*' *ಪರ್ಷಿಯನ್ ಜನಮಾನಸದಲ್ಲಿ ನೆಲೆಯೂರಿದ ರುಬಾಯಿಗಳನ್ನು ಕನ್ನಡಕ್ಕೆ ರುಚಿಸುವಂತೆ ಮಾಡಿದ ಮಾಣಿಕ್ಯ ಡಿ.ವಿ.ಜಿ'*
ಶ್ರೀ ಸಿದ್ದೇಶ್ವರ ಸಾಹಿತ್ಯ ವೇದಿಕೆ ಜಿಲ್ಲಾ ಘಟಕ ಚಿತ್ರದುರ್ಗ ಮತ್ತು ರಾಜ್ಯ ಘಟಕದ ಸಹಯೋಗದಲ್ಲಿ ರಾಜ್ಯ ಮಟ್ಟದ 'ರುಬಾಯಿ ಸ್ವ ರಚನೆ ಹಾಗೂ ವಾಚನ ಕವಿಗೋಷ್ಠಿ ' ಕಾರ್ಯಕ್ರಮವನ್ನು ದಿನಾಂಕ 27.06.2021 ರ ಭಾನುವಾರ ಗೋಧೂಳಿ ಸಮಯ 05 ಗಂಟೆಗೆ ಆನ್ಲೈನ್ ಮೂಲಕ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮ ಯಾವುದೇ ರೀತಿಯ ತೊಂದರೆಯಿಲ್ಲದೆ ನಡೆಯಲು ಶ್ರೀಮತಿ ಪುಷ್ಪಲತ ಅವರು ಶಾರದೆಯನ್ನು ಕುರಿತ ಹಾಡನ್ನು ಹಾಡುವುದರ ಮೂಲಕ ಪ್ರಾರ್ಥನೆಯನ್ನು ಮಾಡಿದರು. ಚಿತ್ರದುರ್ಗ ಜಿಲ್ಲಾ ಘಟಕದ ಹೊಸದುರ್ಗ ತಾಲ್ಲೂಕಿನ ಅಧ್ಯಕ್ಷರಾದ ಶ್ರೀ ಮುರಳಿಯವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಗಣ್ಯಾತಿ ಗಣ್ಯರು ಹಾಗು ಕವಿ ಮನಗಳನ್ನು ಸ್ವಾಗತಿಸಿದರು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ವಿಜಯಪುರದ ಹಿರಿಯ ಸಾಹಿತಿಗಳಾದ ಶ್ರೀಮತಿ ಪ್ರಭಾವತಿ ದೇಸಾಯಿ ಅವರು ಮಾತನಾಡಿ,
'ನಮ್ಮದಲ್ಲದ ಮಗು ನಮ್ಮದೆಂದು ಹೇಳಲು ಸಾಧ್ಯವೆ?.' ಪ್ರಸ್ತುತ ದಿನಗಳಲ್ಲಿ ತಮ್ಮದಲ್ಲದ ಸಾಹಿತ್ಯವನ್ನು ನಕಲು ಮಾಡಿ, ಅದರಲ್ಲಿ ಅಲ್ಪ ಸ್ವಲ್ಪ ಬದಲಾವಣೆ ಮಾಡಿ ನಮ್ಮದೇ ಸಾಹಿತ್ಯ ರಚನೆಯೆಂದು ನಾಮಫಲಕ ಹಾಕುವುದು ಸಾಹಿತ್ಯ ವಲಯದಲ್ಲಿ ತುಂಬಾ ಕಳವಳ ಕಾರಿ ಸಂಗತಿಯಾಗಿದೆ. ಕಾವ್ಯ ಹೃದಯದಿಂದ, ಹೂವು ಅರಳುವಂತೆ ಮಾಡಬೇಕು, ಆಗ ಮಾತ್ರ ಕಾವ್ಯ ಜೀವಂತವಾಗಿ ಉಳಿಯುತ್ತದೆ. ಒತ್ತಾಯ ಪೂರ್ವಕವಾದ ಕಾವ್ಯ ರಚನೆ ದೀರ್ಘ ಕಾಲ ತನ್ನ ತನವನ್ನು ಉಳಿಸಿ ಕೊಳ್ಳುವುದಿಲ್ಲ. ಇಂದು ಕಾವ್ಯ ತನ್ನ ವ್ಯಾಪ್ತಿಯು ವಿಶಾಲವಾದುದು. ಇಂತಹ ವಿಶಾಲ ಕ್ಷೇತ್ರದಲ್ಲಿ ಪರದೇಶದಿಂದ ಬಂದ ಗಜಲ್, ಶಾಯಿರಿ,ಟಂಕ ,ಹೈಕೋ , ರುಬಾಯಿಗಳು ಪ್ರಮುಖವಾದುವು. ಇರಾನ್ ದೇಶದಲ್ಲಿ ತನ್ನದೆಯಾದ ಛಾಪನ್ನು ಪಾರ್ಸಿ ಭಾಷೆಯಲ್ಲಿ ಮೂಡಿಸಿದೆ. ಇದರ ರೂವಾರಿ ಉಮರ್ ಖಯಾಮ್. ಇದು ನಾಲ್ಕು ಸಾಲಿನ ಕಾವ್ಯ ಪ್ರಕಾರ. ಇದನ್ನು ಅಹಮದ್ ಹೈದರಾಬಾದ್ ಅವರು ಉರ್ದು ಭಾಷೆಯಲ್ಲಿ ರುಬಾಯಿಗಳನ್ನು ರಚಿಸಿದ್ದಾರೆ. ಕನ್ನಡಕ್ಕೆ ರುಬಾಯಿ ರಚನೆಯಲ್ಲಿ ಡಿ ವಿ ಜಿ ಯವರು ಮೊದಲಿಗರು . ಉಮರ್ ಖಯಮ್ ರವರ ರುಬಾಯಿಗಳನ್ನು 'ಉಮರನ ವಸಗೆ ' ಶೀರ್ಷಿಕೆಯಲ್ಲಿ ಕನ್ನಡಕ್ಕೆ ಅನುವಾದಿಸಿದ್ದಾರೆ. ಕನ್ನಡ ಸಾಹಿತ್ಯದಲ್ಲಿ ರುಬಾಯಿ ರಚನೆಯ ಮೊದಲಿಗರು. ಹೀಗೆ ರುಬಾಯಿಗಳ ರಚನೆ ಇಂಗ್ಲಿಷ್, ಹಿಂದಿ, ಉರ್ದು ಭಾಷೆಗಳಲ್ಲೂ ಮೂಡಿಸಿದೆ ಎಂದರು.
ಕಾವ್ಯ ಕಾಲ್ಪನಿಕ ಶಕ್ತಿಯೊಂದಿಗೆ, ಆಂತರ್ಯ ಹಾಗೂ ಬಾಹ್ಯ ಪ್ರಪಂಚಕ್ಕೆ ಅಮೋಘವಾದ ಕಾಣಿಕೆಯನ್ನು ನೀಡುತ್ತದೆ. ಇದು ಸೃಜನಶೀಲವಾಗಿದ್ದು,ಹೃದಯಾನಂದವನ್ನು ಉಂಟು ಮಾಡುತ್ತದೆ . ಈ ರುಬಾಯಿ ಕಾರ್ಯಕ್ರಮದ ಚೌಕಟ್ಟನ್ನು ತಮ್ಮ ಆಶಯ ನುಡಿಯಲ್ಲಿ ಚಿತ್ರದುರ್ಗ ಶ್ರೀ ಸಿದ್ದೇಶ್ವರ ಸಾಹಿತ್ಯ ವೇದಿಕೆಯ ಜಿಲ್ಲಾಧ್ಯಕ್ಷರಾದ ಶ್ರೀಮತಿ ಶೈಲಜಾ ಬಾಬು ರವರು ನುಡಿದರು. ಬೆಳಗಾವಿ ಜಿಲ್ಲೆಯ ಅಧ್ಯಕ್ಷರಾದ ಶ್ರೀಮತಿ ಆಶಾ.ಎಸ್.ಯಮಕನಮರಡಿಯವರು ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸಕರಾಗಿ,
ರುಬಾಯಿ ರಚನೆಯ ಇತಿಹಾಸ ಸಾವಿರಾರು ವರ್ಷಗಳದು. ಆದರೆ ಕನ್ನಡದಲ್ಲಿ ಇತ್ತೀಚಿನ ದಿನಗಳಲ್ಲಿ ತನ್ನ ಪ್ರಾಮುಖ್ಯತೆ ಉಂಟು ಮಾಡುತ್ತಿದೆ .ಕೊರೊನ ಸಂಕಷ್ಟದ ಕಾಲದಲ್ಲಿ ತಾಂತ್ರಿಕವಾಗಿ ಅನೇಕ ವೇದಿಕೆಗಳ ಮೂಲಕ ರುಬಾಯಿಗಳು ತನ್ನ ಪರಿಧಿಯನ್ನು ವಿಸ್ತರಿಸಿಕೊಳ್ಳುತ್ತಿದೆ. ಇದು ಪ್ರಾರಂಭದಲ್ಲಿ ಆಧ್ಯಾತ್ಮಿಕ ಮತ್ತು ತಾತ್ವಿಕ ನೆಲೆಯಲ್ಲಿ ತನ್ನ ರಚನೆ ಇರುತ್ತಿತ್ತು. ಆದರೆ ಪ್ರಸ್ತುತ ವಾಸ್ತವ, ಸಾಮಾಜಿಕ ಮುಂತಾದ ವಿಷಯ ವಸ್ತುಗಳು ರುಬಾಯಿ ರಚನೆ ಪ್ರಚಲಿತಲಿದೆ.ಇದು ಇತ್ತೀಚೆಗೆ ತನ್ನ ಪ್ರಾಮುಖ್ಯತೆ ಹೆಚ್ಚಿಸಿಕೊಳ್ಳಲು ಕಾರಣ ನಾಲ್ಕು ಸಾಲಿನ ಪದ್ಯವಾಗಿರುವುದರಿಂದ.ರುಬಿ ಎಂದರೆ ಪರ್ಷಿಯನ್ ಭಾಷೆಯಲ್ಲಿ ನಾಲ್ಕು ಎಂದು. ಈ ನಾಲ್ಕು ಸಾಲಿನ ರುಬಾಯಿ ಕವನವು 'ಚೌಪದಿಯಲ್ಲಿದ್ದರು ಚೌಪದಿಯಲ್ಲ, ಕೊಡ ನೀರನ್ನು ಹಿಡಿಯುವ ಹಿಡಿ ನೀರು'. ಇದು ಛಂದೋ ಬದ್ದವಾಗಿ ರಚನೆಯಾಗುವ ಶಾಸ್ತ್ರ ಬದ್ಧವಾದ ಚೌಕಟ್ಟಿನ್ನು ಹೊಂದಿರುವ ನಾಲ್ಕು ಸಾಲಿನ ಶಬ್ದವೇ ರುಬಾಯಿ. 'ವಾಕ್ಯ ರಸಾತ್ಮಕಂ ಕಾವ್ಯಂ' ಎನ್ನುವಂತೆ ಕಾವ್ಯ ಕವಿಯ ಮಾತಿನಿಂದ ಮನಸ್ಸು ಅರಳುವಂತೆ ಇರಬೇಕು. ಬೌದ್ಧಿಕ, ಹಾಗು ಸಾಮಾಜಿಕ ಜ್ಞಾನವನ್ನು ವೃದ್ಧಿಸಿಕೊಳ್ಳುವಂತೆ ಇರಬೇಕು. ಇದು ಪಂಪನ ಮಾತಿನಂತೆ ' ಕಿರಿದರೊಳ್ ಹಿರಿದರ್ಥಂ ಪೇಳ್ವರೊಳ್' ರುಬಾಯಿ ನಾಲ್ಕು ಸಾಲಿನಲ್ಲಿ ಸರಳ ರಚನೆಯಾಗಿದ್ದರು , ಆಂತರ್ಯದಲ್ಲಿ ಹಾಗೂ ಬಾಹ್ಯದಲ್ಲಿ ವಿಶಾಲ ಅರ್ಥ ಬರುವಂತೆ ರಚನೆಯಿರ ಬೇಕು. ಡಿ ವಿ ಜಿ ಯವರು ಉಮರ್ ನ 86 ರುಬಾಯಿಗಳನ್ನು ಕನ್ನಡ ಕ್ಕೆ ಉಮರನ ವಸಗೆ ಎಂಬ ಶೀರ್ಷಿಕೆ ಯಲ್ಲಿ ರಚಿಸಿದ್ದಾರೆ. ಶ್ರೀ ಸಿದ್ದೇಶ್ವರ ಸಾಹಿತ್ಯ ವೇದಿಕೆ ಸಂಸ್ಥಾಪಕ ಅಧ್ಯಕ್ಷರಾದ ಶ್ರೀಮತಿ ಗಿರಿಜಾ ಮಾಲಿ ಪಾಟೀಲ ಹಾಗೂ ರಾಯಚೂರಿನ ಖ್ಯಾತ ರುಬಾಯಿ ರಚನೆಕಾರರಾದ ಬ್ಯಾಳಿ ಅವರು ರಚಿಸಿದ ರುಬಾಯಿಯನ್ನು ಉದಾಹರಣೆಗೆ ವಾಚನ ಮಾಡಿ ಅದರ ರಚನೆಯ ಲಕ್ಷಣ, ಮಹತ್ವವನ್ನು ತಿಳಿಸಿ, ಅನೇಕ ರುಬಾಯಿಗಳನ್ನು ವಾಚಿಸಿ, ರುಬಾಯಿಗಳ ರಚನೆಯ ಉಪನ್ಯಾಸ ಕಾರ್ಯಕ್ರಮದಲ್ಲಿ ಎಳೆ ಎಳೆಯಾಗಿ ರುಬಾಯಿ ರಚನೆಯ ಚೌಕಟ್ಟನ್ನು ತಮ್ಮ ನುಡಿಯ ಮೂಲಕ ಉಣ ಬಡಿಸಿದರು. ಶ್ರೀ ಸಿದ್ದೇಶ್ವರ ಸಾಹಿತ್ಯ ವೇದಿಕೆಯ ರಾಜ್ಯ ಸಂಚಾಲಕರೂ ಆದ ಆಶಾ.ಎಸ್.ಯಮಕನಮರಡಿಯವರು ತುಂಬಾ ಕ್ರಿಯಾಶೀಲ ಸಂಘಟಕರು, ಉತ್ತಮ ಸಾಹಿತಿಗಳು ಆಗಿದ್ದಾರೆ.
ಈ ಸುಂದರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಶ್ರೀಮತಿ ಭಾಗ್ಯ ಗಿರೀಶ್, ಶ್ರೀಮತಿ ಮೀರಾ ನಾಡಿಗ್, ಶ್ರೀಮತಿ ವನಜಾ ಸುರೇಶ್, ಶ್ರೀಮತಿ ಸುಜಾತ ಪ್ರಾಣೇಶ್, ಶ್ರೀಮತಿ ಸತ್ಯಪ್ರಭ ಶ್ರೀ ಸಿದ್ಧೇಶ್ವರ ಸಾಹಿತ್ಯ ವೇದಿಕೆಯ ಅತಿಥಿಗಳು ಕಾರ್ಯಕ್ರಮದ ಆಯೋಜನೆ ತುಂಬಾ ಪ್ರಶಂಸನೀಯವಾಗಿದೆ, ಅದರಲ್ಲೂ ರಾಜ್ಯ ಮಟ್ಟದ ರುಬಾಯಿ ರಚನೆ ಮತ್ತು ವಾಚನ ಕವಿಗೋಷ್ಠಿ ಬಹಳ ವಿಶೇಷವಾದುದು ಎಂದು ತಮ್ಮ ಅತಿಥಿನುಡಿಯಲ್ಲಿ ತಿಳಿಸಿದರು.
