ಭಾನುವಾರ, ಸೆಪ್ಟೆಂಬರ್ 26, 2021

ಸತ್ಯದ ಕೋಲು (ಲೇಖನ) - - ಮಂಜುನಾಥ ಹಿರೇಮಠ ದಂಡಸೋಲಾಪುರ (ಚಾಮನಾಳ )ಯುವ ಸಾಹಿತಿಗಳು ಮತ್ತು ಶಿಕ್ಷಕರು.

"ಸತ್ಯದ ಕೋಲು "

ಲೋಕದಾಸೆಗಳೇ ಕತ್ತಲಾಗಿರುವದು. ಕತ್ತಲೆ ಎಂದರೆ ಅಜ್ಞಾನಗಳಾಗಿರುವವು. ಆಸೆಗಳು ನಮ್ಮ ಮನದಲ್ಲಿ ಇರುವವರೆಗೆ ಅದಕ್ಕೆ ಸಂಭಂದಿಸಿದ ಅಜ್ಞಾನಗಳು ನಮ್ಮ ಮನದಲ್ಲಿ ಇರುತ್ತವೆ. ಇವುಗಳನ್ನು ಮನದಿಂದ ಹೊರಗೆ ಹಾಕಬೇಕೆಂದರೆ ಮತ್ತೆ ಬರುತ್ತವೆ. ಒಂದು ಬಾಗಿಲಿನಿಂದ ಹೊರಗೆ ಹಾಕಿದರೆ ಮತ್ತೊಂದು ಬಾಗಿಲಿನಿಂದ ಒಳಗೆ ಬರುತ್ತವೆ.ಮನೆಯೊಳಗೆ ನಾಯಿ  ಬಂದಿರುವಾಗ ಹೊರಗೆ ಹೋಗು ಎಂದರೆ ಹೋಗಲಾರದು ಅದಕ್ಕೆ ಒಂದು ಕೋಲನ್ನು ಹಿಡಿದರೆ ಹೊರಗೆ ಹೋಗುತ್ತದೆ. ಅದರಂತೆ ನಮ್ಮ ಮನದಲ್ಲಿ ಅಜ್ಞಾನವೆಂಬುದೇ ನಾಯಿಯಾಗಿರುವದು ಹೊರಗಿನ ನಾಯಿಯನ್ನು ನಾವೆಲ್ಲರೂ ಓಡಿಸಲು ಧೈರ್ಯ ಮಾಡುತ್ತಿರುವೆವು ಆದರೆ ಅಂತರಂಗದ ನಾಯಿಯನ್ನು  ಓಡಿಸುವ ಧೈರ್ಯ ನಮ್ಮಿಂದಾಗುತ್ತಿಲ್ಲ. ಹೊರಗಿನ ನಾಯಿ ಕೋಲಿಗೆ ಹೇಗೆ ಅಂಜುವದೋ ಅದರಂತೆ ಅಂತರಂಗದ ನಾಯಿ ಸತ್ಯವೆಂಬ ಕೋಲು ಹಿಡಿದಾಗ ಹೆದರುವದು. ಅದರಂತೆ ಯಾವ  ಆತ್ಮದಲ್ಲಿ ಪರಮಾತ್ಮ  ಸದಾ ಇರುವನೋ ಆ ಮನದಲ್ಲಿ ಯಾವ ರೀತಿಯ ಅಜ್ಞಾನವೆಂಬ ನಾಯಿ ಬರುವದಿಲ್ಲ. ಮಾಲೀಕನಿಲ್ಲದ ಮನೆಯು ಅಶುಚಿಯಾಗಿರುತ್ತದೆ, ಅದರಂತೆ ಎಲ್ಲಿ ಪರಮಾತ್ಮನಿರುವದಿಲ್ಲವೋ  ಆ ಮನದಲ್ಲಿ ಅನೇಕ ಅಜ್ಞಾನವೆಂಬ ಪ್ರಾಣಿಗಳು ವಾಸಿಸುತ್ತವೆ ಇದರಿಂದ ಮನವು ಅಶುಚಿಯಾಗಿರುತ್ತದೆ. ಹೀನ  ಶಕ್ತಿಗಳು ಹೋಗು ಎಂದರೆ ಹೋಗಲಾರವು- ಒಳ್ಳೆಯ ಶಕ್ತಿಗಳು ಬಾ ಎಂದರೆ ಬರಲಾರವು. ಆಸೆಗಳನ್ನೇ ತುಂಬಿಕೊಂಡಿರುವ ಈ ಮನುಷ್ಯ ಜೀವಿಯು  ಮೋಹಕ್ಕೆ ಬಲಿಯಾಗಿ ಜೀವನವೇ ಮೋಹವೆಂದು ನಂಬಿದ ಮೂರ್ಖರೆ ಜಾಸ್ತಿ. ಧರ್ಮವೆಂಬ ಜ್ಞಾನ ಬಾ  ಎಂದರೆ ಬರುವದು ಯಾವಾಗ?  ನಾವು ಸತ್ಯವೆಂಬ -ಪ್ರಾಮಾಣಿಕತೆ ಎಂಬ ಮಾರ್ಗದಲ್ಲಿ ನಡೆದಾಗ ಯಾವ ಶಕ್ತಿಯು ಬಾ ಎಂದಾಗ ಬರುತ್ತದೆ. ಸತ್ಯದ  ಆಧಾರವೇ ಧರ್ಮದ  ಆಧಾರ. ಕಾಮ ಕಾಂಚನಕ್ಕೆ ಬಲಿಯಾಗುವ ಜೀವಿಗಳು ಎಂದಿಗೂ ಶಿವನ ಕೃಪೆಗೆ ಪಾತ್ರವಾಗುವದಿಲ್ಲ. ಲೋಕದಾಸೆಗಳೆಂದರೆ ಕತ್ತಲಾಗಿರುವದು ಸತ್ಯ ಧರ್ಮದಾಸೆಗಳು