ಸೋಮವಾರ, ಆಗಸ್ಟ್ 30, 2021

ಜಗದೋದ್ದಾರಕನಿಗೆ ಜೋಗುಳದ ಲಾಲಿ (ಕವಿತೆ) - ಮಾಜಾನ್ ಮಸ್ಕಿ.

ಜಗದೋದ್ದಾರಕನಿಗೆ ಜೋಗುಳದ ಲಾಲಿ 

ಜಗದೋದ್ದಾರಕ ಬಂದನಾ 
ಜನರುದ್ದಾರ ಮಾಡ್ಯಾನ 
ಎನ್ನಿರೋ ಜೋ ಜೋ ಜೋ 

ಮಾಧವ ಹುಟ್ಟ್ಯಾನ 
ಬಂಗಾರ ತೊಟ್ಟಿಲೊಳು ಮಲಗ್ಯಾನ 
ನಗು ನಗುತಾ ಜೋ ಜೋ ಜೋ

ಕಟಿಯುವ ಮಜ್ಜಿಗೆಯೊಳ ಬೆಣ್ಣೆಗೆ ಕೈ ಹಾಕ್ಯಾನ 
ತುಂಟ ಕೃಷ್ಣನು ಬಚ್ಚಿಟ್ಟ ಬೆಣ್ಣೆಯ ಕದ್ದನಾ 
ನಗು ನಗುತಾ ಜೋ ಜೋ ಜೋ 
 
ಹೊತ್ತ ನೀರ ಮಡಿಕೆಗೆ  ಕಲ್ಲು ಎಸೆದಾನ 
ಗೋಪಿಯರ ಬಟ್ಟೆ ಕದ್ದ ಗೋಪಾಲ ಮರೆಯಲ್ಲಿ ನಿಂತ
ನಗುನಗುತಾ ಜೋ ಜೋ ಜೋ 

ಪ್ರೇಮದಿ ಛೇಡಿಸ್ಯಾನ ರಾಧೆಗೆ 
ನಸುಗೋಪ ತರಿಸ್ಯಾನ ಮುರಳಿ 
ಮೋಹನ ನುಡಿಸ್ಯಾನ ನಗು ನಗುತಾ ಜೋ ಜೋ ಜೋ 

ಮಣ್ಣು ತಿಂದ ಬಾಯಿ ತೆರೆದಾನ 
ಯಶೋದಮ್ಮಗೆ ಬ್ರಹ್ಮಾಂಡ ತೋರಿಸ್ಯಾನ 
ಮುರುಳೀಧರ ನಗು ನಗುತಾ 
ಜೋ ಜೋ ಜೋ 

ಆಟ ಆಡುತಲಿ ಕಾಳಿಂಗ ಸರ್ಪ 
ಮಣಿಸ್ಯಾನ 
ಶ್ಯಾಮ ಸುಂದರ ನಗು ನಗುತಾ ಜೋ ಜೋ ಜೋ 

ಕೊಲ್ಲಲು ಬಂದ ಕಂಸನ ಕೊಂದ್ಯಾನ 
ಮರಣವ ಗೆದ್ದ ಗಿರಿಧರ 
ನಗು ನಗುತಾ ಜೋ ಜೋ ಜೋ 

ಮನೆ ಮನೆಯಾಗ ಹುಟ್ಟ್ಯಾನ 
ನಗು ನಗುತಾ ಓಡ್ಯಾಡಾನಾ ನಮ್ಮ ತುಂಟಾ ಕೃಷ್ಣನಂಗೆ ಎನ್ನಿರೋ ಜೋ ಜೋ ಜೋ 
- ಮಾಜಾನ್ ಮಸ್ಕಿ.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...