ಈ ಸುಂದರ ಕಾರ್ಯಕ್ರಮದಲ್ಲಿ ಸಂಸ್ಥಾಪಕ ಅಧ್ಯಕ್ಷರ ಉಪಸ್ಥಿತರಿದ್ದರು ಭಾಗವಹಿಸಿದ್ದ ಶ್ರೀಮತಿ ಭಾಗ್ಯ ಗಿರೀಶ್, ಶ್ರೀಮತಿ ಮೀರಾ ನಾಡಿಗ್ , ಶ್ರೀಮತಿ ವನಜಾ ಸುರೇಶ್, ಶ್ರೀಮತಿ ಸುಜಾತ ಪ್ರಾಣೇಶ್, ಶ್ರೀಮತಿ ಸತ್ಯಪ್ರಭ ಶ್ರೀ ಸಿದ್ಧೇಶ್ವರ ಸಾಹಿತ್ಯ ವೇದಿಕೆಯ ಅತಿಥಿಗಳು ಕಾರ್ಯಕ್ರಮದ ಆಯೋಜನೆ ತುಂಬಾ ಪ್ರಶಂಸನೀಯವಾಗಿದೆ,ಅದರಲ್ಲೂ ರಾಜ್ಯ ಮಟ್ಟದ ರುಬಾಯಿ ರಚನೆ ಮತ್ತು ವಾಚನ ಕವಿಗೋಷ್ಠಿ ಬಹಳ ವಿಶೇಷವಾದುದು ಎಂದು ತಮ್ಮ ಅತಿಥಿನುಡಿಯಲ್ಲಿ ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಬಹಳ ಸೊಗಸಾಗಿ ರುಬಾಯಿಗಳನ್ನು ರಚಿಸಿ ಕವಿಮನಗಳು ಮನ ಮುಟ್ಟುವಂತೆ ವಾಚನ ಮಾಡಿದರು. ರುಬಾಯಿಗಳನ್ನು ಅರಬ್ ಭಾಷೆಯಲ್ಲಿ ಅಬ್ದುಲ್ ಅಸನ್ ರೂಡ್ಕಿ ರಚನೆ ಮಾಡಿದರು ಎಂಬ ಮಾತು ಇದೆ ಆದರೆ ಇದನ್ನು ಬಹಳ ವ್ಯಾಪಕವಾಗುವಂತೆ ಮಾಡಿದ ವ್ಯಕ್ತಿತ್ವ ಖ್ಯಾತ ಕವಿ ಉಮರ್ ಖಾಯಂ. ಈತ ಪ್ರೀತಿ, ಪ್ರೇಮ,ನಿರಾಸೆ ಮೊದಲಾದ ವಿಶೇಷತೆಯುಳ್ಳ ಅಂಶಗಳಲ್ಲಿ ರಚನೆಯನ್ನು ಮಾಡಿದ್ದಾರೆ. ಇಂದು ಇವರ ರುಬಾಯಿಗಳು ಜನಮಾನಸದಲ್ಲಿ ನೆಲೆನಿಂತಿದ್ದು, ಅದು ಬಿಂದುವಿನಲ್ಲಿ ಸಿಂಧುತುಂಬುವಂತೆ ಇದೆ. ಎಂದು ಕಾರ್ಯಕ್ರಮದ ಅಧ್ಯಕ್ಷತೆಯಲ್ಲಿ ಭಾಗವಹಿಸಿದ ಶ್ರೀ ಸಿದ್ಧೇಶ್ವರ ಸಾಹಿತ್ಯ ವೇದಿಕೆ ಬಾಗಲಕೋಟೆಯ ಅಧ್ಯಕ್ಷರಾದ ಅತ್ಯುತ್ತಮ ವಾಗ್ಮಗಳು ಹಾಗೂ ಸಾಹಿತಿಗಳೂ ಆದ ಶ್ರೀಮತಿ ಜಯಶ್ರೀ ಭಂಡಾರಿ ಅವರು ತಮ್ಮ ಅಧ್ಯಕ್ಷೀಯ ನುಡಿಯಲ್ಲಿ ತಿಳಿಸಿದರು. ಹಾಗೆಯೆ ಕಾರ್ಯಕ್ರಮದ ತೀರ್ಪುಗಾರರಾಗಿ ಗುರುತರವಾದ ಜವಾಬ್ದಾರಿಯನ್ನು ಅವರು ವಹಿಸಿಕೊಂಡಿದ್ದರು.
