ಭಾನುವಾರ, ನವೆಂಬರ್ 7, 2021

ಕನ್ನಡದ ರಾಜ ರತ್ನ ಪುನೀತ ರಾಜಕುಮಾರ ರವರಿಗೆ ಅಕ್ಷರ ನಮನ (ಕವಿತೆ) - ಯಮನೂರಪ್ಪ ಎಸ್ ಅರಬರ.

ಮತ್ತೆ ಹುಟ್ಟಿ ಬಾ ಯುವರತ್ನ

ಕನ್ನಡ ಚಿತ್ರರಂಗವೆಲ್ಲಾ ಬಿಕ್ಕಿ ಬಿಕ್ಕಿ ಅಳುತ್ತಿದೆ...!
ಬೆಟ್ಟದ ಹೂ ನಗು ನಗುತಾ ದೇವರ ಪಾದ ಸೇರುತ್ತಿದೆ...!!
ಬಾಲಕನಾಗಿ ಕನ್ನಡಿಗರಿಗೆ ಪ್ರೇಮದ ಕಾಣಿಕೆ ನೀ ನೀಡಿದೆ...! 
ಚಿಕ್ಕ ವಯಸ್ಸಿನಲ್ಲೇ ಹೆತ್ತವರಿಗೆ ಭಾಗ್ಯವಂತ ನೀನಾದೆ...!!

ಎರಡು ನಕ್ಷತ್ರಗಳ ಬೆಳಕಿನಲ್ಲಿ ಚಲಿಸುವ ಮೋಡವನ್ನು ತೋರಿದವನು...!
ಶಿವ ಮೆಚ್ಚಿದ ಕಣ್ಣಪ್ಪನನ್ನು ಧರೆಯಲಿ ಕುಣಿಸಿದವನು ನೀನು...!!
ಪರುಶುರಾಮನ ಬಲವುಳ್ಳ ಪುನೀತ ನನ್ನು ಕರೆದ ಯಮ ಯಾರಿವನು...!
ಶ್ರೀ ಹರಿ ಬಿಟ್ಟು ಬೇರೆ ದೇವರಿಲ್ಲ  ತಂದೆಗೆ ಹೇಳುತ್ತಾ ಭಕ್ತ  ಪ್ರಹ್ಲಾದ ಆದವನು...!!

ವಸಂತ ಗೀತೆಯನ್ನು ಎಲ್ಲರ ಮನ ಮುಟ್ಟುವಂತೆ ಹಾಡಿದ ಅಣ್ಣಾವ್ರ ಮಗ...!
ಯಾರಿಗೂ ಹೇಳದೆ ಅಪ್ಪನ ಬಳಿ ಹೋದೆ ಅಪ್ಪು ನೀನೀಗ...!!
ಅಭಿಯಾನ ಮಾಡಿ ಅಭಿ ಮಾನಿಗಳ ಮನದಲ್ಲಿ ಅಮಾರವಾದ ವೀರ ಕನ್ನಡಿಗ...!
ಮೌರ್ಯನಾಗಿ ಅಮ್ಮ I love you ಎಂದು ನಾಡಿನ ತಾಯಿಯರಿಗೆ ನೀ ಮುಖ ತೋರುವುದು ಯಾವಾಗ...!!

ಆಕಾಶದಲ್ಲಿ ನೀಲಿಯ ಮೋಡದಂತೆ ನಿಷ್ಕಲ್ಮಶ ಪ್ರೀತಿ ನಾಡಿಗೆ ಹಂಚಿದೆ...!
ನಮ್ಮ ಬಸವನಾಗಿ ಕನ್ನಡ ಚಿತ್ರರಂಗದಲ್ಲಿ ನೀ ಬೆಳೆದು ಬಂದೆ...!!
ಅಜಯಯದಲ್ಲಿ ವಿಜಯಯನ್ನಿ ಪತಾಕೆ ಬಾನೆತ್ತರಕ್ಕೆ ಹಾರಿಸಿದೆ...!
ಕನ್ನಡ ನಾಡಿನಲ್ಲಿ  ಆಳಾಗಿ ದುಡಿದು ನಿಜ ಜೀವನದಲ್ಲಿ ಅರಸನಾದೆ...!!

ನಟ ನಟಿಯರ ಸ್ನೇಹದ ಮಿಲನ್  ಅಭಿನಯದಲ್ಲಿ ಮಿಲನವಾದತ...!
ಕುಣಿತದಲ್ಲಿ  ಕುಣಿಯುತ ಬಿಂದಾಸ್ ಜೀವನವನ್ನು ಎಲ್ಲರಿಗೂ ಕಲಿಸಿ ಕೊಟ್ಟಾತ...!!
ಛಲ ಬಿಡದೆ ಗುರಿ ಸಾಧಿಸುತಾ ವಂಶಿ ಯಲಿ ಅಮ್ಮನ ಪ್ರೀತಿ ಗಳಿಸಿದಾತ...!
ರಾಜ್ ನಾಗಿ ನೃತ್ಯದಲ್ಲಿ ಕುಣಿಯುತ ಪೃಥ್ವಿಯನ್ನೆ ಗಢ ಗಢನೇ ನಡುಗಿಸಿದಾತ...!!

