ದೊಡ್ಡಯ್ಯನ ಪ್ರಿಯ ಚಿಕ್ಕಯ್ಯ
ಒಂದಾನೊಂದು ಹಳ್ಳಿ ಆ ಹಳ್ಳಿಯಲ್ಲಿ ದೊಡ್ಡಯ್ಯ ಮತ್ತು ಚಿಕ್ಕಯ್ಯ ಎಂಬ ಇಬ್ಬರು ಗೆಳೆಯರಿದ್ದರು. ಅವರೇನು ಬಡವರೇನಲ್ಲಾ ಅವರ ಬಳಿ ತಾತನು ಸಂಪಾದಿಸಿದ ಹೊಲ ತೋಟ ಗದ್ದೆಗಳಿದ್ದವು. ಆದರೆ ನಾಲ್ಕು ಜನರಂತೆ ನಾವು ಚೆನ್ನಾಗಿ ದುಡಿದು ಬಾಳಬೇಕೆಂಬ ಆಸೆ ಅವರದ್ದು.ಅಂತೆಯೇ ಇಬ್ಬರು ಮಾತನಾಡಿಕೊಂಡು ನಮ್ಮ ಬಳಿ ಭೂಮಿ ಇದೆ ನೀರಿಗೆನು ತೊಂದರೆ ಇಲ್ಲಾ ಎಂದು ತೀರ್ಮಾನಿಸಿ ವರ್ಷಕ್ಕೆ ಫಲಕೊಡುವಂತಹ ದಾಳಿಂಬೆಯನ್ನು ಬೆಳೆಯೋಣವೆಂದು ಸಸಿಗಳನ್ನು ನೆಡಿಸಿದರು.ಚಿಕ್ಕಯ್ಯನ ಹೆಂಡತಿ ತುಂಬಾ ಒಳ್ಳೆಯವಳು ರೀ ಬೆಳಿಯೋ ಬೆಳೆಯಲ್ಲಿ ನಷ್ಟ ಆದ್ರೆ ಏನು ಮಾಡೋದು ಅಂದ್ಲು.ಅದುಕ್ಕೆ ಚಿಕ್ಕಯ್ಯನು ನೋಡು ಸಸಿಗಳನ್ನು ನಮ್ಮ ಮಕ್ಕಳಂತೆ ನೋಡಿಕೊಂಡು ಆರೈಕೆ ಮಾಡಿದ್ರೆ ಶ್ರಮಕ್ಕೆ ತಕ್ಕಂತೆ ಪ್ರತಿಫಲ ದೊರೆಯುತ್ತೆ ತಿಳಿತಾ ಓಗಿ ಕ್ಯಾಮೆ ನೋಡು ಏನು ಚಿಂತೆ ಮಾಡಬೇಡ ಅಂತಾನೆ. ಚಿಕ್ಕಯ್ಯನು ಗಿಡಗಳನ್ನು ತನ್ನ ಮಕ್ಕಳಂತೆ ನೋಡಿಕೊಳ್ಳುತ್ತಿದ್ದ ಮುಸ್ಸಂಜೆಯ ಹೊತ್ತಲ್ಲಿ ನೀರು ಹಾಯಿಸುತ್ತಿದ್ದ ಆರು ತಿಂಗಳಿಗೆ ಎರಡು ಭಾರಿ ಗೊಬ್ಬರವನ್ನು ಹಾಕಿಸುತ್ತಿದ್ದ .ಗಿಡಗಳ ಅಕ್ಕ ಪಕ್ಕ ಬಂದ ಕಳೆಯನ್ನು ತೆಗಿಸಿ ಮಣ್ಣನ್ನು ಹದಗೊಳಿಸುತ್ತಿದ್ದ ಆದರೆ ದೊಡ್ಡಯ್ಶನು ಗಿಡಗಳಿಗೆ ಸರಿಯಾಗಿ ಪಾಲನೆ ಪೋಷಣೆ ಮಾಡುತ್ತಿರಲಿಲ್ಲ.ನೀರನ್ನು ಮಠ ಮಠ ಮಧ್ಯಾನ ಹಾಯಿಸುತ್ತಿದ್ದಾ.