ಭಾನುವಾರ, ನವೆಂಬರ್ 7, 2021

ನಮ್ಮ ಹೆಮ್ಮೆಯ ಕರ್ನಾಟಕದ ಇತಿಹಾಸ ಮತ್ತು ಖ್ಯಾತಿ (ಲೇಖನ) - ಅಜೇಯ್. ಪಿ. ಎಸ್.

ಪ್ರಾಚೀನ ಕಾಲದಲ್ಲಿ ನಮ್ಮ ರಾಜ್ಯವನ್ನು "ಕರುನಾಡು"ಎಂದು ಕರೆಯುತ್ತಿದ್ದರು. ( ಕರು ಎಂದರೇ ಕಪ್ಪು, ನಾಡು ಎಂದರೇ ಪ್ರದೇಶ ಎಂದರ್ಥ ). ಕರ್ನಾಟಕವು ಪ್ರಕೃತಿಕವಾಗಿ  ತನ್ನದೇ ಆಗಿರುವಂತಹ  ಕರಾವಳಿ, ಸಹ್ಯಾದ್ರಿ, ಮೈದಾನಗಳಂತಹ  ಭೋಗೋಳಿಕ ಲಕ್ಷಣಗಳನ್ನು ಹೊಂದಿ ಸದಾ ಹಚ್ಚ ಹಸಿರು ನಾಡೆಂಬ ಕೀರ್ತಿಗೆ ಭಾಜನವಾಗಿದೆ. ನಮ್ಮ ಕನ್ನಡ ನಾಡಿಗೆ ಸಾಹಿತ್ಯ ಶಿಲ್ಪ ಕಲೆಗಳಿಗೆ ಆಳವಾದ ಹಿರಿದಾದ ಇತಿಹಾಸವಿದೆ. ಕರ್ನಾಟಕ ಎಂಬ ಪದವು " ಕರುನಾಟ್ ''  ಎಂಬ ಪದದೊಂದಿಗೆ 3 ನೇ ಶತಮಾನದಲ್ಲಿ ಅಂದರೇ  ಸಂಘಂ ