ಮಂಗಳವಾರ, ಆಗಸ್ಟ್ 31, 2021

"ಹುಟ್ಟುತ್ತಾ ಜೋಡಿಯಾಗಿಲ್ಲ - ಹೋಗುವಾಗ ಜೋಡಿಯಾಗುವದಿಲ್ಲ" (ಲೇಖನ) - ಮಂಜುನಾಥ ಹಿರೇಮಠ ದಂಡಸೋಲಾಪುರ (ಚಾಮನಾ ಳ).

 "ಹುಟ್ಟುತ್ತಾ ಜೋಡಿಯಾಗಿಲ್ಲ -ಹೋಗುವಾಗ ಜೋಡಿಯಾಗುವದಿಲ್ಲ ".

  ಬಹಿರಂಗದಲ್ಲಿ ಒಂದು ಮಗುವಿರುವುದು  ಅದು ಆಡುತ್ತಾ  ಆಡುತ್ತಾ ಮನೆಯನ್ನು ಬಿಟ್ಟು ಹೊರಗೆ ಹೋಗುವದು ಹೀಗೆ ಮಗು ಹಾದಿಯಲ್ಲಿ ಯಾವುದೇ ವಸ್ತುಗಳು ಬಿದ್ದಿದ್ದರೆ ಅವುಗಳನ್ನು ತೆಗೆದುಕೊಂಡು ಬರುವದು. ಅವು ನನ್ನವೇ ನನ್ನದೇ ಎಂದು ಹೇಳುವದು. ಅದನ್ನು ಯಾರಾದರೂ  ಕೇಳಿದರು ಕೊಡಲಾರದು ಆ ವಸ್ತುವಿನ ಮಾಲೀಕರೇ  ಬಂದು ಕೇಳಿದರು ಕೊಡಲಾರದು. ಹಾದಿಯಲ್ಲಿ ಸಿಕ್ಕ ವಸ್ತುಗಳೆಂದರೆ ತಂದೆ ತಾಯಿ, ಸತಿ, ಸುತರಾಗಿರುವರು   ಇವರು ಹುಟ್ಟುತ್ತಾ ಜೋಡಿಯಾಗಿಲ್ಲ  ಹೋಗುವಾಗ  ಜೋಡಿಯಾಗುವದಿಲ್ಲ ಇವರು ನಡುಮದ್ಯದಲ್ಲಿ  ನಮಗೆ ಸಿಕ್ಕವರು. ಈ ವಸ್ತುಗಳಾದರೂ ನಮ್ಮವಲ್ಲ  ಹೀಗೆ ನಮ್ಮವಲ್ಲದ ವಸ್ತುಗಳನ್ನು  ಹಾದಿ ಮದ್ಯದಲ್ಲಿ ದೊರೆತವರನ್ನು ನನ್ನವರೇ ಎಂದು ಬಲವಾಗಿ ಹಿಡಿದುಕೊಂಡಿದ್ದೇವೆ ಆ ಮಗುವಿನಂತೆ ಅಜ್ಞಾನದಿಂದ ಪರವಸ್ತುಗಳನ್ನು ನಮ್ಮದೆಂದರೆ  ನಮ್ಮದಾಗಬಲ್ಲುದೆ ಅದರ ಮಾಲೀಕ ಶಿವನಾಗಿರುವನು. ಅದಕ್ಕಾಗಿ ಅಜ್ಞಾನದಲ್ಲಿರುವ ಮನಗಳಿಗೆ ಅರುವಿನ ಅವಶ್ಯಕತೆ ಇದೆ. ಸತ್ಯ, ಧರ್ಮ ಶಕ್ತಿಗಳಿಸಿದ  ಆತ್ಮಗಳು ಸಂಪತ್ತು ಗಳಿಸಿದಂತೆ ಇರುತ್ತವೆ. ಈ ಸಂಪತ್ತು ಗಳಿಸಿದ ಮನಗಳಿಗೆ ಹೊರಗಿನವರ ಸಹಕಾರದ ಅವಶ್ಯಕತೆ ಇರುವುದಿಲ್ಲ ಕಾರಣ ಅವರಲ್ಲಿ ಸತ್ಯ, ಧರ್ಮದ ಸಂಪತ್ತು ಅವರನ್ನು ಸದಾ ಧರ್ಮ ಮಾರ್ಗದಲ್ಲಿ ನಡೆಸುತ್ತದೆ. ಇದು ಒಳಗೆ ಗುರುವಾಗಿ, ಶಿವನಾಗಿ ರಕ್ಷಣೆ ಮಾಡುತ್ತದೆ.ಸಂಸಾರವೆಂಬುದು  ಬಡತನದ ಊರು, ಆದ್ಯಾತ್ಮವೆಂಬುದು  ಸಿರಿತನದ ಊರುಗಳು ಅಧ್ಯಾತ್ಮ ದೊರೆಯಬೇಕಾದರೆ ಮನದಲ್ಲಿ ಇಷ್ಟ ದೇವರನ್ನು ಸ್ಥಾಪಿಸಿಕೊಂಡು ಗುರುವಿನ ಮಾರ್ಗದರ್ಶನದಲ್ಲಿ  ನಡೆದರೆ  ಧಾರ್ಮಿಕ  ಸಂಪತ್ತು ಗಳಿಸಲು ಸಾಧ್ಯ. ಶಿನೋಲುಮೆ ಬರಲಾರದೆ  ನಮ್ಮ ಮನದಲ್ಲಿ ಪರಿವರ್ತನೆಯಾಗಲಾರದು  ಆದರೆ ಶಿವಾನೊಲುಮೆಯನ್ನು ಪಡೆದುಕೊಳ್ಳುವದು ಹೇಗೆ? ಶಿವನ ಮೇಲಿಟ್ಟ ನಂಬಿಗೆಯೇ ಶಿವನೋಲುಮೆಗೆ ಕಾರಣವಾಗುವದು. ಶಿವನ ಮೇಲೆ ಪೂರ್ಣ ನಂಬಿಕೆ ಇದ್ದಾಗ ನಮ್ಮ ಮನಕ್ಕೆ ಶಿವನು ಬರುವನು ಮತ್ತು ಒಲುಮೆ ಪಡೆಯುವದು. ಆದ್ದರಿಂದ ಹಾದಿಯಲ್ಲಿ ಸಿಕ್ಕ  ನಮ್ಮವಲ್ಲದ ವಸ್ತುಗಳನ್ನು ಆರಾಧಿಸುವದಕ್ಕಿಂತ ಧರ್ಮದ ಹಾದಿ ಹಿಡಿದು ಶಿವನೋಲುಮೆ ಪಡೆದರೆ ನಮ್ಮ ಮನದಲ್ಲಿ ಶಿವನು ಬಂದು ನಿಲ್ಲುವನು.. ಅಷ್ಟೆ ಏಕೆ ಸಂಸಾರದಲ್ಲಿ ಪರಿಶ್ರಮವು ಮತ್ತು ಸುಖವು ಅಲ್ಪವಾಗಿದೆ ಅದು ಕೂಡ ಸುಖದ ಆಭಾಸಾವೆ ಹೊರತು ಸುಖವಲ್ಲ." The young person say life is full of joy but wise person say life is sorrows"ಜೀವನ ಭೋಗಿಸುವ ಸಲುವಾಗಿ ಇದೆ ಎಂದು ಹೇಳುವವರು ಒಂದು ಕಡೆಯಾದರೆ ಜಾಣರು ಜೀವನ ದುಃಖಗಳ ಮನೆ ಎಂದು ಹೇಳುತ್ತಾರೆ ಆದರೆ ವಾಸ್ತವದಲ್ಲಿ ಇದು ಭೋಗಿಸುವ ಸಲುವಾಗಿಯೂ ಇಲ್ಲ ದುಃಖದ ಮನೆಯು ಅಲ್ಲ ಜೀವವು ಜೀವದಾತ ಆ ಶಿವನನ್ನು ಅರಿಯುವ ಸಲುವಾಗಿ ಇದೆ.ಜ್ಞಾನದ ಬೆಳಕು ಬಂದಾಗ ಅಜ್ಞಾನವೆಂಬ ಕತ್ತಲು ದೂರವಾಗುವ ಹಾಗೆ ಪ್ರತಿಯೊಬ್ಬರೂ ಧರ್ಮದ ಹಾದಿಯಲ್ಲಿ ನಡೆದು ಶಿವನೋಲುಮೆ ಪಡೆದು ಬೆಳಕಿನಲ್ಲಿ ಸಾಗಬೇಕಾಗಿದೆ. "ನಂಬು ನಂಬಲೇ ಮನವೇ ಹಂಬಲಿಸದಿರು ಬರಿದೆ, ನಂಬುಗೆಯೇ ಕಾರಣವು ಸಾಂಬಾನೊಲಿಸುವದಕ್ಕೆ "


-  ಮಂಜುನಾಥ ಹಿರೇಮಠ ದಂಡಸೋಲಾಪುರ (ಚಾಮನಾ ಳ).


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ )

1 ಕಾಮೆಂಟ್‌:

  1. ಶಿವನ ಒಲುಮೆಯ ಹಾದಿ ಸಂಸಾರ ಬಿಟ್ಟು ಬರುವುದೋ ಇಲ್ಲ ಸಂಸಾರದ ಜೊತೆಯಲ್ಲಿ ಹುದುಕುಹುದೋ ಸಾಹಿತಿಗಳೇ

    ಪ್ರತ್ಯುತ್ತರಅಳಿಸಿ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...