ರೋಗಿಗಳ ಪಾಲಿನ ಆಶಾ ಕಿರಣ ಡಾ// ಬಸವರಾಜ ಕ್ಯಾವಟರ.
ವೈದ್ಯೋ ಹರಿನಾರಾಯಣ ಎಂಬಂತೆ ತಂದೆ ತಾಯಿಗಳು ನಮಗೆ ಜನ್ಮವನ್ನು ನೀಡಿದರೆ ದೇವರು ಜೀವನಪೂರ್ತಿ ನಮ್ಮ ಜೀವನಕ್ಕೆ ಬೇಕಾಗಿರುವ ಎಲ್ಲಾ ಸೌಲಭ್ಯವನ್ನು ಒದಲಿಸುತ್ತಾನೆ.ಜೀವನ ನಿರ್ವಹಣೆಯಲ್ಲಿ ದೇಹ ಮತ್ತು ಮನಸ್ಸಿಗೆ ಏನಾದರೂ ತೊಂದರೆಯಾದರೆ ಜನ್ಮ ನೀಡಿದ ತಂದೆ ತಾಯಿಗಳಿಂದ ಆ ದೇವರು ಕೂಡ ನಮ್ಮನ್ನು ಬದುಕಿಸಲು ಸಾಧ್ಯವಿಲ್ಲದ ಸ್ಥಿತಿಯಲ್ಲಿ ಇರವಾಗ ನಮಗೆ ಮರುಜನ್ಮ ನೀಡುವವರು ವೈದ್ಯರು ಆದ್ದರಿಂದ ವೈದ್ಯೋ ಹರಿನಾರಾಯಣ ಏನ್ನುತ್ತಾರೆ. ಇಂತಹ ಹಲವಾರು ದೇವರ ಸ್ವರೂಪಿಗಳು ಆಗಿರುವಂತ ವೈದ್ಯರಲ್ಲಿ ಡಾ. ಬಸವರಾಜ್ ಕ್ಯಾವಟರ ಕೂಡ ಒಬ್ಬರಾಗಿದ್ದಾರೆ.
ಕಿರಿಯ ವಯಸ್ಸಿನಲ್ಲೇ ವೈದ್ಯಕೀಯ ಕ್ಷೇತ್ರದಲ್ಲಿ ಅಂತರಾಷ್ಟ್ರೀಯ ರಾಷ್ಟ್ರೀಯ ಮಟ್ಟದಲ್ಲಿ ಗಮನಾರ್ಹ ಸಾದನೆ ಮಾಡಿದ್ದಲ್ಲದೆ ಸಮಾಜಮುಖಿಯಾಗಿ ಶ್ರಮಿಸುತ್ತಿರುವ ಕುಷ್ಟಗಿ ತಾಲೂಕಿನ ನವಲಹಳ್ಳಿ ಗ್ರಾಮದ ಯುವಕ, ವಿಶೇಷ ಶಸ್ತ್ರ ಚಿಕಿತ್ಸಾ ತಜ್ಞವೈದ್ಯ ಡಾ ಬಸವರಾಜ ಕ್ಯಾವಟರ್ ಅವರು ಇಂದಿನ ಯುವಕರಿಗೆ ಮಾದರಿಯಾಗಿದ್ದಾರೆ.