ಬೆಳಕಾಗಿರುವದು ಲೋಕದಾಸೆ ಇದ್ದವರು ಕತ್ತಲಲ್ಲಿ ಇದ್ದಂತೆ. ಬೆಳಕು ಇದ್ದಲ್ಲಿ ಕತ್ತಲಿಗೆ ಅವಕಾಶ  ಇಲ್ಲ ಹಾಗೆಯೇ ಎಲ್ಲಿ ಧರ್ಮವಿದೆ ಅಲ್ಲಿ ಅಧರ್ಮಕ್ಕೆ ಅವಕಾಶವಿಲ್ಲ ಯಾರು ಧರ್ಮದ ಪಾಲನೆ  ಮಾಡುವರೋ ಅವರು ದೇವರ  ಕೃಪೆಗೆ ಪಾತ್ರರಾಗುತ್ತಾರೆ ಅಷ್ಟೆ ಏಕೆ ಧರ್ಮದ ಅಂಶ ರಕ್ತಗತವಾಗಿ ಬರುತ್ತದೆ ಇಷ್ಟ ದೇವನನ್ನು ಮನದಲ್ಲಿ ಸ್ಥಾಪಿಸಿಕೊಂಡು ಭಕ್ತಿಯ ಸುರಿಮಳೆಗೈದರೆ ಇಷ್ಟ ದೇವರ ಕೃಪೆಯಾಗಿ ಸ್ವರ್ಗ ಪ್ರಾಪ್ತಿಯಗುತ್ತದೆ ಇಲ್ಲವಾದರೆ ನರಕ ಕಟ್ಟಿಟ್ಟ ಬುತ್ತಿ.  ಶಿವನು ಕೊಟ್ಟ ಜೀವನ ಯಾವ ಸತ್ಯವನ್ನು ಸಾಧಿಸದೆ ನಮ್ಮ ಮನವೆಂಬ ಖಾಲಿಪೆಟ್ಟಿಗೆಯನ್ನು  ರಕ್ಷಿಸು, ಕಾಪಾಡು ಎಂದು ಮೊರೆ ಇಟ್ಟರೆ ಆ ಮನವನ್ನು ದೇವರು ಕಾಪಾಡಲಾರನು. ಕಾರಣ ಮನದಲ್ಲಿ ಧರ್ಮವೇ ಇಲ್ಲ.  ಜಗತ್ತಿನ ಶೃಷ್ಟಿಕರ್ತ ಆ ಶಿವನು ತಂದೆ ತಾಯಿ ಇದ್ದಂತೆ . ಜನರು ಕಷ್ಟ ಬಂದಾಗ, ಜೀವ ಹೋಗುವ ಸಂದರ್ಭದಲ್ಲಿ  ಮಾತ್ರ ದೇವರನ್ನು ನೆನಪಿಸುವವರೇ ಜಾಸ್ತಿ. ಸತ್ಯದ ಕೋಲು ಪ್ರಾಮಾಣಿಕತೆಗೆ ಸ್ಫೂರ್ತಿ - ಪ್ರಾಮಾಣಿಕತೆ ಧರ್ಮಕ್ಕೆ ಸ್ಫೂರ್ತಿ -ಧರ್ಮಕ್ಕೆ ಆ ಶಿವನು ಸ್ಫೂರ್ತಿ. ದೇವರು ನಿರ್ಮಿಸಿದ ಈ ದೊಡ್ಡ ಜಾತ್ರೆಯಲ್ಲಿ ಕೆಲವರು ಕಾಮಕಾಂಚನ ಖರೀದಿ ಮಾಡಿರುವರು, ಈನ್ನೂ ಕೆಲವರು ಸತ್ಯ ಧರ್ಮದವೆಂಬ ಬಂಗಾರವನ್ನು ಖರೀದಿಸಿದ್ದಾರೆ ಮುಂದೆ ಶಿವನು ಲೆಕ್ಕಾಚಾರ ಮಾಡುತ್ತಾನೆ ಅಲ್ಲಿ ಸ್ವರ್ಗ ಮತ್ತು ನರಕ ನಿಶ್ಚಯವಾಗುತ್ತದೆ.. ಧರ್ಮ ಗಳಿಸಿದವರು ಮತ್ತೆ ಮರುಜನ್ಮಕ್ಕೂ ಯೋಗ್ಯರಾಗುವರು. ಸತ್ಯದ ಕೋಲು ಧರ್ಮದ  ಹಾದಿಗೆ ಸೋಪಾನ.

- ಮಂಜುನಾಥ ಹಿರೇಮಠ ದಂಡಸೋಲಾಪುರ (ಚಾಮನಾಳ )ಯುವ ಸಾಹಿತಿಗಳು ಮತ್ತು ಶಿಕ್ಷಕರು.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ) 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಶ್ರೀಮತಿ ಬಿ ಬಿ ದೇವದುರ್ಗ ಅವರಿಗೆ ಜಿಲ್ಲಾ ಮಟ್ಟದ ಉತ್ತಮ ಪ್ರಶಸ್ತಿ...

ಶ್ರೀಮತಿ ಬಿ ಬಿ ದೇವದುರ್ಗ ಅವರಿಗೆ ಜಿಲ್ಲಾ ಮಟ್ಟದ ಉತ್ತಮ ಪ್ರಶಸ್ತಿ.....            ಜಿಲ್ಲಾ ಆಡಳಿತ ಜಿಲ್ಲಾ ಪಂಚಾಯತ್   ಉಪನಿರ್ದೇಶಕರ ಹಾಗೂ ಕ್ಷೇತ್ರ...