ಗಿಡಗಳಿಗೆ ಗೊಬ್ಬರವನ್ನು ಸರಿಯಾಗಿ ಹಾಕಿಸುತ್ತಿರಲಿಲ್ಲ. ಗಿಡದ ಬುಡದಲ್ಲಿ ಬಂದ ಕಳೆಯನ್ನು ತೆಗೆಸದೆ ಮಣ್ಣನ್ನು ಹದ ಗೊಳಿಸುತ್ತಿರಲಿಲ್ಲ. ಸೋಮಾರಿಯಾಗಿದ್ದನು ಆಡಿ ಗೂಡಿ ಐದನೇ ವರ್ಷಕ್ಕೆ ಕಾಲಿಟ್ಟಿತು ಚಿಕ್ಕಯ್ಯನು ದಾಳಿಂಬೆಯನ್ನು ಕುಯ್ಯಲು ಪ್ರಾರಂಭಿಸಿದನು ಆದರೆ ದೊಡ್ಡಯ್ಯ ನ ಗಿಡಗಳಲ್ಲಿ ಹಣ್ಣುಗಳು ಬಿಡಲೇ ಇಲ್ಲ ಇನ್ನು ಚಿಕ್ಕ ಗಿಡಗಳಂತೆ ಕಾಣಿಸುತ್ತಿದ್ದವು. ಕೆಲವು ಬಾಡಿ ಬತ್ತಿದಂತಿದ್ದವು ಇನ್ನೂ ಕೆಲವು ಹುಳುಗಳು ತಿಂದು ಹಾಳಾಗಿದ್ದವು. ಅತ್ತ ಚಿಕ್ಕಯ್ಯನು ಅತ್ತ ಬಂದ ಹಣ್ಣಿನ ಫಲವನ್ನು ಮಾರುಕಟ್ಟೆಗೆ ತೆಗೆದುಕೊಂಡು ಹೋಗಿ ಮಾರಿ ಬರುತ್ತಿದ್ದಾ ತುಂಬಾ ಲಾಭವೂ ಆಯಿತು ತನ್ನ ಹೆಂಡತಿಗೆ ಮೈತುಂಬಾ ಒಡವೆ ಮಾಡಿಸಿ ಹಾಕಿಸಿದನು.ಅದನ್ನು ನೋಡಿದ ದೊಡ್ಡಯ್ಶನು ಹೆಂಡತಿ ನಿಮಗೇನು ಬುದ್ಧಿ ಇಲ್ವಾ ಆ ಚಿಕ್ಕಯ್ಯ ನ ನೋಡಿ ಕಲತ್ಕೊಳಿ. ಅಂತ ಬಯ್ಯೋಕೆ ಶುರು ಮಾಡಿದ್ಲು ಅದುಕ್ಕೆ ಇವನು ನೋಡು ಇನ್ನೊಂದು ವರ್ಷದೊಳಗೆ ನಾನು ಕೂಡ ಹೀಗೆ ಆಗಿರ್ತೀನಿ ಅಂತ ಹೇಳಿ ಸುಮ್ಮನಾದನು. ದೊಡ್ಡಯ್ಶನು ಚಿಕ್ಕಯ್ಯನ ಹತ್ತಿರ ಬಂದು ಅಬ್ಬಾ ಭಲೇ ಕಿಲಾಡಿ ಕಣೋ ನೀನು ಎಂತ ಲಾಭ ಪಡೆದೆ ನನ್ನುನ ನೋಡು ತುಂಬಾ ನಷ್ಟ ಆಗಿ ಅಲೆದಾಡ್ತ ಇದೀನಿ .ನೀನು ಏನು ಮಾಡಿದೆ ಸ್ವಲ್ಪ ನಂಗೂ ವಸಿ ಹೇಳು ನಾನು ಹಂಗೇ ಮಾಡ್ತೀನಿ .