ಬುಧವಾರ, ಅಕ್ಟೋಬರ್ 20, 2021

ಕುಣಿತದ ಆಡಳಿತದ ತಾಳಮೇಳ (ಕವಿತೆ) - ಪ್ರೊ.ಗಂಗಾರಾಂ ಚಂಡಾಲ ಮೈಸೂರು.

ದೂರದೃಷ್ಟಿಯ ಫಲ ಬದುಕೆಂದು ಆಶಾಗೋಪುರ ತೋರುವ ನಾಯಕ ಪಶ್ಚಿಮ ದಂಡೆಯಲ್ಲಿ ಹೊಸ ಬಾವುಟ ಹಿಡಿದು.
ಕ್ರಿಯೆಗೆ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿ , ರಾಜಧರ್ಮ ಪಾಲಿಸೆಂದ ಪ್ರಧಾನಿ.
ಸರಳ ಜೀವನ ಕ್ರಿಯೆಗಳನ್ನು ಸಂಕೀರ್ಣಗೊಳಿಸುವ ವಂದಿಮಾಧಿಗರು.
ಮರೆಯಲಾರವು ಓ... ಪ್ರಧಾನಿ ಅಂತಃಕರಣ ಶುದ್ಧಿಯಿಂದ ಆಡಳಿತ ನಡೆಸುವ ಪ್ರತಿಜ್ಞೆ ಮಾಡಿದಾಗ.
ಕಣ್ಣುಗಳ ನೆತ್ತಿಗೆ ಒತ್ತಿಕೊಂಡು ಖಾತೆಗೆ ಹದಿನೈದು ಲಕ್ಷ ಬರುವ ಆಸೆಯಿಂದ ಓಟು.
ಒಂದಷ್ಟು ಸಂಭ್ರಮದ ನಡುವೆ ಖಾತೆಯಲ್ಲಿ ಡೆಪಾಸಿಟ್ ಇದೆಯೆಂದು ಬದುಕಿ.
ಬದುಕನ್ನು ಬದುಕೆಂದು ನಂಬಿ ಬದುಕುತ್ತಿರುವ ನಾವು ದೂರದೃಷ್ಟಿ
ಇಲ್ಲದವರು.
ಧರ್ಮದ ಅನಾಮಿಕ ಸಂಬಂಧಗಳಿಗೆ ಬೀದಿ ಬೀದಿಗಳಲ್ಲಿ ಅನಾಮಿಕ ಧರ್ಮದ ವ್ಯಕ್ತಿ ಎಂದು ಲಾಠಿ ರುಚಿ ತೋರಿಸುವಂತೆ ಕೇಸರಿ ಪಡೆಗೆ.
ಕಾಡುತಿದೆ ಸುಮ್ಮನೆ ಕಣ್ಣುಗಳಲ್ಲಿ ಅತಿಮಾನವರು ಎರಡು ಕಾಲಿದ್ದರು.
ಅವಮಾನಿಸಲೆಂದು ಅಧಿಕಾರ ಹಿಡಿದು ಸಬಕಾ ಸಾಥ್ ಸಬಕಾ ವಿಕಾರ ಎಂದು.
ಓಟು ಹಾಕುವ ಸ್ಪರ್ಧೆ ಇಂತಹ ಹುಟ್ಟಿಗೆ ಕಾರಣ ಆಗುತ್ತದೆಯೆ.
ಹಿಂದಿನವರು ನೀರು ಕುಡಿಯಲು ಕೊಡಲಿಲ್ಲ.
ಅದಕ್ಕೆ ನಾವು ಕೊಡಲಾರೆವು ಪ್ರಮಾಣ ಸಾಕ್ಷಿ.
ಮತ್ತೆ ಬದುಕುತ್ತೇವೆ ಓಟು ಹಾಕದೆ
ಪ್ರಜಾಪ್ರಭುತ್ವ ಉಳಿವಿಗಾಗಿ.
