ಮೂಢನಂಬಿಕೆಯಲ್ಲಿನ ವೈಜ್ಞಾನಿಕತೆ
ಭಾರತವು ಅಪಾರವಾದ ವೈದ್ಯಕೀಯ ಗುಣಗಳಿರುವ ಸಸ್ಯ ಮೂಲ ಗಳಿಂದ ಕೂಡಿದ ದೇಶ. ವಿವಿಧತೆ ಇರುವ ಈ ದೇಶದಲ್ಲಿ ಅಪಾರವಾದ ವೈದ್ಯಕೀಯ ಗಿಡ ಸಂಪನ್ಮೂಲಗಳ ಸಂಪತ್ತು ಇದೆ. ನನ್ನ ಮನೆಯ ಉದಾಹರಣೆಯ ಮೂಲಕ ಅದು ಹೇಗೆ ನಮ್ಮಿಂದ ನಾಶವಾಗುತ್ತಿದೆ ಹಾಗೂ ನಮ್ಮ ಮುಂದಿನ ಜನಾಂಗಕ್ಕೆ ಇದಕ್ಕೆ ಉಪಯೋಗ ಬರುತ್ತಿಲ್ಲ ಎಂಬುವುದನ್ನು ನನ್ನ ಒಂದು ಚಿಕ್ಕ ಜೀವನದ ಘಟನೆಯಿಂದ ಹೇಳಬಯಸುತ್ತೇನೆ. ನಮ್ಮ ತಾಯಿ ಪ್ರತಿದಿನ ನಾಲ್ಕು ಗಂಟೆಗೆ ಎದ್ದು ಸ್ನಾನ ಮಾಡಿ ಅರಳಿ ಮರದ ಪೂಜೆ ಮಾಡುತ್ತಿದ್ದರು. ನಾನು ಕೇಳಿದೆ ನಾಲ್ಕು ಗಂಟೆಗೆ ಎದ್ದು ಯಾಕೆ ಅರಳಿ ಮರದ ಪೂಜೆ ಮಾಡಬೇಕೆಂದು. ಅದಕ್ಕಾಗಿ ಅವರು ಹೇಳಿದರು ಗೃಹಲಕ್ಷ್ಮಿ ಸಮಯದಲ್ಲಿ ಅರಳಿಮರ ಪೂಜೆ ಮಾಡುವುದರಿಂದ, ನಮ್ಮ ಮನೆಗೆ ಬರುತ್ತಾಳೆ ಎಂದು. ನಮ್ಮ ಅಜ್ಜಿ ಪ್ರತಿದಿನ ಮುಂಜಾನೆ ತುಳಸಿ ಕಟ್ಟೆಯ ಪೂಜಿಸಿ ಪ್ರತಿದಿನ ತುಳಸಿಯನ್ನು ನೀರಿನಲ್ಲಿ ಹಾಕಿರುತ್ತಿದ್ದರು. ನಾನು ಹೋಗಿ ಅವರನ್ನು ಕೇಳಿದೆ ಏತಕ್ಕೆ ತುಳಸಿ ಎಲೆಯನ್ನು ನೀರಿನಲ್ಲಿ ಹಾಕಿ ಇಡಬೇಕೆಂದು. ಅದಕ್ಕೆ ಅವರು ಹೇಳಿದರು ನಮ್ಮ ಮನೆಗೆ ಯಾವುದೇ ಮಾಟ ಮಂತ್ರ ಮಾಡಿಸಿದರು ಅದು ನಮಗೆ ಹತ್ತಿ ಬರುವುದಿಲ್ಲವೆಂದು. ಅದಕ್ಕಾಗಿ ತುಳಸಿ ಎಲೆಯನ್ನು ನೀರಿನಲ್ಲಿ ಹಾಕಿ ಇಡಬೇಕೆಂದು. ಒಂದು ದಿನ ನಾನು ಹೊಲಕ್ಕೆ ಹೋದಾಗ ಹೊಲದ ಒಡ್ಡಿನಲ್ಲಿರುವ ಹುಣಸೆ ಗಿಡದ ಪಕ್ಕ ಕುಳಿತೆ ಆಗ ನಮ್ಮ ಚಿಕ್ಕಪ್ಪ ಹೇಳಿದರು. ತುಳಸಿ ಗಿಡದ ಹತ್ತಿರ ಹೋಗಬೇಡ ಮಗುವೆ ಅದರಲ್ಲಿ ದೆವ್ವ ಗಳು ಇರುತ್ತವೆ ಎಂದು, ನಾನು ಭಯಪಟ್ಟು ಅಂದಿನಿಂದ ಹುಣಸೆ ಗಿಡದ ಪಕ್ಕ ಹೋಗಲೇ ಇಲ್ಲ, ಹೀಗೆ ಒಂದು ದಿನ ನನಗೆ ಚೇಳು ಕುಟುಕಿತು ಆ ಸಮಯದಲ್ಲಿ ನಮ್ಮ ತಾತ ನಮ್ಮ ಚಿಕ್ಕಮ್ಮನಿಗೆ ಹೇಳಿದರು. ಮೊದಲು ಅವಳಿಗೆ ಗೋಡೆಗೆ ಹಚ್ಚುವುದನ್ನು ಹಾಗೂ ಹುಗ್ಗಿಗೆ ಹಾಕುವುದನ್ನು ಕಲಿಸಿ ಹಚ್ಚು ಎಂದು. ಅದು ಬೇಗ ನನಗೆ ಅರ್ಥವಾಗಲಿಲ್ಲ ತದನಂತರ ನಮ್ಮ ಚಿಕ್ಕಮ್ಮ ನನಗೆ ಸುಮ್ನ ಹಾಗೂ ಬೆಲ್ಲವನ್ನು ಕಲಿಸಿ ಹಚ್ಚಿದರು. ಆಗ ನಾನು ತಾತನನ್ನು ಕೇಳಿದೆ ಅದರ ಹೆಸರು ಹೇಳುವ ಬದಲು ಹೀಗೇಕೆ ಒಗಟಾಗಿ ಹೇಳಿದರೆ. ಅದಕ್ಕೆ ಅವರು ಹೇಳಿದರು ಇಲ್ಲ ಆದರೆ ಹೆಸರು ಹೇಳಿದರೆ ಅದು ಪರಿಣಾಮ ಬೀರುವುದಿಲ್ಲ ಎಂದು. ನಾನು ಹೇಗೆ ಶಾಲೆಯಲ್ಲಿ ಓದುತ್ತಿರುವಾಗ ಭಾರತದಲ್ಲಿ ಜನರು ಅಪಾರವಾದ ಮೂಢನಂಬಿಕೆಯಿಂದ ಒಳಗೊಂಡಿದ್ದಾರೆ ಎಂದು ಇತ್ತು. ಆಗ ನನಗೂ ಮನಸ್ಸಿನಲ್ಲಿ ಅನಿಸಿತ್ತು ನಮ್ಮ ಮನೆಯಲ್ಲಿಯೂ ಅಪಾರವಾದ ಮೂಢನಂಬಿಕೆಯನ್ನು ಒಳಗೊಂಡಿದ್ದಾರೆ ಎಂದು. ನಾನು ಇದರ ಮೂಲವನ್ನು ತಿಳಿಯಲೇಬೇಕು ಎಂಬ ಹಂಬಲದಿಂದ ನನ್ನ ಸತ್ಯಾನ್ವೇಷಣೆ ಯನ್ನು ಪ್ರಾರಂಭಿಸಿದೆ. ಆಗಲೇ ನಾ ತಿಳಿದಿದ್ದು ತಪ್ಪು ಎಂದು ನನಗನಿಸಿತು. ಇದು ಮೂಢನಂಬಿಕೆಯಲ್ಲ ಒಂದು ಮನದಾಳದ ನಂಬಿಕೆ. ಅರಳೆ ಮರವು ಅಪಾರವಾದ ಆಮ್ಲಜನಕವನ್ನು ನೀಡುತ್ತದೆ. ಮಡಿಯಾಗಿ ಶುದ್ದಿ ಆಗಿ 4:00 ಸಮಯದಲ್ಲಿ ಅರಳಿಮರ ದವರಿಗೂ ಹೋದರೆ ನಮ್ಮ ದೇಹಕ್ಕೆ ವ್ಯಾಯಾಮ ಹಾಗೂ ಉತ್ತಮವಾದ ಆಮ್ಲಜನಕವನ್ನು ತೆಗೆದುಕೊಂಡತ್ತಾಗುತ್ತದೆ. ತುಳಸಿಯಲ್ಲಿ ಔಷಧೀಯ ಗುಣವಿದೆ ಅದನ್ನು ನೀರಿಗೆ ಹಾಕುವುದರಿಂದ ಸೂಕ್ಷ್ಮ ಕೀಟಗಳನ್ನು ನಾಶಪಡಿಸುವ ಶಕ್ತಿ ಇದೆ. ಹುಣಸೆ ಮರ ಆಮ್ಲಜನಕವನ್ನು ಹೆಚ್ಚಿನ ಪ್ರಮಾಣದಲ್ಲಿ ನೀಡುವುದಿಲ್ಲ. ಅದು ಕಾರ್ಬನ್ ಡೈಆಕ್ಸೈಡ್ ಅನ್ನು ತೆಗೆದುಕೊಳ್ಳುವುದಿಲ್ಲ. ಹಾಗಾಗಿ ಆ ಗಿಡದ ಹತ್ತಿರ ಹೋಗಬಾರದು ಎಂಬ ನಂಬಿಕೆ. ಜನರು ಹಾಗೆ ಸುಣ್ಣ ಮತ್ತು ಬೆಲ್ಲವನ್ನು ಹಚ್ಚಿ ಎಂದರೇನು ಅದರ ಬಗ್ಗೆ ಅಷ್ಟೊಂದು ತಲೆ ಕೆಡಿಸಿಕೊಳ್ಳುವುದಿಲ್ಲ. ಅದರ ಬದಲಾಗಿ ಈ ರೀತಿಯಾಗಿ ಹೇಳಿದರೆ ಅವರು ಅದನ್ನು ಬೇಗ ಮನಸ್ಸಿಗೆ ತೆಗೆದುಕೊಳ್ಳುತ್ತಾರೆ. ನಾವು ಹೇಗೆ ಹೇಳುತ್ತೇವೆ ಎಂಬುದು ಮುಖ್ಯವಲ್ಲ. ನಾವು ಹೇಳಿದ್ದನ್ನು ಜನರು ಯಾವ ಮಟ್ಟಿಗೆ ಸ್ವೀಕರಿಸುತ್ತಾರೆ ಎಂಬುದನ್ನರಿತು. ನಮ್ಮ ಹಿರಿಯರು ಪ್ರತಿಯೊಂದಕ್ಕೂ ಅದರದೇ ಆದ ಗೌರವಗಳನ್ನು ನೀಡಿ. ಅವುಗಳಿಗೆ ಒಂದು ನಂಬಿಕೆಯನ್ನು ನೀಡಿಸಿಕೊಂಡು ಬರುತ್ತಿದ್ದಾರೆ. ಇದನ್ನೇ ಇಂದು ನಮ್ಮ ಜನ ಮೂಢನಂಬಿಕೆಯೆಂದು ಕೆಲವೊಂದನ್ನು ಅಲಕ್ಷ ಮಾಡುತ್ತಿದ್ದಾರೆ. ಗುಳಿಗ, ಔಷಧಿ, ಇಂಜೆಕ್ಷನ್, ಇವುಗಳ ಹಿಂದೆ ಬೆನ್ನತ್ತಿ ನಮ್ಮ ಪುರಾತನ ಸಂಸ್ಕೃತಿಗೆ ಮೂಢನಂಬಿಕೆಯೆಂದು ಕೈಬಿಡುತ್ತಿದ್ದಾರೆ. ಹಿರಿಯರು ಮಾಡಿದ ಪ್ರತಿಯೊಂದು ಹಬ್ಬ-ಹರಿದಿನಗಳು ಅದರದೇ ಆದ ಅಪಾರವಾದ ಅರ್ಥವನ್ನು ಒಳಗೊಂಡಿದೆ. ಕಾಲ ಎಷ್ಟೇ ಮುಂದುವರಿದರೂ ಅವರ ಬುದ್ಧಿ ಮಟ್ಟಕ್ಕೆ ನಾವು ಸರಿಸಾಟಿ ಆಗುವುದಿಲ್ಲವೇ ಎನಿಸುತ್ತದೆ. ಒಮ್ಮೊಮ್ಮೆ ನಂಬಿಕೆ ಎಂಬ ಪದಕ್ಕೆ ಅವರದು ಮೂಢನಂಬಿಕೆಯೆಂದು ಇಂದು ಅದನ್ನೆಲ್ಲ ತಳ್ಳಿಹಾಕಿದ್ದೇವೆ. ಇಂದು ವಿಭಕ್ತಿ ಕುಟುಂಬಗಳಲ್ಲಿ ಯಾವ ಹಬ್ಬ ಆಚರಣೆಗಳಿಗೂ ಸಮಯವಿಲ್ಲ. ಮಕ್ಕಳನ್ನು ನೋಡಿಕೊಳ್ಳಲು ಆಳು ಗಳನ್ನಿಟ್ಟು ಅವರ ಜೀವನಕ್ಕೆ ಅರ್ಥವಿಲ್ಲದಂತೆ ಮಾಡಿದ್ದಾರೆ. ಇಂದಿನ ಆಧುನಿಕ ಜೀವನ ರಿಮೋಟಿನ ಅಂತೆ ಆಗಿದೆ. ಸುಮ್ಮನೆ ಕಾಲದ ಚಕ್ರಕ್ಕೆ ಸಿಲುಕಿ ಓಡುತ್ತಿರುವುದು. ಹಿರಿಯರನ್ನು ಬದುಕಿನ ಅರ್ಥಪೂರ್ಣವಾದ ಅನುಭವದ ಮಾತಿಲ್ಲದ ಮನೆಗಳು. ಸತ್ತವರ ಮನೆಯಂತೆ ಶಂಕೆಯಿಲ್ಲದೆ ಡಂಗುರವ ಬಾರಿಸುವಂತೆ ಕಾಣಿಸುತ್ತದೆ. ಏನು ಓದಿದರೇನು ಪದವಿಗಳನ್ನು ಪಡೆದರೇನು ಬದುಕಿನ ಮೌಲ್ಯಗಳು ಗೊತ್ತಿರದಿದ್ದರೆ. ಅರಿತು ಬಾಳುವ ಜೀವನವಿದ ಒಂದಲ್ಲಾ ಒಂದು ದಿನ ಗೋರಿಗಳಿಗೆ ಹೊರಡುವವರು ನಾವು ಹಿರಿಯರು ಹಾಕಿದ ಬದುಕಿನಲ್ಲಿ ಬಹಳ ಬೇಕೆಂಬುದೇ ನನ್ನ ಆಸೆ ಎಲ್ಲರ ತಪ್ಪು-ಒಪ್ಪುಗಳನ್ನು ತಿದ್ದುವಸ್ಟು
ದೊಡ್ಡವಳಲ್ಲ ನಾನು ಅರಿತು ನಡೆಯುವ ಅರವಿಕೆಯನ್ನು ಪಡೆಯೋಣ ಎಂದು ಬಯಸುವೆ.
✍️✍️✍️
ದಾನೇಶ್ವರಿ ಬಸವರಾಜ ಶಿಗ್ಗಾವಿ
ಜಲ್ಲಾಪುರ ಗ್ರಾಮ
ಸವನೂರು ತಾಲೂಕ
ಹಾವೇರಿ ಜಿಲ್ಲಾ.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ : 9448713659 ವಾಟ್ಸಪ್ ಮಾತ್ರ )
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