ಮಂಗಳವಾರ, ಸೆಪ್ಟೆಂಬರ್ 28, 2021

ಹೊಳ್ಳಿ ಹೊಳ್ಳಿ ನೋಡ್ಯಾಳೋ"...! (ಕವಿತೆ) - ಹನುಮಂತ ದಾಸರ, ಹೊಗರನಾಳ.

"ಹೊಳ್ಳಿ ಹೊಳ್ಳಿ ನೋಡ್ಯಾಳೋ"...!

ಸಂಜೀಕ ನೆನೆದರ ನನ್ನವಳ ಹೆಸರ
ಸನಿಹಕ್ಕ ಸುಳಿದೈತಿ ಅವಳೆದೆಯ ಹುಸಿರ,
ನವಿಲ್ಹಾಂಗ ನುಲಿದಾಳೋ ನವಲೂರ ರತಿಯು
ಹುಬ್ಬಾರಿಸಿ ನಡೆದಾಳೋ ಹುಬ್ಬಳ್ಳಿ ಸತಿಯು...!!

ನಸುನಕ್ಕ ಕರೆದಾಳೋ ಸನ್ನೆಯಲಿ ಸಂಗಾತಿ
ಕೈ ಮಾಡಿ ಸೆಳೆದಾಳೋ ಧಾರವಾಡ ನಯಗಾತಿ,
ಕೆಂಗಣ್ಣ ಕಣ್ಣೊಳಗ ಗುರಿಯಿಟ್ಟ ನೋಡ್ಯಾಳೋ
ಗುಸುಗುಸು ಮಾಡುತಾ ಗುಂಗ ಹಿಡಿಸ್ಯಾಳೋ...!!

ಮೈಸೂರ ಮಲ್ಲಿಗೆ ಮುಡುಕೊಂಡ ಬರುತಾಳೋ
ಬೇಲೂರ ಬಾಲೆಯಂಗ ನುಲಿನುಲಿದ ನಾಟ್ಯಾವಾಡ್ಯಾಳೋ,
ಕೆಂದುಟಿಗೆ ಹಚ್ಯಾಳೋ ಕೆಂಪಾದ ತಿಳಿಬಣ್ಣ
ತೆಳ್ಳನ ಸೊಂಟದ ಮ್ಯಾಗ ಹೊತ್ತ ನಡೆದಾಳೋ ಕೊಡವನ್ನ....!!

ಹಳ್ಳಕ್ಕ ನೀ ಬರತಿ ತೊಟ್ಟ ತೆಳ್ಳನ ದಡಿಸೀರೆ
ತಿರುತಿರುಗಿ ನಾ ನೋಡೇನ ಒಂದೊಂದು ಸಾರಿ,
ನಡೆದ ಬರತಿ ಸೊಂಟವ ಬಳುಕಿಸುತ
ಮೆಂಟಲ್ಲ ಆಗೇನ ನಿನ ಬಣ್ಣಕ್ಕ ಮನಸೋತ...!!

ಹೊಳ್ಳಿಹೊಳ್ಳಿ ನೋಡ್ಯಾಳೋ ಹೊಂಬೆಳಕ ಚೆಲುವೆ
ಗುಸುಗುಸು ನಸುನಕ್ಕ ನನ್ಯಾಕ ನೀ ಸೆಳೆವೆ,
ಕಂಕಣ ಕಟ್ಟಿ ಕೈಹಿಡಿದು ನಡೆಸುವೆ
ಕೋಮಲೆ ಕನಸಿಗೆ ನನಸಾಗಿಸಿ ನಾನಿರುವೆ....!!

- ಹನುಮಂತ ದಾಸರ, ಹೊಗರನಾಳ.
ಮೊ: 9945246234.



(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಶ್ರೀಮತಿ ಬಿ ಬಿ ದೇವದುರ್ಗ ಅವರಿಗೆ ಜಿಲ್ಲಾ ಮಟ್ಟದ ಉತ್ತಮ ಪ್ರಶಸ್ತಿ...

ಶ್ರೀಮತಿ ಬಿ ಬಿ ದೇವದುರ್ಗ ಅವರಿಗೆ ಜಿಲ್ಲಾ ಮಟ್ಟದ ಉತ್ತಮ ಪ್ರಶಸ್ತಿ.....            ಜಿಲ್ಲಾ ಆಡಳಿತ ಜಿಲ್ಲಾ ಪಂಚಾಯತ್   ಉಪನಿರ್ದೇಶಕರ ಹಾಗೂ ಕ್ಷೇತ್ರ...