ಬಿ ದೇವದುರ್ಗ ಅವರಿಗೆ ಜಿಲ್ಲಾ ಮಟ್ಟದ ಉತ್ತಮ ಪ್ರಶಸ್ತಿ...

ಶ್ರೀಮತಿ ಬಿ ಬಿ ದೇವದುರ್ಗ ಅವರಿಗೆ ಜಿಲ್ಲಾ ಮಟ್ಟದ ಉತ್ತಮ ಪ್ರಶಸ್ತಿ.....            ಜಿಲ್ಲಾ ಆಡಳಿತ ಜಿಲ್ಲಾ ಪಂಚಾಯತ್   ಉಪನಿರ್ದೇಶಕರ ಹಾಗೂ ಕ್ಷೇತ್ರ...