ಭಾನುವಾರ, ಆಗಸ್ಟ್ 29, 2021

ಆದಿಪೂಜಿಪ ಪಾರ್ವತಿ ತನಯ ( ಕವಿತೆ) - ಶ್ರೀ ಪುರುಷೋತ್ತಮ ಪೆಮ್ನಳ್ಳಿ.

 ಆದಿಪೂಜಿಪ ಪಾರ್ವತಿ ತನಯ

ಆದಿಪೂಜಿಪ ಪಾರ್ವತಿ ತನಯ
ಕರುಣಿಸು ಗಜವದನ ನೀ ಅಭಯ
ನಿವಾರಿಸಿ ಸಲಹು ಮನದ ಭಯ
ದೊರಕಿಸು ಬೆನಕ ಬಾಳಿಗೆ‌ ವಿಜಯ
ಶಾಂತಿಯಲಿರುಸು ನಮ್ಮ ಧರೆಯ...

ಆನೆಯ ಮೊಗದ ಸುಂದರ ವದನ
ಕರಮುಗಿಯಲು ಬಾಳೇ ಪಾವನ
ಸಮೃದ್ಧಿಯಲಿರಿಸು ನಮ್ಮ ಜೀವನ
ಹೃದಯ ನಂದನದಿ ಮಾಡಿದೆ ಭವನ
ಬರೆದು ಬೇಡುವೆ ಭಕ್ತಿಯ ಕವನ...

ಬಾಳಿನ ತೇರ ನೆಮ್ಮದಿಯಲಿ ಸಾಗಿಸು
 ಬುದ್ದಿಯ ಬಲವ ನಮಗೆ ತಿಳಿಸು
ಮನದಲಿ ಭಕ್ತಿಯ ಭಾವವ ಬೆಳೆಸು
ಒಳ್ಳೆಯ ತನಕೆ  ನಮ್ಮನು ಹರಸು
ಪಾಪದ ಮನವನು ದೂರ ಸರಿಸು...

ರಾವಣನಿಂದ ಆತ್ಮಲಿಂಗವ  ಪಡೆದು
ಬುದ್ಧಿಚಾತುರ್ಯದಿ ಕಾದಿಯೇ ಮೆರೆದು
ಶಶಿ ಸೋತನು ಶಾಪದಿ ದೂರ ಸರಿದು
ನೀಡಿದೆ ವರವ ಭಕ್ತಿಯ ಮೆಚ್ಚಿ ಮೆರೆದು
ಸ್ವರ್ಗವೇ ದೇವ ನೀ ನೆಲಸಿದ ಮನವದು...

ಮೊದಲ ಪ್ರಾರ್ಥನೆಯು ನಿನಗೆ ಬೆನಕ
ಇಳೆಯಲಿ ಮೊಳಗಿಸು ಭಕ್ತಿಯ ಕಾಯಕ
ಸಕಲ ಗಣಕೂ ನೀನೆ ಪ್ರೀತಿಯ ನಾಯಕ
ಏಳ್ಗೆಗೆ ಬೇಡುವೆವು ನಿನ್ನ ವಿನಾಯಕ...
- ಪುರುಷೋತ್ತಮ ಪೆಮ್ನಳ್ಳಿ
ಪಾವಗಡ ತಾ ತುಮಕೂರು ಜಿ.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...