ಸಿಕ್ಕುಗಳಲ್ಲಿ ಪ್ರಜೆಗಳ ಸಿಕ್ಕಿಸಿ ಸಮಸ್ಯೆ
ಉಂಟಾಗಿದ್ದು ಹಿಂದಿನ ಸರ್ಕಾರದ ಅವಧಿಯಲ್ಲಿ.
ರಕ್ತ ತರಿಸುವ ಆಡಳಿತದ ತಾಳಮೇಳ ನೋವಿನ ಯಾತನೆ ಕೋವಿಡ್ ೧೯.
ಯೋಜನೆ ನಾಮಕರಣದ ಉತ್ಸವ
ಉತ್ಸಾಹ ಸಾಹಸದ ಉತ್ತುಂಗ.
ಮಹಾತ್ಮ ಗಾಂಧೀಜಿ ಎದೆಗೆ ಮತ್ತೊಮ್ಮೆ ಗುಂಡು ಹಾರಿಸಲು ಅಧಿಕಾರ ಅಹಂಕಾರ.
ತಂಗಾಳಿ ಬೀಸಿ ಬಂದಿದ್ದು ತನ್ನಿಂದ
ಬದುಕನ್ನು ಸವಿಯಬೇಕು ಮರೆವು ಖಾಯಿಲೆ.
ಕ್ಷುಲ್ಲಕ ಭಾವವೊಂದು ಆಡಳಿತಗಾರರಲ್ಲಿ ಜೀವಂತ.
ಬೀಜ ಬಿತ್ತುವ ಕೆಲಸ ಮಳೆಗಾಲದಲ್ಲಿ ಮಾಡುವುದಿಲ್ಲ ಪೈರು ಬರದಿರಲು ಹಿಂದಿನವರ ಷಡ್ಯಂತ್ರ.
ರೈತರ ಕಾರ್ಮಿಕರ ಬೆವರಿಗೆ ಡಬಲ್ ಬೆಲೆ ನೀಡುವ ಭರವಸೆ ಮಾತ್ರ.
ಅಸಹನೀಯ ಬದುಕು ಸಾದ್ಯವಾಗಿಸಿದ ಕೀರ್ತಿ ಪತಾಕೆ.
ಹತಾಶೆ ಹೇಳಿಕೆ ಪ್ರತಿ ಹೇಳಿಕೆ ನಷ್ಟ ಉಂಟಾಗಿದೆ ಮಾರುವೆವು.
ಖಾಸಗಿ ತಾಯಿ ಹಾಲು ಕುಡಿಯಲು
ಒತ್ತಾಯಪೂರ್ವಕ ವರ ಅದು.
ಕೆಲವು ಜನರ ಸಹಕಾರ ಸರ್ಕಾರ ಸಂಪತ್ತು ದೋಚಿ ಖಾಸಗಿಯವರಿಗೆ.
ಖಾಸಗಿ ಮರ ಹಣ ಬಿಡಿಸುವ ಸ್ಪರ್ಧೆ
ಸರ್ಕಾರದಲ್ಲಿ.
ಸಿಕ್ಕವರಿಗೆ ಸೀರುಂಡೆ ಆಸ್ತಿ ಹರಾಜು ಎಪ್ಪತ್ತು ವರ್ಷ ಗಳಿಸಿದ್ದು.
ಕಾಡುತ್ತಿದೆ ತೀವ್ರವಾಗಿ ಹಸಿವು ಮಕ್ಕಳಲ್ಲಿ ಅಪೌಷ್ಟಿಕತೆ.
ಎರಡು ಕಾಲಲ್ಲಿ ನಡೆಯಬಾರದು ಮೂರು ಕಾಲಲ್ಲಿ ನಡೆದರೆ ಲೈಸೆನ್ಸ್.
ಆಕಾಶ ಅವಕಾಶ ನೀಡಿಲ್ಲ ಆಡಳಿತ ನೀಡಲು.
ಜನಮನ ಗೆದ್ದ ಪಕ್ಷ ಶಿಸ್ತು ಮಾಯ
ಹರಾಜು.