ಕುಷ್ಟಗಿ ಪಟ್ಟಣದಲ್ಲಿ ಕನ್ನಡ ಮಾಧ್ಯಮದಲ್ಲಿ ಪ್ರಾಥಮಿಕ ,ಪ್ರೌಡ ಶಿಕ್ಷಣ ಪಡೆದು ಬಳಿಕ ಆಸಕ್ತ ವಿಜ್ಞಾನ ಕ್ಷೇತ್ರದಲ್ಲಿ ಸಾಧನೆ ಗುರಿ ಇಟ್ಟುಕೊಂಡು ವಿದ್ಯಾಭ್ಯಾಸ ಮುಂದುವರಿಸಿದ ಡಾ// ಬಸವರಾಜ ಬೆಳಗಾವಿ ಜೆಎನ್ಎಂಸಿ ಕಾಲೇಜಿನಲ್ಲಿ ಎಂಬಿವಿಎಸ್ ಪದವಿ 2001 ರಲ್ಲಿ, ಮಂಗಳೂರಿನ ಮಣಿಪಾಲ್ ಕಸ್ತೂರಬಾ ಮೆಡಿಕಲ್ ಕಾಲೇಜಿನಲ್ಲಿ ಎಂಎಸ್(ಆರ್ಥೋಪಿಡಿಕ್ಸ್) 2005 ರಲ್ಲಿ ಉನ್ನತ ಪದವಿ ಪಡೆದರು .ಇದೇ ಕ್ಷೇತ್ರದಲ್ಲಿ ವಿಶೇಷ ಅಧ್ಯಯನ ತರಬೇತಿಗಾಗಿ ನ್ಯೂಯಾರ್ಕ್, ಜರ್ಮನ್ ದೇಶಗಳಲ್ಲಿ ಕೆಲ ವರ್ಷಗಳ ಕಾಲ ನೆಲಿಸಿ ಪೂರ್ಣ ಪ್ರಮಾಣದ ವಿಶೇಷ ವೈದ್ಯತಜ್ಞರಾಗಿ ರೂಪಗೊಂಡು ಭಾರತ ದೇಶಕ್ಕೆ ಮರಳಿದರು.ದೇಶದ ಹಲವು ಮಲ್ಟಿಸ್ಪೇಷಲಿಟಿ ಆಸ್ಪತ್ರೆಗಳಲ್ಲಿ ವೈದ್ಯಕೀಯ ಸೇವೆಗೆ ಆಹ್ವಾನ ಬಂದರೂ ತಾಯ್ನಾಡು ಕರ್ನಾಟಕದಿಂದ ದೂರುಳಿಯದೇ ಬೆಂಗಳೂರಿನಲ್ಲಿ ಸೇವೆ ಪ್ರಾರಂಬಿಸಿದರು.ಬೆಂಗಳೂರಿನ ಪ್ರತಿಷ್ಠಿತ ಆಸ್ಪತ್ರೆಯಾದ ಸಾಗರ ಹಾಸ್ಪಿಟಲ್‌ನಲ್ಲಿ ಆರ್ಥೋಪಿಡಿಕ್ಸ್ ವಿಭಾಗದಲ್ಲಿ ವಿಶೇಷ ತಜ್ಞವೈದ್ಯರಾಗಿ ಸೇವೆ.ರಾಜುಗಾಂಧೀ ಮೆಡಿಕಲ್ಸಾಯನ್ಸ್ ನಲ್ಲಿ ಸೇವೆ.ಮುಂಬೈ ಮಲ್ಟಿಸ್ಪೇಷಲಿಟಿ ಆಸ್ಪತ್ರೆಯಲ್ಲಿ ವಿಶೇಷ ಆಹ್ವಾನಿತ ವೈದ್ಯರಾಗಿ ಸೇವೆ ಹಾಗೂ ಅಮೇರಿಕಾ,ಯುಕೆ,ದುಬೈ(ಯುನೈಟೆಡ್ ಅರಬ್ ಎಮಿರೇಟ್ಸ್) ದೇಶಗಳಲ್ಲಿ ವಿಶೇಷ ಆರ್ಥೋಪಿಡಿಕ್ಸ್ ಶಸ್ತ್ರಚಿಕಿತ್ಸ್ರೆಗೆ ಆಹ್ವಾನದ ಮೇರೆಗೆ ತೆರಳುತ್ತಾರೆ. ಈ ಎಲ್ಲಾ ಸೇವೆಗಳ ಜೊತೆ ತಾಯ್ನಾಡಿನ ಅದು ಅವರ ಹುಟ್ಟೂರಾದ ನವಲಹಳ್ಳಿ .