ರಾಮ್ ರಾಜ್ಯದಲ್ಲಿ ಎಲ್ಲರನ್ನೂ ಪ್ರೀತಿಸುವ ನಗು ಮುಖದ  ಸಾಹುಕಾರ...!
ಗೆಳಯ ಪ್ರೀತಿ ಗೆಲ್ಲಿಸಲು ಹುಡುಗರ ಜೊತೆಯ ಕೂಡಿ ಕನಸು  ನನಸು ಮಾಡಿದ ಶೂರ...!!
ಪರಮಾತ್ಮನ ವೇಷ ಧರಿಸಿ ಅಣ್ಣಾ ಬಾಂಡ್ ನ ಕುಣಿತದಲ್ಲಿ ಜೇಮ್ಸ್ ನನ್ನೆ ಧರೆಗಿಳಿಸಿದ ವೀರ...!
ಜಾಕಿ ಇವನು ಯಾರೇ ಕೂಗಾಡಲಿ ಎಂದು ನಿನ್ನಂದಲೆ ನಾನು ವಿಧಿಯ ಜೊತೆ ಮೈತ್ರಿ ಮಾಡಿಕೊಂಡ ಅಮರ...!!

ಕರ್ನಾಟಕದಲ್ಲಿ ಪವರ್ ಗೆ ಪವರ್ ಸ್ಟಾರ್ ಈ ಪುನೀತ್ ರಾಜ್ ಕುಮಾರ್...!
ಗಡಿಯ ರಕ್ಷಣೆಗೆ ನಿಂತ ಧೀರ ರಣ ವಿಕ್ರಮನಾದ  ಈ ಪವರ್...!!
ಚಕ್ರವ್ಯೂಹ ರಚಿಸಿ ಭೇದಿಸುವ ಶಕ್ತಿಯ ಹೊಂದಿದ ಕನ್ನಡದ ಸ್ಟಾರ್...!
ಎಲ್ಲರನ್ನೂ ದೊಡ್ಡಮನೆಯಲ್ಲಿ ಬಿಟ್ಟು ಯಾರಿಗೂ ಹೇಳದೆ ಬಾರದ ಲೋಕಕ್ಕೆ ಹೋದ ದೀರ್...!!

ಹನುಮನ ಕಪ್ಪತ ಗುಡ್ಡದಲಿ ಸಂಜೀವಿನಿ ತೆಗೆದುಕೊಂಡು ಅಂಜನಿ ಪುತ್ರ ನಾಗಿ ಮತ್ತೆ ಹುಟ್ಟಿ ಬಾ ನಮ್ಮಣ್ಣಾ...!
ನಟನೆಯನ್ನು ಕನ್ನಡಿಗರಿಗೆ ಕಲಿಸಲು ನಟ ಸಾರವಭೌಮ ನೀನು ಆಗಣ್ಣ...!!
ಯುವಕರನ್ನು ಹುರಿದುಂಬಿಸಿತಾ ಅಭಿಮಾನಿಗಳೇ ದೇವ್ರು ಎನ್ನುವ ಯುವರತ್ನ ನಿನಣ್ಣಾ...!
ಬೆಟ್ಟದ ಹೂ ಪರಮಳ ನೀ ನೀಡಿ ನಮಗೆಲ್ಲ ಹೇಳದೆ ನೀನು ಎಲ್ಲಿಗೆ ಹೋದೆ ಅಣ್ಣಾ...!!

ನಿನ್ನಯ ನೆನಪುಗಳ ಕನ್ನಡಿಗರ ಮನ ಮನೆಯಲ್ಲಿ ಜೀವಂತ...!
ಬಾರದ ಊರಿಗೆ ನೀ ಆದಷ್ಟು ಬೇಗ ಹೋಗಿ ಬಾ ನಗುವಿನ ಶ್ರೀಮಂತ...!!
ನಿನ್ನಯ ಅಭಿಮಾನಿಗಳ ಹೃಯದಲ್ಲಿ ನೀನು ಯಾವತ್ತೂ ಶಾಶ್ವತ...!
ನೀ ಮತ್ತೆ ಹುಟ್ಟಿ ಬಂದು ನಗು ನೀಡು ಕನ್ನಡ  ಚಿತ್ರರಂಗವ  ಸೇರುತಾ...!!
    - ಯಮನೂರಪ್ಪ ಎಸ್ ಅರಬರ
ತಾ ಯಲಬುರ್ಗಾ ಜಿ ಕೊಪ್ಪಳ
ಮುರಡಿ ಬಿಕಾಂ ವಿದ್ಯಾರ್ಥಿ


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಸಾಧನೆಗೆ ವಯಸ್ಸು ಮುಖ್ಯವಲ್ಲ, ಪ್ರಾಮಾಣಿಕ ಪ್ರಯತ್ನ ಮುಖ್ಯ..

ಸಾಧನೆಗೆ ವಯಸ್ಸು ಮುಖ್ಯವಲ್ಲ, ಪ್ರಾಮಾಣಿಕ ಪ್ರಯತ್ನ ಮುಖ್ಯ...  ಭೂಮಿಯ ಮೇಲೆ ಹುಟ್ಟಿರುವ ಪ್ರತಿಯೊಬ್ಬ ವ್ಯಕ್ತಿಯೂ ಕೂಡ ಒಂದಲ್ಲ ಒಂದು ರೀತಿಯಲ್ಲಿ ಸಾಧನೆ ಮಾಡಬೇಕೆಂಬ ಹಂ...