ಗುರುವಾರ, ಜುಲೈ 1, 2021

ಮರಳಿ ಬನ್ನಿ ಶಾಲೆಗೆ ( ಲೇಖನ) - ದಾನೇಶ್ವರಿ ಬಸವರಾಜ ಶಿಗ್ಗಾವಿ.

ಮರಳಿ ಬನ್ನಿ ಸರ್ಕಾರಿ ಶಾಲೆಗೆ 🎒🎒🏫👨‍🏫👩‍🏫🚸


ಸರ್ಕಾರಿ ಶಾಲೆ ಎಂದ ತಕ್ಷಣ ಎಲ್ಲರೂ ಹೇಳುವುದು ನಾವು ಓದಿದ್ದೇವೆ ಇಲ್ಲಿ  . ಹಾಗೂ ಇಲ್ಲಿನ ಪ್ರತಿಯೊಂದು ಕ್ಷಣ ನಮ್ಮ ಬದುಕಿನಲ್ಲಿ ಇತಿಹಾಸವನ್ನು ಸೃಷ್ಟಿಸಿದೆ ಎಂದು. ಆದರೆ ತಮ್ಮ ಮಕ್ಕಳನ್ನೇಕೆ ಸರಕಾರಿ ಶಾಲೆಗೆ ಸೇರಿಸಲು ಇಚ್ಛಿಸುತ್ತಿಲ್ಲ. ಎಷ್ಟೇ ಕಷ್ಟ ಆದರೂ ಪರವಾಗಿಲ್ಲ ಈ ಪಾಲಕರು ಖಾಸಗಿಯ ಶಾಲೆ ಹತ್ತಿರ ಮುಖ ಮಾಡುತ್ತಿರುವರು. ಅವರನ್ನು ಕೇಳಿದರೆ ಅವರು ಹೀಗೆ ಹೇಳಬಹುದು. ಸರಕಾರಿ ಶಾಲೆಯಲ್ಲಿ ಸುಸಜ್ಜಿತವಾದ ಕಟ್ಟಡವಿಲ್ಲ. ಮಕ್ಕಳಿಗೆ ಆಡಲು ಮೈದಾನವಿಲ್ಲ. ಸರಿಯಾದ ಸಾಮಗ್ರಿಗಳು ದೊರೆಯುತ್ತಿಲ್ಲ. ಶೌಚಾಲಯವಿಲ್ಲ. ಕೂರಲು ಸರಿಯಾದ ವ್ಯವಸ್ಥೆಗಳಿಲ್ಲ. ಕಪ್ಪುಹಲಗೆ ಇಲ್ಲ. ಶಿಕ್ಷಕರ ಸರಿಯಾಗಿ ಪಾಠ ಮಾಡದೇ ಇರಬಹುದು. ಹೀಗೆ ಹಲವಾರು ಸಮಸ್ಯೆಗಳಿರಬಹುದು ಎಂದು ಅವರು ಮನದಲ್ಲಿ ತಿಳಿದಿರಬಹುದು. ಮತ್ತೆ ಅವರು ಹೀಗೆ ಹೇಳುತ್ತಾರೆ ಖಾಸಗಿ ಶಾಲೆಯಲ್ಲಿ ಉತ್ತಮ ಕಟ್ಟಡ, ಆಟದ ಮೈದಾನ, ಶಾಲೆಯ ಎಲ್ಲಾ ಸಾಮಗ್ರಿಗಳು, ಕಪ್ಪುಹಲಗೆ, ಕೂರಲು ಮೇಜಿನ ಹಲಗೆ ಎಲ್ಲದರ ಸೌಲಭ್ಯಗಳು ದೊರೆಯುತ್ತಿವೆ. ಹಾಗೂ ಅತಿ ಹೆಚ್ಚಿನ ಫಲಿತಾಂಶ ಬರುತ್ತದೆ ಎಂದು. ಯಾಕೋ ಗೊತ್ತಿಲ್ಲ ಈ ರೀತಿಯ ಒಂದು ತಿಳುವಳಿಕೆಯ ಭೂತ ಪೋಷಕರ ಮನದಲ್ಲಿದೆ. ನನ್ನ ಪ್ರಕಾರ ಸರ್ಕಾರಿ ಶಾಲೆಯಲ್ಲಿರುವ ಎಲ್ಲ ಶಿಕ್ಷಕರು ಅತ್ಯುತ್ತಮ ಶಿಕ್ಷಣ ಪಡೆದು ಬಂದಿರುತ್ತಾರೆ. ಅವರು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವಲ್ಲಿ ಸತತ ಪ್ರಯತ್ನ ಪಡುತ್ತಿರುತ್ತಾರೆ. ಆದರೆ ಈ ಸರ್ಕಾರದವರು ಅವರಿಗೆ ಶಿಕ್ಷಣ ನೀಡುವುದರೊಂದಿಗೆ ಹಲವಾರು ಜವಾಬ್ದಾರಿಗಳನ್ನು ಅವರ ಹೆಗಲ ಮೇಲೆ ನೀಡುತ್ತದೆ. ಉದಾಹರಣೆ ಜನಗಣತಿ ಮಾಡುವುದು, ಎಲೆಕ್ಷನ್ ಸಮಯದಲ್ಲಿ ಕೆಲಸ ಮಾಡುವುದು, ಮತಪತ್ರಗಳ , ಹೀಗೆ ಹಲವಾರು ಒತ್ತಡದ ಕೆಲಸಗಳನ್ನು ಅವರ ಮೇಲೆ ಹೇರುತ್ತದೆ. ಇಷ್ಟೆಲ್ಲಾ ಮಾಡಿಯೂ ಕೂಡ ಅವರು ಶಾಲೆಗೆ ಬರುವ ಪ್ರತಿಯೊಂದು ಮಗುವನ್ನು ತಮ್ಮ ಮಕ್ಕಳಂತೆ ಪ್ರೀತಿಸುತ್ತಾರೆ. ಇದರಲ್ಲಿ ಶಿಕ್ಷಕರದು ಯಾವುದೇ ತಪ್ಪಿಲ್ಲ. ಸರಿಯಾದ ಸೌಲಭ್ಯಗಳು ದೊರೆಯದೇ ಇರುವುದು ಅದು ಅವರ ತಪ್ಪಲ್ಲ. ಅದು ನಮ್ಮೆಲ್ಲರ ತಪ್ಪು, ಏಕೆಂದರೆ ಎಲೆಕ್ಷನ್ ಸಮಯದಲ್ಲಿ ನಾವು ಆಯ್ದು ಕಳಿಸುವ ನಾಯಕ ನಮ್ಮ ಶಿಕ್ಷಣ ವ್ಯವಸ್ಥೆಯ ಬಗ್ಗೆ ಸರಿಯಾದ ಚಿಂತನೆ ಮಾಡಿದರೆ ನಮಗೆ ಎಲ್ಲ ಸೌಲಭ್ಯಗಳು ದೊರೆಯುತ್ತವೆ. ಪೋಷಕರ ಎಲ್ಲರಿಗೂ ಹಕ್ಕಿದೆ ಏಕೆಂದರೆ ನೀವು ಕಳಿಸಿದ ನಾಯಕರು ಕೆಲಸ ಮಾಡಿಲ್ಲ ಅಂದರೆ ನೀವು ಅವರನ್ನು ಪ್ರಶ್ನೆ ಮಾಡಬೇಕು. ಕಾನೂನುಗಳು ಕೂಡ ನಮ್ಮೆಲ್ಲರ ಉದ್ಧಾರಕ್ಕಾಗಿ ಇರುವುದು. ಪ್ರಶ್ನಿಸುವ ಹಕ್ಕು ಎಲ್ಲರಿಗೂ ಇದೆ. ಆದರೆ ಪ್ರಶ್ನಿಸಲು ಯಾರೂ ಮುಂದೆ ಬರುತ್ತಿಲ್ಲ. ಇನ್ನೊಂದು ಜನರಿಗೆ ಭಾಷೆಗಳ ಭೂತ ಮನದಲ್ಲಿ ಅಡಗಿದೆ. ಇಂಗ್ಲೀಷ್ ಮಾಧ್ಯಮದಲ್ಲಿ ಓದಿದರೆ ಅತಿಹೆಚ್ಚು ಅಂಕಗಳನ್ನು ಗಳಿಸುತ್ತಾರೆಂಬ  ಮನಸ್ಥಿತಿ ಪೋಷಕರಲ್ಲಿ ಬಂದಿದೆ. ಭಾಷೆಗೂ ಜ್ಞಾನಕ್ಕೂ ವ್ಯತ್ಯಾಸವಿದೆ. ಅದೇಕೋ ಈ ಪೋಷಕರು ಭಾಷೆ ಜ್ಞಾನವೆಂದು ತಿಳಿದುಕೊಂಡಿದ್ದಾರೆ. ಕನ್ನಡ ಶಾಲೆಯಲ್ಲಿ ಒಂದು ವೇಳೆ ತಮ್ಮ ಮಕ್ಕಳನ್ನು ಓದುತ್ತಿದ್ದರೆ ಅವರಿಗೆ ಸರಿಯಾದ ಅವಕಾಶ ಕೊಟ್ಟು ನೋಡಿ. ಅವರು ಯಾರಿಗಿಂತಲೂ ಕಡಿಮೆ ಆಗುವುದಿಲ್ಲ. ಎಲ್ಲ ಅವಕಾಶಗಳನ್ನು ನೀಡುತ್ತಿದೆ. ಉಚಿತ ಊಟ, ಬಟ್ಟೆ ,ಶೋ, ಹಾಲು, ಪುಸ್ತಕ, ಗ್ರಂಥಾಲಯ, ಆಟದ ಸಾಮಗ್ರಿಗಳು, ನುರಿತ ಶಿಕ್ಷಕರು ಎಲ್ಲ ವ್ಯವಸ್ಥೆಗಳು ಶಿಕ್ಷಣದಲ್ಲಿ ಕಳೆದ ಹತ್ತು ವರ್ಷಗಳಿಂದ ಬಹಳ ಉತ್ತಮವಾಗಿ ದೊರಕುತ್ತಿವೆ. ಕಳೆದ ಹತ್ತು ವರ್ಷಗಳಿಂದಲೇ ಅಪಾರವಾದ ಖಾಸಿಗೆ ಶಾಲೆಗಳು ತಲೆಯೆತ್ತಿವೆ. ಅದೇಕೋ ಗೊತ್ತಿಲ್ಲ ಸರ್ಕಾರಿ ಶಾಲೆಯಲ್ಲಿ ಕೆಲಸ ಮಾಡುತ್ತಿರುವ ಶಿಕ್ಷಕರೇ ತಮ್ಮ ಮಕ್ಕಳನ್ನು ಖಾಸಿಗೆ ಶಾಲೆಗೆ ಕಳಿಸುತ್ತಿದ್ದಾರೆ. ಸರ್ಕಾರಿ ಕೆಲಸದಲ್ಲಿರುವ ಪ್ರತಿಯೊಬ್ಬರು ಕೂಡ ಯಾರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಲು ಇಚ್ಛಿಸುತ್ತಿಲ್ಲ. ಸರ್ಕಾರದ ಕೆಲಸಕ್ಕಾಗಿ ಇರುವೆನೆಂದು ಹೇಳುವ ರಾಜಕಾರಣಿ ಹಿಡಿದು ಸರ್ಕಾರದ ಕೆಲಸದಲ್ಲಿರುವ ವಾಚ್ ಮಾನವರಿಗೂ ಎಲ್ಲರೂ ಖಾಸಿಗೆ ಶಾಲೆ ಮುಖ ಮಾಡಿದ್ದಾರೆ ಎಲ್ಲೇ ಒಬ್ಬರು-ಇಬ್ಬರು ಸೇರಿಸುತ್ತಿದ್ದಾರೆ ಅಷ್ಟೇ. ಈ ರೀತಿಯಾದರೆ ಯಾರಲ್ಲಿ ಮೊದಲು ಸರ್ಕಾರಿ ಶಾಲೆಯ ಬಗ್ಗೆ ಅಭಿಮಾನ ತುಂಬಿಸಬೇಕು ಎಂಬುವುದೇ ಅರಿವಾಗುತ್ತಿಲ್ಲ. ಸರ್ಕಾರಿ ಶಾಲೆಯಲ್ಲಿ ಓದಿದ ಮಕ್ಕಳು ಇಂದು ಅತ್ಯುತ್ತಮ ಹುದ್ದೆಗಳಲ್ಲಿದ್ದಾರೆ. ಬದುಕಿನ ಛಲಕ್ಕೆ ಸರ್ಕಾರಿ ಶಾಲೆ ದೈರ್ಯವನ್ನು ತುಂಬಿದೆ ಎಂದು ಹಲವಾರು ಜನ ಹೇಳುತ್ತಾರೆ. ನೂರಕ್ಕೆ 99ರಷ್ಟು ಜನರು ಉತ್ತಮ ಅಭಿಪ್ರಾಯವನ್ನು ನೀಡುತ್ತಾರೆ. ಖಾಸಗಿ ಶಾಲೆಯಲ್ಲಿ ಕಲಿತ ವಿದ್ಯಾರ್ಥಿಗಳ ಕಂಠಪಾಠ ಮಾಡಿಸುವುದರ ಮೂಲಕ ಶಿಕ್ಷಕರು ಅವರನ್ನು ಪರೀಕ್ಷೆಗೆ ತಯಾರು ಮಾಡಿರುತ್ತಾರೆ. ಆದರೆ ಸರ್ಕಾರಿ ಶಾಲೆಯಲ್ಲಿ ದಂಡಂ ದಶಗುಣಂ ಹಾಗೂ ಜೀವನದ ತತ್ವಗಳನ್ನು ನೀಡುತ್ತಾ ಬದುಕಿನ ಪರೀಕ್ಷೆಗೆ ಶಿಕ್ಷಕರು ಮಕ್ಕಳನ್ನು ಸಿದ್ಧಗೊಳಿಸುತ್ತಾರೆ. ಖಾಸಗಿ ಶಾಲೆಯಲ್ಲಿ ಕಲಿತ ಮಕ್ಕಳು ನೂರಕ್ಕೆ 98ರಷ್ಟು ಅಂಕ ತೆಗೆದರೆ 99 ಬರಲಿಲ್ಲ ಎಂದು ಸಾವಿಗೆ ಶರಣಾದ ಸಾವಿರಾರು ಉದಾಹರಣೆಗಳಿವೆ, ಆರಕ್ಕೆ ಆರು ವಿಷಯಗಳಲ್ಲಿ ನಪಾಸಾದರೂ ಬದುಕ ಹೀಗೆ ಸಾಗಿಸಬೇಕೆಂಬ ಜ್ಞಾನ ಸರ್ಕಾರಿ ಶಾಲೆಯಲ್ಲಿ ದೊರೆಯುತ್ತದೆ ಎಂದರೇ ತಪ್ಪಾಗಲಾರದು. ಆದರೂ ಅದೇಕೋ ಇಷ್ಟೆಲ್ಲಾ ವಿಷಯಗಳನ್ನು ಮನಗೊಂಡ ಪ್ರತಿಯೊಬ್ಬರು ಖಾಸಗಿ ಶಾಲೆಯತ್ತ ಮುಖ ಮಾಡಿರುವುದನ್ನು ನೋಡಿದರೆ ಮನಸ್ಸಿಗೆ ನೋವಾಗುತ್ತದೆ. ಎಲ್ಲ ವ್ಯವಸ್ಥೆಗಳಿದ್ದರೂ ಇಂದು ಅದೆಷ್ಟು ಸರ್ಕಾರಿ ಶಾಲೆಗಳು ಬಾಗಿಲು ಹಾಕುವ ಪರಿಸ್ಥಿತಿ ಏರ್ಪಾಡಾಗಿದೆ. ದಯವಿಟ್ಟು ಎಲ್ಲರೂ ಕೈಜೋಡಿಸೋಣ ನಮ್ಮ ಶಿಕ್ಷಣ ವ್ಯವಸ್ಥೆಯನ್ನು ನಾವು ಬದಲಿಸೋಣ. ಎಲ್ಲ ಕಾನೂನುಗಳು ನಮ್ಮ ಹಿತಕ್ಕಾಗಿ ಇರುವುದು. ನೀವು ಆಯ್ಕೆ ಮಾಡಿದ ರಾಜಕೀಯ ವ್ಯಕ್ತಿ ನಿಮಗೆ ಹಿತವಾಗುವಂತಹ ಹಾಗೂ ಈ ದೇಶದ ಮಕ್ಕಳಿಗೆ ಹಿತವಾಗುವಂತಹ ಕೆಲಸವನ್ನು ಮಾಡಬೇಕು. ಮಾಡದಿದ್ದರೆ ಅವರನ್ನು ನೀವು ಪ್ರಶ್ನಿಸಬೇಕು. ಒಂದಾಗಿ ಖಾಸಗಿ ಶಾಲೆಗಳ ಬಾಗಿಲನ್ನು ಮುಚ್ಚಿ ಸೋಣ. ಸರ್ಕಾರಿ ಶಾಲೆಗಳ ಬಾಗಿಲ ತೆರೆಯೋಣ. ಹಗಲಿರುಳು ದುಡಿದು ನೀವೇಕೆ ಬೇರೆ ದೇಶದವರು ತೆರೆದ ಶಾಲೆಗಳಿಗೆ ದುಡ್ಡು ಕೊಟ್ಟು ಓದಿಸುತ್ತಿರುವ. ಮಹಾಗ್ರಂಥಗಳು ಹುಟ್ಟಿದ ದೇಶ ನಮ್ಮದು, ಅಪಾರ ವಿಜ್ಞಾನಿಗಳು, ಮಹಾನ್ ಪಂಡಿತರು ಬದುಕಿ ಬಾಳಿದ ದೇಶ ನಮ್ಮದು. ನೀವು ಖಾಸಗಿ ಶಾಲೆಯಲ್ಲಿ ಪ್ರತಿಯೊಂದಕ್ಕೂ ಹಣ ಕಟ್ಟಬೇಕು. ಅದು