ಜಾತಿ
ಜಾತಿ ಜಾತಿ ಯಾಕನತಿ
ಜಾತಿಯಲ್ಲಿಲ್ಲ ಯಾವುದೇ ನೀತಿ
ನೆನೆದು ನೀ ಬದುಕುತಿ
ಸಂಸ್ಕಾರ ಪಡೆದ ರೀತಿ//೧
ನಿನಗೆ ಆಗಲಿ ಗುರು ಸ್ಪೂರ್ತಿ
ಗಳಿಸಲು ಮನುಕುಲ ಕೀರ್ತಿ
ಬೆಳಗುವೆ ನಾನು ಆರ್ತಿ
ನೀನೆ ನನಗೆ ದೇವ ಮೂರ್ತಿ//೨
ಇರುವದೊಂದೆ ಮಾನವ ಜಾತಿ
ಲೋಕಪೂರ್ತಿ ಮಾನವಧರ್ಮ ಮೆರಿತೈತಿ
ಆದರೂ ಆಚಾರ ವಿಚಾರ ಮರೆತು ಕೂತಿ
ನಾನು ನನದು ನೆನೆದು ಪ್ರತಿಸರತಿ//೩
ಈ ಭಾರತ ಮಾತೆ
ಮರೆತಿಲ್ಲ ಭಗವದ್ಗೀತೆ
ನಾಡಿಗೆ ಸಾರಿದೆ ಭಾವೈಕ್ಯತೆ
ಎಲ್ಲರಿಗೂ ನೀಡಿ ಸಮಾನತೆ//೪
- ಧ್ಯಾಮ್ ರಾಜ್. ವಾಯ್ಹ್. ಸಿಂದೋಗಿ ಸಾ!ಭೈರಾಪೂರ ತಾ!ಜಿ!!ಕೊಪ್ಪಳ.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ).
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