ನಾ ನಡೆದು ಬರುವ ಹಾದಿಯಲ್ಲಿ
ಕಂಡೆನು ನಾನೊಂದು ಸೊಬಗಿನ ಕೆರೆಯಾಗಿ
ಮೈದುಂಬಿ ಹರಿಯುತಿತ್ತು ಆ ಕೊಳ
ಸಕಲ ಜೀವರಾಶಿಗೂ ಜೀವಧಾರೆಯಾಗಿ//೧//
ಬರಸಿಡಿಲಂತೆ ಬರಗಾಲ ಆವರಿಸಿದೆ
ತುಂಬಿದ ಪುಷ್ಕರಣೆಯ ಬರಿದಾಗಿಸಿದೆ
ಬತ್ತಿದ ಧರಣಿಯ ಒಡಲು
ಬದಲಾದ ಪ್ರಕೃತಿಯ ಉಗ್ರತೆಗೆ ಛಿದ್ರವಾಗಿಸಿದೆ//೨//
ಸಸ್ಯ ಶ್ಯಾಮಲೆಯ ನೀ ಕೊಂದು
ನಾವೇ ಮಾಡಿಕೊಂಡ ಈ ಪರಿ
ಮಾಡಿದ್ದು ಉಣ್ಣೋ ಮಹಾರಾಯವೆಂಬಂತೆ
ಪರಿಸರವ ಹಾಳುಮಾಡಿ ನೀನಾದೆ ಪರಾರಿ//೩//
ಇದ್ದಾಗ ನಿಸರ್ಗ ಸಂಪತ್ತುಗಳ ದಿಶಾ ದಿಕ್ಕಿನಲ್ಲೂ
ನಿನ್ನ ಆಸ್ತಿಯಂತೆ ಸಂರಕ್ಷಿಸಿ ಉಳಿಸಿ ಬೆಳೆಸು
ಮುಂದಿನ ಪೀಳಿಗೆಗೆ ನೀನಾಗುವೇ ಯಶ
ಜಗವ ಬೆಳಗುವ ರವಿಯಂತೆ ಪ್ರಜ್ವಲಿಸು//೪//
- ಕಟ್ಟೆ.ಎಂ.ಎಸ್.ಕೃಷ್ಣಸ್ವಾಮಿ, ಮಂಡ್ಯ.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
ಸೊಗಸಾಗಿ ಬಂದಿದೆ
ಪ್ರತ್ಯುತ್ತರಅಳಿಸಿ