ಕುಷ್ಟಗಿ ತಾಲೂಕು ಕೊಪ್ಪಳದ ಸಂಪರ್ಕ ಕಳೆದು ಕೊಂಡಿಲ್ಲಾ.ಈ ಭಾಗದ ಜನರಿಗೆ ತಮ್ಮಿಂದಾದ ಸೇವೆಯನ್ನು ಬೆಂಗಳೂರಿನಂತಹ ನಗರದಲ್ಲಿ ಹಲವಾರು ವ್ಯಕ್ತಿಗಳಿಗೆ ಉಚಿತ ಆರೋಗ್ಯ ಸೇವೆ ನೀಡಿರುವದು.ಇವರಿಗಿರುವ ಹುಟ್ಟುನ ಬಗ್ಗೆ ಇರುವ ಕಾಳಜಿ ತೊರಿಸುತ್ತದೆ.ಇವರ ಕಾಳಜಿ ಎಷ್ಟಿದೇ ಅಂದರೆ ಲಕ್ಷಾನು- ಲಕ್ಷ ಹಣ ಖರ್ಚು ಮಾಡಿದರು ಗುಣಮುಖವಾದ ಕಾಯಿಲೆಯನ್ನು ಗುಣಪಡಿಸಿದ್ದಾರೆ ಇದರಲ್ಲಿ ಕಡುಬಡವರಿದ್ದವರಿಗೆ ಆಸ್ಪತ್ರೆಯ ವೆಚ್ಚದ ಜೊತೆ ಅವರ ಪ್ರವಾಸ ವೆಚ್ಚವನ್ನು ಅವರೆ ಕೊಟ್ಟು ಕಳುಯಿಸಿದ ಉದಾಹರಣೆ ಇದೆ.ಕೊಪ್ಪಳದ ಜನತೆಗೆ ಪ್ರಯಾಣದ ತೊಂದರೆಯಾಗಬಾರದೆಂಬ ಕಾಳಜಿಯಿಂದ ಕೊಪ್ಪಳದ ಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳ ಆಹ್ವಾನದ ಮೇರೆಗೆ ಕೆಲ ವರ್ಷಗಳ ಕಾಲ ನಗರದಲ್ಲಿ ಇರುವ ಶ್ರೀ ಜಗದ್ಗುರು ಗವಿಸಿದ್ದೇಶ್ವರ ಆರ್ಯುವೇದ ಆಸ್ಪತ್ರೆಗೆ ತಿಂಗಳಿಗೆ ಎರಡೂ ಬಾರಿ ಬೇಟಿ ಮಾಡಿ.ಈ ಭಾಗದ ಜನರಿಗೆ ವೈದ್ಯಕೀಯ ತಪಾಸಣೆ ಮಾಡಿ ರೋಗವನ್ನು ಗುಣಪಡಿಸು ಸೇವೆ ಮಾಡಿದ್ದಾರೆ. ಈ ಸೇವೆ ಮುಂದುವರೆಸಲು ತಮ್ಮ ಅಭಿಲಾಸೆಯನ್ನು ಅಭಿನವಶ್ರೀ ಜೊತೆ ಚರ್ಚಿಸಿ, ಅಭಿನವಶ್ರೀಗಳವರ ಆರ್ಶಿವಾದದೊಂದಿಗೆ ಕೊಪ್ಪಳ ನಗರದಲ್ಲಿ ಅಂತರಾಷ್ಟ್ರೀಯ ಮಟ್ಟದ ವೈದ್ಯಕೀಯ ಸೌಲಭ್ಯಗಳನ್ನು ಹೊಂದಿರುವ ಕೆ ಎಸ್ ಆಸ್ಪತ್ರೆಯನ್ನು ಪ್ರಾರಂಬಿಸಿದ್ದಾರೆ.