ಈ ಕಾರ್ಯಕ್ರಮದಲ್ಲಿ ಬಹಳ ಸೊಗಸಾಗಿ ರುಬಾಯಿಗಳನ್ನು ರಚಿಸಿ ಕವಿಮನಗಳು ಮನ ಮುಟ್ಟುವಂತೆ ವಾಚನ ಮಾಡಿದರು. ರುಬಾಯಿಗಳನ್ನು ಅರಬ್ ಭಾಷೆಯಲ್ಲಿ ಅಬ್ದುಲ್ ಅಸನ್ ರೂಡ್ಕಿ ರಚನೆ ಮಾಡಿದರು ಎಂಬ ಮಾತು ಇದೆ ಆದರೆ ಇದನ್ನು ಬಹಳ ವ್ಯಾಪಕವಾಗುವಂತೆ ಮಾಡಿದ ವ್ಯಕ್ತಿತ್ವ ಖ್ಯಾತ ಕವಿ ಉಮರ್ ಖಾಯಂ. ಈತ ಪ್ರೀತಿ, ಪ್ರೇಮ, ನಿರಾಸೆ ಮೊದಲಾದ ವಿಶೇಷತೆಯುಳ್ಳ ಅಂಶಗಳಲ್ಲಿ ರಚನೆಯನ್ನು ಮಾಡಿದ್ದಾರೆ. ಇಂದು ಇವರ ರುಬಾಯಿಗಳು ಜನಮಾನಸದಲ್ಲಿ ನೆಲೆನಿಂತಿದ್ದು, ಅದು ಬಿಂದುವಿನಲ್ಲಿ ಸಿಂಧು ತುಂಬುವಂತೆ ಇದೆ. ಎಂದು ಕಾರ್ಯಕ್ರಮದ ಅಧ್ಯಕ್ಷತೆಯಲ್ಲಿ ಭಾಗವಹಿಸಿದ ಭಂಡಾರಿಯವರು ತಮ್ಮ ನುಡಿಯಲ್ಲಿ ತಿಳಿಸಿದರು. ಇಡೀ ಕಾರ್ಯಕ್ರಮವು ಚಿತ್ರದುರ್ಗ ಘಟಕದ ಉಪಾಧ್ಯಕ್ಷರಾದ ಶ್ರೀಮತಿ ಭಾಗ್ಯ ಗಿರೀಶ್ ಅವರ ಅತ್ಯುತ್ತಮ ನಿರ್ವಹಣೆಯ ನಿರೂಪಣೆಯಲ್ಲಿ ಮೂಡಿ ಬಂತು. ವಂದನಾರ್ಪಣೆಯನ್ನು ಶ್ರೀ ಸಿದ್ದೇಶ್ವರ ಸಾಹಿತ್ಯ ವೇದಿಕೆಯ ಗೌರವ ಸದಸ್ಯರಾದ ರಾಯಚೂರಿನ ನನ್ನೂರೆಯವರು ನೆರವೇರಿಸಿದರು.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ : 9448241450 ಸಂಪಾದಕರು ವಿ ಮ ಸಾ ಪತ್ರಿಕೆ)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