ಗುರುವಾರ, ಜುಲೈ 1, 2021

ಬಾಳಿಗೊಂದು ಬಂಗಾರದ ಮಾತು (ಲೇಖನ) - ಶ್ರೀ ಸೋಮಶೇಖರ ಹ ರಾಂಪೂರ.


*ಬಾಳಿಗೊಂದು ಬಂಗಾರದ ಮಾತು*

ಕಾಯಕವೇ ಕೈಲಾಸ ಎಂಬ ಬಸವಣ್ಣನವರ ನುಡಿಯಂತೆ ನಾವು ಕಾಯಕದೊಳಗೆ ಸ್ವರ್ಗ ಕಾಣಬೇಕು ಇಲ್ಲೇ ಇದೆ ಸ್ವರ್ಗ ನರಕಗಳ ಅನುಭವ ಹೆಗೆಂದರೇ ನಾವು ಮೊದಲು ಗುರುವಿನ ಮಾರ್ಗದಿ ನಡೆಯಬೇಕು ಬಣ್ಣದ ಮಾತುಗಳಾಡಬಾರದು ಕಪಟ ಕಲ್ಮಶ ಗುಣಗಳಿಂದ ದೂರಿರಬೇಕು "ಹರ ಮುನಿದರೇ ಗುರು ಕಾಯುವವನು"ಎಂಬ ವೇದ ವಾಕ್ಯದಂತೆ ಗುರುವಿನ ನಾಮ ಸ್ಮರಣೆಯೊಂದಿಗೆ ಅವರ ಹಾಕಿ ಕೊಟ್ಟ ಪಥದೊಳು ಸಾಗಬೇಕು ಶರಣರ ನುಡಿಗಳನ್ನು ಕೇಳಬೇಕು ಕೇಳಿ ಅವುಗಳನ್ನು ಜೀವನದೊಳು ಅಳವಡಿಸಿಕೊಳ್ಳಬೇಕು ಈ ಮಾನವ ಬರಿ ಆಸೆ ಆಸೆ ಎಂಬುದು ಅರಸಂಗಲ್ಲದೇ ಶಿವಭಕ್ತರಿಗುಂಟೆ ಎಂಬ ನುಡಿಯಂತೆ ಎಷ್ಟಿದ್ದರೂ ಇನ್ನು ಬೇಕು ಎನ್ನುವ ಈ ಮಹಾದಾಸೆಯನ್ನು ಬಿಟ್ಟು ನಾವು ಸಾಗಬೇಕು ನಮಗಾಗಿಯೇ ಇದ್ದದ್ದು ನಮಗೆ ಸಿಗುತ್ತದೆ ನಿಮಗೆ ಇಲ್ಲದಿರುವುದು ನೀವು ಎಷ್ಟೇ ಆಸೆ ಮಾಡಿದರು ಅದು ನಿಮ್ಮ ಕೈಗೆ ಸಿಗದು ಹಾಗಾಗಿ ಅಂತರಂಗ ಬಹಿರಂಗವನ್ನು ತಿಳಿದುಕೊಂಡು ಬಾಳಿದರೇ ಬಾಳು ತನ್ನಿಂದ ತಾನೇ ಜಗಮಗಿಸುವುದು ನಿನ್ನ ಅಂತರಂಗ ಅಂದ್ರೇ ನೀನು ಮಾಡಿದ ಕಾರ್ಯವ ನಿನ್ನೊಳಗೋಳಗೆ ಮಾಡುವ ಕಾರ್ಯಗಳು ಅವೇ ಪಾಪ- ಪುಣ್ಯ ಅಂತರಂಗದಲ್ಲಿ ನೀನು ಪರಿಶುದ್ದನಾದಾಗ ಬಹಿರಂಗ ತಾನಾಗಿಯೇ ಮೇಲು ಶಿಖರವೇರಿ ಹೊಳೆಯುವುದರಲ್ಲಿ ಸಂದೇಹವಿಲ್ಲ ಎಂದು ಹೇಳಬಹುದು ಬಸವಣ್ಣನವರ ತಮ್ಮ ವಚನವಾಣಿಯಲ್ಲಿ ಈ ರೀತಿ ಹೇಳಿದ್ದಾರೆ 