ಪೊಲೀಸರು ನಮ್ಮನ್ನು ಕಾವಲು ಕಾಯುತ್ತಲೆ ತೆರಿಗೆ ದಂಡ ವಸೂಲಿ.
ರಾಶಿ ಫಲ ನಕ್ಷತ್ರ ದಕ್ಷಿಣದ ಕಡೆಗೆ ಹೊರಟಿದೆ.
ತಿರಸ್ಕಾರ ಪೂಜಿಸುವ ಮಂತ್ರಿ ಮಹೋದಯರು ನಕಾರ ಆಯುಧ.
ಋಷಿ ಮುನಿಗಳ ನಾಡು ಗುರುಕುಲ ಶಿಕ್ಷಣ ಕೆಲವರಿಗೆ.
ಹಣ ಗೆಲ್ಲುತ್ತದೆ ನಾಡಿ ಮಿಡಿತ ಸೋಲುತ್ತದೆ.
ವೀರಗಚ್ಚೆ ಪರಾಕ್ರಮಿ ಸಂಗೀತೋತ್ಸವದಲ್ಲಿ ವಿರಮಿಸಿ.
ಮಿಡಿತ ಜಡತ್ವದಿಂದ ಜನರು ದಿಕ್ಕುಗಾಣದೆ.
ಶತೃ ನೀಡಿದ ತೊಂದರೆ ಹಸು ಸಾಕಲು
ಭಟ್ಟಭಂಗಿ ಅಂಗಿ ಚಡ್ಡಿ ಧರಿಸಿ ದಡ್ಡ
ದಡ್ಡ ಗುರು.
ಕೇಶ ಮುಂಡನ ಶೂರರಿಗೆ ಉದ್ಯೋಗಿಗಳಿಗೆ ಸಂಬಳ ಕತ್ತರಿ.
ಮತ್ತೆ ಬೆಳೆಯುತ್ತದೆ ಬಿಡು ಚಿನ್ನ ಹಣ ಕೊಳ್ಳೆ.
ಮತದಾರರಿಗೆ ಮೈ ಉರಿಯುತ್ತದೆ ಏನು ಪ್ರಯೋಜನ ಎಂದು.
ಕೆಕ್ಕರಿಸಿ ನೋಡುವರು ಗಿಡದ ರೆಂಬೆ ಕೊಂಬೆ ಕತ್ತರಿಸದೆ ಬುಡವನ್ನು.
ಅಮ್ಮನ ಸ್ಥಾನ ತುಂಬಲು ಬಂದವರು ವಿಷಕನ್ಯೆಯರು.
ನಾಯಿ ಪಳಗಿಸುವ ನಾಯಕರು ಕಣ್ಣೀರು ಒರೆಸಲು ಸಾಧ್ಯವೇ.
ಆಳಕ್ಕಿಳಿದು ತಿವಿಯುವ ಅಭ್ಯಾಸ ಹವ್ಯಾಸ ಇಟ್ಟುಕೊಂಡವರು.
ಚರಿತ್ರೆ ತಿರುಚಿ ಬದುಕನ್ನು ವಿಚಿತ್ರ ವಿಚಿತ್ರ ಹೆಸರುಗಳಿಂದ.
ಅಭಿವೃದ್ಧಿ ಅಭಿವೃದ್ಧಿ ಬೆಲೆ ಏರಿಕೆ
ಬಡವರ ಬದುಕು ತುರಿಕೆ.
ಅಲಗು ಝಳಪಿಸುತ್ತಾ ಆತುರದಲ್ಲಿ ತನ್ನ ಕುತ್ತಿಗೆಗೆ ಹಚ್ಚಿ.
ಲೋಕದ ಕಂಗಳಲ್ಲಿ ಪ್ರೀತಿ ಧಾರಾಕಾರ ಮಳೆಯಾಗಲೆಂದು.

- ಪ್ರೊ.ಗಂಗಾರಾಂ ಚಂಡಾಲ ಮೈಸೂರು.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...