ದೇವ ಮಾನವ....
ಕಂಸನ ಆಡಳಿತದ ಪ್ರಭಾವ
ದೇವಕಿ ದಂಪತಿಗೆ ಶಿಕ್ಷೆಯ ವಿಪ್ಲವ
ಸತತ ಹಿಂಸೆಯ ಕಂಸ ದುರುಳ
ಸೆರೆಮನೆ ಕೃಷ್ಣನ ಜನ್ಮಸ್ಥಳ
ದುಷ್ಟ ಶಿಕ್ಷೆಯ ಅವತಾರಿ ಕಂದ
ಯಶೋಧೆ ಮಡಿಲಲಿ ಬೆಳೆದ ಚೆಂದ
ಬೆಣ್ಣೆ ಕಳ್ಳ ಮುದ್ದು ಕೃಷ್ಣನ ಅಂದ
ರಾಧಾಕೃಷ್ಣ ಪ್ರೇಮದ ಅನುಬಂಧ...
ಕೊಳಲ ನಾದದ ಗಾನ
ಪ್ರೇಮ ಭಾವದ ಮನ
ರಂಗಿನಾಟದ ರಾಸಲೀಲೆ
ರಾಧೆ ಒಲವಿನ ಅಲೆ...
ಹಲವು ಯುಗಗಳಲಿ ಜನನ
ಧರ್ಮರಕ್ಷಣೆಯ ಜೀವನ
ನವಿಲ ಗರಿಯ ಮಾಧವ
ಗೀತೆ ಸಾರಿದ ದೇವಮಾನವ
ಪಾರ್ಥ ಸಾರಥಿ ವಾಸುದೇವ
ಅಕ್ಷಯ ಸೀರೆಯನಿತ್ತ ದೇವ
ಮಹಾಭಾರತ ಯುದ್ಧದ ನಿರ್ಮಾಪಕ
ಧರ್ಮರಕ್ಷಣೆಯೇ ಕೃಷ್ಣನ ಕಾಯಕ
- ಹಂಸರಾಗ ಶೆಟ್ಟಿ ಪುತ್ತೂರು.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ )
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