ಅದುಕ್ಕೆ ಚಿಕ್ಕಯ್ಯ ನೋಡು ಗಿಡಗಳಿಗೆ ಆರು ತಿಂಗಳಿಗೆ ಎರಡು ಭಾರಿ ಗೊಬ್ಬರವನ್ನು ಕೊಟ್ಟರೆ ಗಿಡಗಳಿಗೆ ಚೈತನ್ಯ ಮತ್ತು ಪೋಷ್ಟಿಕಾಂಶ ದೊರೆಯುತ್ತದೆ. ಬಂದ ಕಳೆಯನ್ನು ತಗಿಸಬೇಕು ತಗಿಸಿದ್ರೆ ಗಿಡಕ್ಕೆ ಪೋಷ್ಟಿಕಾಂಶ ನೇರವಾಗಿ ಗಿಡಕ್ಕೆ ಮಾತ್ರ ಸೇರುತ್ತೆ ಬಂದಂತ ಕಳೆಗಳಿಗೆ ಸಿಗೊಲ್ಲ ಗೊತ್ತಾ. ದೊಡ್ಡಯ್ಯ ಹೇಳಪ್ಪ ಕೇಳ್ತೀನಿ .ಹೂ ಸರಿ ಕೇಳುಸ್ಕೋ ಮಣ್ಣನ್ನು ಹದ ಗೊಳಿಸಿದ್ರೆ ನೀರು ಬೇಗ ಗಿಡದ ಬೇರು ಸೇರುತ್ತೆ .ಹಾಗೂ ನೀರನ್ನು ಗಿಡಮರಗಳಿಗೆ ಮಠ ಮಠ ಮಧ್ಯಾನ ಹ್ ಆಯಿಸಬಾರದು ಯಾಕೆ ಅಂದ ದೊಡ್ಡಯ್ಯ ? ಯಾಕೆ ಗೊತ್ತಾ ಆ ಸಮಯದಲ್ಲಿ ಸೂರ್ಯನ ಕಿರಣಗಳು ನೇರವಾಗಿ ಭೂಮಿಗೆ ಬಿದ್ದು ಉಷ್ಣಾಂಶ ಅಂದ್ರೆ ತಾಪ ಮಾನ ಹೆಚ್ಚಾಗಿರುತ್ತದೆ.ನೀರನ್ನು ಗಿಡಮರಗಳಿಗೆ ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಕಡಿಮೆಯಾಗುತ್ತದೆ.ಆದ್ರೆ ಮುಂಜಾನೆ ಮುಸ್ಸಂಜೆಯ ವೇಳೆಯಲ್ಲಿ ನೀರನ್ನು ಹಾಯಿಸಿದ್ರೆ ಗಿಡಗಳು ನೀರನ್ನು ಹಿಡಿದಿಟ್ಟುಕೊಳ್ಳುತ್ತವೆ . ಗಿಡಗಳ ಸುತ್ತ ತೇವಾಂಶ ಹಾಗೆ ಇರುತ್ತೆ ಗೊತ್ತಾ ನಾನು ಕೂಡ ಈ ಕ್ರಮವನ್ನೇ ಪಾಲಿಸಿ ಗಿಡಗಳನ್ನು ಪೋಷಣೆ ಮಾಡಿದೆ. ಅದುಕ್ಕೆ ಇಷ್ಟು ದೊಡ್ಡ ಪ್ರತಿಫಲವನ್ನು ಪಡೆದೆ .ನೀನು ಕೂಡ ಈ ರೀತಿಯಲ್ಲಿ ಮಾಡು.ಇನ್ನೊಂದು ವರ್ಷದಲ್ಲಿ ನಿನಗು ಪ್ರತಿಫಲ ಸಿಗುತ್ತೆ. ಗೊತ್ತಾಯಿತು ಬೀಡು ಹಾಗೆ ಮಾಡ್ತೀನಿ ಅಂದ ದೊಡ್ಡಯ್ಯ.