ತವರಿಗೆ ತೆರಳಲುನುಮತಿ ಸಿಕ್ಕಾಗಿದೆ ಎಲ್ಲರಿಗದುವೆ ತವನಿಧಿ
ಬೆವರಿಗೆಲ್ಲರೂ ಬಾಗಿಯಾಗಿದೆ ಕಾಯಕವೇ ಇಲ್ಲಿ ಭವನಿಧಿ
ಜವರಾಯ ದೇವರ ಬಳಿ ನಿಲ್ಲಿಸಿಯಾಗಿದೆ ಈತನೆಮ್ಮ ನವನಿಧಿ
ರವವೆಲ್ಲ ಕಲರವಗಟ್ಟಿಯಾಗಿದೆ ಇದುವೆ ಈ ಭುವಿಯ ನಿಧಿ
ತೂರಿ ಬಿಡಿ ಜೊಳ್ಳನೆಲ್ಲ ಸ್ವಲ್ಪ ಗಟ್ಟಿಯಾದರೂ ಉಳಿಯಲಿ
ತೂಗಿ ಬಿಡಿ ಇರುವುದನೆಲ್ಲವ ಸ್ವಲ್ಪ ಸತ್ವವಾದರೂ ತಿಳಿಯಲಿ
ಅಳೆದು ಬಿಡಿ ಭಾವನೆಗಳೆಲ್ಲವ ಸ್ವಲ್ಪ ಹೊಸತನವಾದರೂ ಬರಲಿ
ಉಳಿದು ಬಿಡಿ ಎನ್ನಂತರಂಗದಲ್ಲಿ ಸ್ವಲ್ಪ ನಂಬಿಕೆಯಾದರೂ ಬರಲಿ
ಇಳಿದಾಗಿದೆ ಆಳಕ್ಕೆ ತೀರ ಮುಟ್ಟಬೇಕಿದೆ ಈಜಿ
ತಿಳಿಸಿಯಾಗಿದೆ ಭಾವನೆ ಸೇರಬೇಕಿದೆ ಹಿಂಡು ಗಜ
ಸೆಳೆತ ಬಾಡಿಯಾಗಿದೆ ಬಲಿಯ ಬೇಕಿದೆ ಯೋಚನೆಗಳೆಲ್ಲ ನಿಜ
ಬೆಳಕಿಗೆ ಮುಚ್ಚಿಯಾಗಿದೆ ಕಣ್ಣು ಹೇಗೆ ಕಂಡೀತು ರಾಜ್ಯ
ತಳಿರಂತೆ ಚಿಗುರೊಡೆದ ಪದಕೆ ಕೊಳೆ ಮೆತ್ತದಿರಲಿ
ತಾರಕರೇ ನೀವಾಗಿ ನಯವಾಗಿ ಮುನ್ನಡಿಸಿ ಬಿಡಿ
ತರುಲತೆಯ ಹೂವುಗಳೇ ಕಾವ್ಯ ಸುಗಂಧವಾಗಿರಿಸಿ
ಅರಿವಂತೆ ಮಾಡು ಲೋಕವೇ ಸತ್ಯ ಬಂದೆನ್ನ ಕಾವ್ಯದಿ ನೆಲೆಸು
- ಶ್ರೀ ತುಳಸಿದಾಸ ಬಿ ಎಸ್. ಶಿಕ್ಷಕರು ಗೊರೇಬಾಳ ಕ್ಯಾಂಪ್, ಜಿ.ರಾಯಚೂರು.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