ಶುಕ್ರವಾರ, ಅಕ್ಟೋಬರ್ 29, 2021

ಕವನ (ಕವಿತೆ) - ಗೊರೂರು ಅನಂತರಾಜು, ಹಾಸನ. 9449462879.

ಕನ್ನಡ  ಕನ್ನಡ. ಕನ್ನಡ

ನಮ್ಮ ಕನ್ನಡ ಭಾಷೆ
ಕವಿಗಳ ಕಾವ್ಯದ ಗಾಥೆ

ಸಂಗೀತ ಕಲೆಗೆ ಈ ನಮ್ಮ ಕನ್ನಡ
ಕಂಪನು ಸುರಿಸಿಹ ನವಚೇತನ
ಸಾಹಿತ್ಯ ಕಲೆಗೆ ಈ ಸರಳ ಕನ್ನಡ
ಸವಿಯನ್ನು ತುಂಬಿಹ ರಸದೌತಣ

ನಮ್ಮ ಕನ್ನಡ ಭಾಷೆ
ಕವಿಗಳ ಕಾವ್ಯದ ಗಾಥೆ

ಪ್ರೀತಿಯಿಂದ ನುಡಿವ ಈ ನುಡಿ
ಹೊಸತನ ತಂದಿಹ ರಾಗಾವಳಿ
ಮುತ್ತಿನಂತಹ ಈ ನಮ್ಮ ನುಡಿಯು
ಹರಡಲಿ ಲೋಕದ ಎಲ್ಲೆಡೆಯೂ

ನಮ್ಮ ಕನ್ನಡ ಭಾಷೆ
ಕವಿಗಳ ಕಾವ್ಯದ ಗಾಥೆ

ಜೀವನ ಬೇಸರ ಬಡಿದೋಡಿಸುವ
ನಾಳಿನ ಚಿಂತೆಯ ಹೊಡೆದೊಡಿಸುವ
ಬೆಳಕಿನಂತೆ ತಿಳಿಯಾದ ಭಾಷೆ
ಭವ್ಯವಾಗಿಹ ಇತಿಹಾಸ ಭಾಷೆ

  

- ಗೊರೂರು ಅನಂತರಾಜು, ಹಾಸನ. 9449462879.



(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...