*ಕಳಬೇಡ ಕೊಲಬೇಡ ಹುಸಿಯ ನುಡಿಯಲು ಬೇಡ ಅನ್ಯರಿಗೆ ಅಸಹ್ಯ ಪಡಬೇಡ ತನ್ನ ಬಣ್ಣಿಸಬೇಡ ಇದಿರು ಹಳೆಯಲು ಬೇಡ ಇದೇ ಅಂತರಂಗ ಶುದ್ದಿ ಇದೇ ಬಹಿರಂಗ ಶುದ್ದಿ ಇದೇ ನಮ್ಮ ಕೂಡಲಸಂಗಮದೇವರನೊಲಿಸುವ ಪರಿ.*
ಕೊಲಬೇಡ ಮನವೇ ಅಸತ್ಯ ಮಾತುಗಳನ್ನು ಆಡಬೇಡ ಮತ್ತೊಬ್ಬರ ಮೇಲೆ ನೀನು ಮುನಿಸಿಕೊಳ್ಳಬೇಡ ಮತ್ತೊಬ್ಬರ ನೋಡಿ ಅಸಹ್ಯವಾದ ರೀತಿ ನಡೆದುಕೊಳ್ಳಬೇಡ ನಿನ್ನನ್ನು ನೀ ಬಣ್ಣಿಸಿಕೊಳ್ಳಬೇಡ ಇವೆಲ್ಲವೂ ನೀ ಮಾಡುವುದರಲ್ಲಿಯೇ ನಿನ್ನ ಅಂತರಂಗ ಬಹಿರಂಗವು ರೂಪಗೊಳ್ಳುವುದು ನೋಡಾ ಇದೇ ನಮ್ಮ ಕೂಡಲಸಂಗಮದೇವ ನಿನ್ನನ್ನು ಒಲಿಸಿ ಹೇಳುವ ರೀತಿ ಎಂದು ಜಗಜ್ಯೋತಿ ಬಸವಣ್ಣನವರು ನಮ್ಮ ನಿಮ್ಮೆಲ್ಲರ ಬಾಳಿಗೆ ಬೆಳಕಾಗುವ ಬಾಳ ನುಡಿಗಳನ್ನು ತಮ್ಮ ವಚನ ವಾಣಿಯ ಮೂಲಕ ತಿಳಿ ಹೇಳಿದ್ದಾರೆ.
ಒಟ್ಟಾರೇಯಾಗಿ ಬಾಳು ಬೆಳಗಬೇಕಾದರೆ ನಾವು ಮಾಡಿದ ಕಾರ್ಯದ ಮೇಲೆ ನಮ್ಮ ಬಾಳು ಸಾಗುತ್ತದೆ ಪ್ರೀತಿ,ಮಮತೆ,ಸಕಲ ಜೀವಿಗಳಲ್ಲಿ ದಯೇ,ಎಲ್ಲರು ನನ್ನವರು ಎಲ್ಲದರಲ್ಲು ಸೌಜನ್ಯದಿಂದ ಸಾಗಿದರೇ ಈ ಬದುಕು ಬಂಗಾರವಾಗುತ್ತೆ ಎಂದು ಹೇಳಬಹುದು ಈ ಬದುಕು ಮೂರು ದಿನದ ಸಂತೆ ಬರುವಾಗ ಏನು ತಂದಿಲ್ಲ ಹೋಗುವಾಗ ಏನು ಒಯ್ಯುವುದಿಲ್ಲ ಉಳಿಯುವುದು ಒಂದೇ ನಾವು ಮಾಡಿದ ಪಾಪ ಪುಣ್ಯ ಹಾಗಾಗಿ ಇರೋವಷ್ಟು ದಿನ ಒಳಿತು ಮಾಡೋಣ ಮಾಡಿ ಈ ಬೊಂಬೆಯಾಟವ ಗೆಲ್ಲೋಣ.

ಶ್ರೀ ಸೋಮಶೇಖರ ಹ ರಾಂಪೂರ ಸಹ ಶಿಕ್ಷಕರು  ಎಚ್.ಪಿ.ಎಸ್.ಗುಂದಗಿ ವಿಜಯಪೂರ ಜಿಲ್ಲೆ.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ : 9448713659 ವಾಟ್ಸಪ್ ಮಾತ್ರ )

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...