ಭಾನುವಾರ, ಆಗಸ್ಟ್ 29, 2021

ಧರ್ಮವೆಂಬ ಪ್ರಸಾದ ಬೇಕು ( ಲೇಖನ) - ಶ್ರೀ ಮಂಜುನಾಥ ಹಿರೇಮಠ, ದಂಡಸೋಲಾಪುರ.

 ಧರ್ಮವೆಂಬ ಪ್ರಸಾದ ಬೇಕು

ಧಾರ್ಮಿಕ ಯುವ ಸಾಹಿತಿಗಳು ಮತ್ತು ಶಿಕ್ಷಕರು. ಧರ್ಮವೆಂಬ ಪ್ರಸಾದ  ಬೇಕು :ಜಗತ್ತಿನಲ್ಲಿ ಎಲ್ಲರಿಗೂ ಪ್ರಸಾದ ಬೇಕೇ ಬೇಕು ರಾಜನಿಂದ ಹಿಡಿದು ಭಿಕ್ಷೆಕರವರೆಗು ಪ್ರಸಾದ. ಎಲ್ಲರು ಬದುಕಬೇಕೆಂದರೆ  ಪ್ರಸಾದವನ್ನು ಅವಲಂಬಿಸಲಾಗಿದೆ. ಯಾರೊಬ್ಬರೂ ಪ್ರಸಾದವನ್ನು ತಿರಸ್ಕರಿಸಲಾರರು ಅದನ್ನು ಪ್ರಾಣ ಸಮಾನವಾಗಿ ಪ್ರೇಮಿಸುತ್ತಾರೆ. ಕಾರಣ ಶರೀರದ ದುಡಿತಕ್ಕೆ ಹಾಗೂ ಚೈತನ್ನೆಕ್ಕೆ ಪ್ರಸಾದವೇ ಮೂಲವಾಗಿದೆ ಈ ಸತ್ಯವನ್ನು ಎಲ್ಲರು ಒಪ್ಪಿಕೊಳ್ಳುತ್ತಾರೆ ಅದೇ ರೀತಿಯಲ್ಲಿ ಪ್ರತಿಯೊಬ್ಬರಿಗೂ ಧರ್ಮವೆಂಬ ಪ್ರಸಾದ ಬೇಕೇ ಬೇಕೆಂದು ತಪಸ್ವಿಗಳು ತಿಳಿಸುತ್ತಾರೆ ಧರ್ಮದ ಪ್ರಸಾದ ಇಲ್ಲದಿದ್ದರೆ ಜೀವನದಲ್ಲಿ ಸುಖವಾಗಿ ಬದುಕಲು ಸಾಧ್ಯವಿಲ್ಲ ಯಾರೊಬ್ಬರೂ ಧರ್ಮವನ್ನು ತಿರಸ್ಕರಿಸುವಂತಿಲ್ಲ ಅದರಂತೆ ಶರಣರು ಧರ್ಮವೆಂಬ ವಿದ್ಯೆಗೆ ಪ್ರೋತ್ಸಾಹ ಕೊಡುತ್ತಿದ್ದರು ಈ ಧರ್ಮದ ವಿದ್ಯೆಯನ್ನು ಎಷ್ಟಾ ದರು ಪ್ರಮಾಣದಲ್ಲಿ ಕಲಿತಗಲೇ ಸುಖಿಗಲಾಗಬಹುದು. ಪುಣ್ಯಕಾರ್ಯಗಳನ್ನು ಮಾಡುತ್ತ ಹೋಗುತ್ತೀದ್ದಂತೆ ಮಾರ್ಗ ರಚಿತವಾಗುತ್ತದೆ ಅದು ಪುಣ್ಯದುರಿಗೆ ಹೋಗುವ ಮಾರ್ಗವಾಗಿದೆ ಪುಣ್ಯದ ಶಕ್ತಿಯೇ ಧರ್ಮ ಮಾರ್ಗವನ್ನು ರಚಿಸಿ ಕೊಡುತ್ತದೆ ಅದಕ್ಕಾಗಿ ಮಾರ್ಗ ಬೇಕಾದವರು ಪುಣ್ಯಕಾರ್ಯಗಳನ್ನು ಮಾಡುತ್ತ ಹೋಗಬೇಕು. ಅಷ್ಟೆ ಅಲ್ಲ ಧರ್ಮವು ಸಮಾಜದ ಅಂಕು ಡೊಂಕು ತಿದ್ದುವಲ್ಲಿ ಸಹಕರಿಯಾಗಿದೆ.

- ಮಂಜುನಾಥ ಹಿರೇಮಠ,  ದಂಡಸೋಲಾಪುರ (ಚಾಮನಾ ಳ )ತಾ /ಶಹಾಪುರ.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಶ್ರೀಮತಿ ಬಿ ಬಿ ದೇವದುರ್ಗ ಅವರಿಗೆ ಜಿಲ್ಲಾ ಮಟ್ಟದ ಉತ್ತಮ ಪ್ರಶಸ್ತಿ...

ಶ್ರೀಮತಿ ಬಿ ಬಿ ದೇವದುರ್ಗ ಅವರಿಗೆ ಜಿಲ್ಲಾ ಮಟ್ಟದ ಉತ್ತಮ ಪ್ರಶಸ್ತಿ.....            ಜಿಲ್ಲಾ ಆಡಳಿತ ಜಿಲ್ಲಾ ಪಂಚಾಯತ್   ಉಪನಿರ್ದೇಶಕರ ಹಾಗೂ ಕ್ಷೇತ್ರ...