ಹಳ್ಳಿಯ ಘನತೆ
ದಿಲ್ಲಿ ತಿರುಗಿದರೇನು
ಎಲ್ಲಿ ಸುತ್ತಿದರೇನು
ಹಳ್ಳಿ ನಂಟಿನ ಬಂಧ
ಕಳ್ಳು ಮರೆಯುವುದೇನು
ಪ್ರೀತಿ ಹಂಚುವರಿಲ್ಲಿ
ನೀತಿ ಧರ್ಮಕೆ ಹೆಸರು
ಮತಿಗೆ ಸಾಣಿಯ ಹಿಡಿದು
ಜೊತೆಯೆಂದು ಬಿಡದವರು
ಮಣ್ಣು ನಂಬಿ ಬದುಕಿ
ಹೆಣ್ಣು ಪೂಜಿಸುವವರು
ಬೆಣ್ಣೆಯಂತೆ ಕರಗೋ
ಜಾಣ ಜನಾರ್ಧನರು
ಒಂದೇ ಮಾತಿನ ಮೇಲೆ
ಹೊಂದಿ ನಡೆಯುವವರು
ಅಂದು ಅಂದಿನ ಖುಷಿಗೆ
ಚಂದದಿ ನಲಿವವರು
ಬದುಕು ಪ್ರೀತಿಸೊ ಇವರು
ಮುದದಿ ದಣಿಯುತಲಿಹರು
ಹದಿಯ ಮನದ ಕೊಳೆಯ
ನದಿಯಂತೆ ತೊಳೆವವರು
- ಶ್ರೀ ತುಳಸಿದಾಸ ಬಿ ಎಸ್
ಶಿಕ್ಷಕರು, ಗೊರೇಬಾಳ ಕ್ಯಾಂಪ್, ರಾಯಚೂರು.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
🙏nice sir
ಪ್ರತ್ಯುತ್ತರಅಳಿಸಿಧನ್ಯವಾದಗಳು ಮೇಡಂ. 🙏🙏🙏🙏
ಅಳಿಸಿಲೇಖಕರು ಈ ಕಾಮೆಂಟ್ ಅನ್ನು ತೆಗೆದು ಹಾಕಿದ್ದಾರೆ.
ಅಳಿಸಿತುಂಬಾ ಚೆನ್ನಾಗಿದೆ. ನೀವೊಬ್ಬ ಪ್ರಬುದ್ಧ ಕವಿ
ಪ್ರತ್ಯುತ್ತರಅಳಿಸಿಧನ್ಯವಾದಗಳು. ��
ಅಳಿಸಿಧನ್ಯವಾದಗಳು. ��������
ಪ್ರತ್ಯುತ್ತರಅಳಿಸಿಅರ್ಥಗರ್ಭಿತವಾಗಿದೆ ತುಳಸಿದಾಸ್ˌ ನಿನ್ನ ಲೇಖನಿಯಲಿ ಇನ್ನೂ ಮೂಡಲಿ ಕನ್ನಡಸಾಹಿತ್ಯದ ಹೊಸ ಹೊಸ ಕವನಗಳು. ಅಭಿನಂದನೆಗಳು.
ಪ್ರತ್ಯುತ್ತರಅಳಿಸಿಧನ್ಯವಾದಗಳು ����
ಪ್ರತ್ಯುತ್ತರಅಳಿಸಿ