ಪುಸ್ತಕ ಶೂ ,ಬಟ್ಟೆ ,ಕಟ್ಟಡ, ಗ್ರಂಥಾಲಯ, ಆಟದ ಸಾಮಗ್ರಿಗಳು, ಅಷ್ಟೇ ಅಲ್ಲದೆ ಮಕ್ಕಳಿಗೆ ಊಟಕ್ಕೆ ಕಟ್ಟಿ ಕಳಿಸಬೇಕು. ಮರಳಿ ಮಕ್ಕಳು ಬಂದ ನಂತರ ಅವರಿಗೆ ಟ್ಯೂಷನ್ ಎಲ್ಲ ವ್ಯವಸ್ಥೆಗಳ ಕಲ್ಪಿಸಬೇಕು. ಸರ್ಕಾರಿ ಶಾಲೆಯಲ್ಲಿ ಎಲ್ಲ ವ್ಯವಸ್ಥೆಗಳು ಇವೆ ಆದರೆ ಪೋಷಕರು ಗಮನ ಮಾತ್ರ ಮಕ್ಕಳ ಮೇಲೆ ಬೀಳುತ್ತಿಲ್ಲ. ಅದು ಪ್ರೀತಿ ಇಲ್ಲ ಅಂತಲ್ಲ. ಅವರ ಮನದಲ್ಲಿರಲಿ ಏನೋ ಒಂದು ವಿಚಿತ್ರ ನಂಬಿಕೆ. ಓದಿ ಮುಂದೆಯಾದರೂ ಏನು ಮಾಡಿದೆ ಎಂದು ಮಕ್ಕಳನ್ನು ಕೆಲವೊಬ್ಬರು ಹಿಂಜರಿಯುತ್ತಾರೆ. ಅಥವಾ ಸಮಾಜದಲ್ಲಿ ನನ್ನ ಮಗು ಇಂಗ್ಲಿಷ್ ಮಾಧ್ಯಮ ಓದುತ್ತಿದೆ. ಹೇಳಿಕೊಳ್ಳುವ ಭಾವನೆಯು ಅವರಿಗೆ ಹೆಮ್ಮೆ ಎನಿಸುತ್ತಿದೆ, ಏನು ಗೊತ್ತಿಲ್ಲ, ಹಲವಾರು ವಿಚಾರಗಳಲ್ಲಿ ಖಾಸಗಿ ಶಾಲೆಗಳಿಗೆ ಹೋಲಿಸಿದರೆ ಸರ್ಕಾರಿ ಶಾಲೆಯು 100_ 99ರಷ್ಟು. ಉತ್ತಮ ಜ್ಞಾನಾರ್ಜನೆಯ ನೀಡುವ ಸ್ಥಾನದಲ್ಲಿದೆ ಎಂದು ಹೇಳಬಹುದು. ನನ್ನನಿಸಿಕೆ ಈ ಬರಹದಲ್ಲಿ ಯಾರಿಗಾದರೂ ತಪ್ಪು ಅನಿಸಿದರೆ ನನ್ನನ್ನು ಕ್ಷಮಿಸಿ. ನಾವೆಲ್ಲರೂ ಒಂದಾಗಿ ಸರ್ಕಾರಿ ಶಾಲೆಯ ಬಾಗಿಲು ತೆರೆಯೋಣ. ಇದು ಪ್ರಜಾಪ್ರಭುತ್ವ ವ್ಯವಸ್ಥೆ ನಮಗೆ ಬೇಕಾದ ಕಾನೂನು, ಶಿಕ್ಷಣ ವ್ಯವಸ್ಥೆಯನ್ನು ಜಾರಿಗೆ ಗೊಳಿಸೋಣ. ಖಾಸಗಿ ಶಾಲೆಗಳನ್ನು ಮುಚ್ಚಿ ಸೋಣ. 🎒🏫🚸



✍️✍️✍️✍️
ದಾನೇಶ್ವರಿ ಬಸವರಾಜ ಶಿಗ್ಗಾವಿ
ಗ್ರಾಮ : ಜಲ್ಲಾಪುರ
ತಾಲೂಕ್: ಸವನೂರ
ಜಿಲ್ಲಾ :ಹಾವೇರಿ.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ :9448713659 ವಾಟ್ಸಪ್ ಮಾತ್ರ )

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...