ಜೀವನದಲ್ಲಿ ಎಂತಹ ಕಷ್ಟ ಬಂದರು ಎದುರಿಸುವ ಕಲೆಯನ್ನು ಹೊಂದಿರು ಡಾ// ಬಸವರಾಜ ಕಷ್ಟಗಳ ಮದ್ಯ ಕಷ್ಟದಲ್ಲಿ ಇರುವ ವ್ಯಕ್ತಿಗಳಿಗೆ ಸಹಾಯ ಮಾಡುವದನ್ನು ಮಾತ್ರ ಮರೆತಿಲ್ಲಾ. ರಸ್ತೆ ಅಪಘಾತದಲ್ಲಿ ನನಗಾದ ತೊಂದರೆಯಿಂದ ನನ್ನ ಜೀವನ ಮುಗಿದೇ ಹೋಯಿತು ಎನ್ನುವಾಗ ಶಸ್ತ್ರಚಿಕಿತ್ಸೆ ಹಾಗೂ ಆತ್ಮವಿಶ್ವಾಸದ ಮೂಲಕ ಸಮಾಜದ ಮುಖ್ಯವಾಹಿನಿಗೆ ಬರುವಂತೆ ಮಾಡಿದ್ದಾರೆ.ನನ್ನಜನ್ಮದಾರ ಪಾತ್ರ ನನ್ನ ಮೇಲೆ ಎಷ್ಟಿದೆಯೋ ಅಷ್ಟೇ ಪಾತ್ರ ಅಭಿನವಶ್ರೀಗಳ ಜೊತೆ ಡಾ// ಬಸವರಾಜ ಅವರದ್ದು ಇದೆ ನನಗೆ ಮರು ಜನ್ಮ ನೀಡಿದರವರು ಇವರುಗಳೆ.
ನನ್ನಂತಹ ಸಾವಿರಾರೂ ವ್ಯಕ್ತಿಗಳ ಬದುಕಿಗೆ ಆಶಾ ಕಿರಣವಾಗಿದ್ದಾರೆ.ಅತಿ ಚಿಕ್ಕ ವಯಸ್ಸಿನಲ್ಲಿ ಆರ್ಥೋಪಿಡಿಕ್ಸ್ ವಿಭಾಗದಲ್ಲಿ ಅಪಾರ ಜ್ಞಾನ ಸಂಪಾದನೆ ಮಾಡಿರುವ ಇವರು 20 ಸಾವಿರಕ್ಕೂ ಹೆಚ್ಚು ಕೀಲು,ಚಪ್ಪೆ ಶಸ್ತ್ರಚಿಕಿತ್ಸೆಗಳ ಮೂಲಕ ರೋಗಿಗಳನ್ನು ಗುಣಮುಖ ಮಾಡಿದ್ದಾರೆ.15 ಸಾವಿರಕ್ಕೂ ಹೆಚ್ಚು ಜನರಿಗೆ ಕೀಲು ,ಚಪ್ಪೆಗಳ ಸಮಸ್ಯೆಯಿಂದ ಅತಂತ್ರ ಬದುಕು ಹೊಂದಿ ತೊಂದರೆಯಲ್ಲಿರುವ ರೋಗಿಗಳಿಗೆ ರಿಪ್ಲೇಸಮೆಂಟ್ ಶಸ್ತ್ರಚಿಕಿತ್ಸೆ ನೀಡಿ ಹೊಸ ಬದುಕು ನೀಡಿದ್ದಾರೆ.
ಅಲ್ಲದೇ ವಿದೇಶಿಗಳರು ಸೇರಿ ದೇಶದ ಮಠಾಧೀಶರು,ಚಲನಚಿತ್ರ ನಟರು,ರಾಜಕಾರಣಿಗಳು, ಗಣ್ಯರು ಚಿಕಿತ್ಸೆ ಪಡೆದಿರುವದು ವಿಶೇಷವಾಗಿದೆ.
ಆಸ್ಪತ್ರೆಯ ಪ್ರಾರಂಬವಾದ ಸ್ವಲ್ಪದರಲ್ಲೇ 200 ಹೆಚ್ಚು ಶಸ್ತ್ರಚಿಕಿತ್ಸೆಗಳು ಯಶಸ್ವಿಯಾಗಿರುವದು ಅವರ ನೈಪುಣ್ಯತೆಯನ್ನು ತೊರಿಸುತ್ತದೆ.ಮೊನ್ನೆ ತಾನೆ ಅತೀ ಕಠಿಣ ಪರಿಸ್ಥಿತಿಯಲ್ಲಿ ಇದ್ದ ತಾವರಗೇರಾದ ವ್ಯಕ್ತಿಯೊರ್ವನಿಗೆ ಎತ್ತು ಕುತ್ತಿಗೆ ಭಾಗದಲ್ಲಿ ತಿರ್ವವಾಗಿ ತಿವಿದಿರುದ್ದರಿಂದ ಪೂರ್ಣಪ್ರಮಾಣದ ಪ್ರಜ್ಞೆಯನ್ನು ತಪ್ಪಿದ ವ್ಯಕ್ತಿ ಪಾರ್ಶ್ವವಾಯು ಅವರಿಗೆ ಜೀವದುದ್ದಕ್ಕು ಆವರಿಸಿರುವ ಹಂತದಲ್ಲಿರುವ ವ್ಯಕ್ತಿಗೆ ನಾಲ್ಕ ಗಂಟೆಗಳ ಕಾಲ ಕಾ ಶಸ್ತ್ರಚಿಕಿತ್ಸೆ ಮೂಲಕ ರೋಗಿಗೆ ಪುರ್ನಜನ್ಮ ನೀಡಿದ್ದಾರೆ.ವಿಶೇಷವೆಂದರೆ ಈ ವ್ಯಕ್ತಿಗೆ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ನೀಡಲು ಬೆಂಗಳೂರು ,ಹುಬ್ಬಳ್ಳಿ ನಗರಕ್ಕು ತಲುಪಲು ಬಹಾಳ ಸಮಯವಾಗುತ್ತಿತ್ತು.ಇದರಿಂದ ರೋಗಿ ಜೀವಪೂರ್ಣ ಪೂರ್ಣಪ್ರಮಾಣ ಅಂಗವಿಕಲತೆಗೆ ಒಳಗಾಗಬೇಕಿತ್ತು.ಇದನ್ನು ಕೆ ಎಸ್ ಆಸ್ಪತ್ರೆ ಹಾಗೂ ಡಾ// ಬಸವರಾಜ ಮಾಡಿದ್ದಾರೆ.
ಸಾಮಜಿಕ ಚಿಂತನೆ,ಕಳಕಳಿಯ ಮನಸ್ಸು ಹೊಂದಿರುವ ಡಾ// ಬಸವರಾಜ ಅವರು ದೇಶ- ವಿದೇಶದಲ್ಲಿ ಉಚಿತ ವೈದ್ಯಕೀಯ ತಪಾಸಣೆ ಹಾಗೂ ಶಸ್ತ್ರಚಿಕಿತ್ಸೆ ಶಿಬಿರಗಳ ಮೂಲಕ ರೋಗಿಗಳನ್ನು ಗುಣಮುಖಮಾಡಿದ್ದಾರೆ.ಈ ಸೇವೆ ಮುಂದುವರಿಯಲಿ ಅವರ ತಾಯ್ನಾಡಿನ ಪ್ರೀತಿ ಇದೆ ರೀತಿ ಮುಂದುವರಿಯಲಿ.ಶ್ರೀಮಂತರಿ ಮಾತ್ರ ಆರೋಗ್ಯ ಭಾಗ್ಯ ಎಂಬಂತಿದ್ದ ಕಾಲದಲ್ಲಿ ಸಾಮನ್ಯರಿಗೂ ಉಚಿತ ಚಿಕತ್ಸೆ ನೀಡುವ ಮೂಲಕ ಹೊಸ ಶಕೆ ಪ್ರಾರಂಬಿಸಿದ್ದಾರೆ.ಇದು ಮುಂದುವರಿಯಲಿ ಕೊಪ್ಪಳ ಜಿಲ್ಲೆ ಸೇರಿದಂತೆ ಎಲ್ಲಾ ರೋಗಿಗಳಿಗೆ ಆರೋಗ್ಯ ಸಿಗುವಂತಾಗಲಿ...
ಶ್ರೀ ಶಿವನಗೌಡ ಪೋಲಿಸ್ ಪಾಟೀಲ
ಉಪನ್ಯಾಸಕರು ಹಾಗೂ
ಹವ್ಯಾಸಿ ಬರಹಗಾರರು ಕೊಪ್ಪಳ
9845646370.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ :9448241450 ವಾಟ್ಸಪ್ ಮಾತ್ರ )
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