ಈ ರೀತಿಯಾಗಿ ಚಿಕ್ಕಯ್ಯನು ಪರಿಹಾರ ಹೇಳಿ ಸಮಾಧಾನ ಮಾಡಿ ಹೋದನು.ದೊಡ್ಡಯ್ಶನು ಕಷ್ಟಪಟ್ಟು ದುಡಿಯ ತೊಡಗಿದ ಶ್ರಮವಹಿಸಿದ . ಅಂತೆಯೇ ಗಿಡಗಳು ಫಲ ಕೊಡಲು ಪ್ರಾರಂಭಿಸಿದವು ಬೆಳೆಯ ಲಾಭವನ್ನು ಪಡೆದನು ಚಿಕ್ಕಾಯ್ಯನಿಗೂ ಕೂಡ ಎರಡನೇ ಭಾರಿ ಎರಡನೇ ಭಾರಿ ಫಲವನ್ನು ಕೊಡಲು ಪ್ರಾರಂಭಿಸಿದವು. ಬಂದ ಬೆಳೆಯ ಇಬ್ಬರು ಒಟ್ಟಿಗೆ ಮಾರುಕಟ್ಟೆಗೆ ತೆಗೆದುಕೊಂಡು ಹೋಗಿ ಮಾರತೊಡಗಿದರು. ಆದರೆ ದೊಡ್ಡಯ್ಶನ ಹೆಂಡತಿಗೆ ಮತಿಗೆಟ್ಟು ದುರಾಸೆಯುಂಟಾಗಿ . ಚಿಕ್ಕಯ್ಯನಿಗಿಂತ ಶ್ರೀಮಂತರಾಗಬೇಕು ಅಂತ ಗಂಡನ ತಲೆ ಕೆಡಿಸಲು ಮುಂದಾದಳು. ಚಿಕ್ಕಯ್ಯನು ಬಂದ ಹಣವನ್ನು ತನ್ನ ಕುಟುಂಬಕ್ಕೆ ಬೇಕಾಗುವಷ್ಟು ಇಟ್ಟುಕೊಂಡು. ಉಳಿದುದನ್ನು ಬಡವರಿಗೆ ಅನಾಥ ಮಕ್ಕಳಿಗೆ ಕೈಲಾದಷ್ಟು ಧನ ಸಹಾಯ ಮಾಡುತ್ತಿದ್ದ.ಇತ್ತ ದೊಡ್ಡಯ್ಯ ಉಳಿದ ಜಮೀನಿಗೆಲ್ಲ ದಾಳಿಂಬೆಯ ಸಸಿಯನ್ನು ನೆಡಿಸಿದನು .ಅದು ಸಾಲದೆಂದು ಬೇರೆಯವರ ಜಮೀನನ್ನು ಗುತ್ತಿಗೆ ಪಡೆದುಕೊಂಡು ಸಸಿಗಳನ್ನು ಬೆಳೆಯಲು ಪ್ರಯತ್ನ ಮಾಡಿದನು ಗಿಡಗಳನ್ನು ತನ್ನ ಮಕ್ಕಳಂತೆ ನೋಡಿಕೊಳ್ಳುತ್ತಿದ್ದ ಆದರೆ ಫಸಲು ಬರುಲು ತಡವಾಗುವುದು ಎಂದು ಗೊಬ್ಬರವನ್ನು ಆರು ತಿಂಗಳಿಗೆ ನಾಲ್ಕು ಭಾರಿ ಚಲ್ಲಿಸುತ್ತಿದ್ದನು. ನೀರನ್ನು ದಿನಕ್ಕೆ ಎರಡು ಭಾರಿ ಹಾಯಿಸುತ್ತಿದ್ದನು. ಇದರ ಪರಿಣಾಮ ಗಿಡಗಳು ಹೊಣಗಲು ಪ್ರಾರಂಭಿಸಿದವು ಇನ್ನು ಕೆಲವು ಕರಗಿ ಹೋದವು.ಇದನ್ನ ನೋಡಿದ ದೊಡ್ಡಯ್ಯ ಇನ್ನೂ ಏನು ಮಾಡೋದು ಕೈಗೆ ಬಂದ ತುತ್ತು ಬಾಯಿಗೆ ಬರದಂತಾಯ್ತು ಎಂದು ಚಿಕ್ಕಯ್ಶನ ಬಳಿ ಹೋದ.ನೆಡೆದ ಸಂಗತಿಯನ್ನೆಲ್ಲಾ ಹೇಳಿದ. ಅಲ್ಲಾ ನಿಂಗೆ ಬುದ್ದಿ ಇಲ್ಲಾ ಅಂತ ಚಿಕ್ಕಯ್ಯ ಬಯ್ಯತೊಡಗಿದ.ಅತಿಗೊಬ್ಬರ ನೀರು ಬಿದ್ದರೆ ಗಿಡಗಳು ಉಳಿತವ ಅತಿಯಾದ ತಾಪಮಾನ ವಾದ್ರೇನೆ ನಮಿಗೆ ತಡಿಯೋಕೆ ಆಗಲ್ಲಾ ಅಂತದ್ರಲ್ಲಿ ನೀನು ಹಿಂಗೆ ಮಾಡಿದ್ದೀಯ ಎಂದು ಬುದ್ದಿ ಹೇಳಿ ಮನವರಿಕೆ ಮಾಡಿದನು .ನಂತರ ತನ್ನ ತಪ್ಪಿನ ಅರಿವಾಗಿ ಇರುವ ಗಿಡಗಳನ್ನು ಚೆನ್ನಾಗಿ ಹಾರೈಕೆ ಮಾಡ ತೊಡಗಿದನು .ಬೇರೆ ತರಹದ ಮರ ,ಗಿಡಗಳನ್ನು ಮತ್ತು ಹೂ ಗಿಡಗಳನ್ನು ಬೆಳೆಯತೊಡಗಿದ .ಬಂದ ಲಾಭದಲ್ಲಿ ಅನಾಥಾಶ್ರಮ, ದೇವಸ್ಥಾನಗಳ ಜೀರ್ಣೋದ್ಧಾರಕ್ಕೆ, ಬಡ ಮಕ್ಕಳ ಓದಿಗೆ ಮೀಸಲಿಟ್ಟ ಮತ್ತು ತನ್ನ ಗೆಳೆಯ ಚಿಕ್ಕಯ್ಯನಿಗೆ ಗೌರವವನ್ನು ಸಲ್ಲಿಸಿದ .ಎಲ್ಲರೂ ನೆಮ್ಮದಿಯಿಂದ ಜೀವನವನ್ನು ಸಾಗಿಸತೊಡಗಿದರು...
_✍️ಭರತ್ ಕಾರಭ
- ಭರತ್ ಕೆ ಆರ್ ಕಾರಭ,
S/O ರಂಗಸ್ವಾಮಿ,
ಎಂಜಿನಿಯರಿಂಗ್ ವಿದ್ಯಾರ್ಥಿ,
ಕಾರೇಕೆರೆ ಊರು,
ಹಾಸನ ಜಿಲ್ಲೆ
ಮೊ:6363668307.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
👌👌
ಪ್ರತ್ಯುತ್ತರಅಳಿಸಿWell dn bro keep ur talent in up bro🙌
ಪ್ರತ್ಯುತ್ತರಅಳಿಸಿNice continue and grow grow
ಪ್ರತ್ಯುತ್ತರಅಳಿಸಿ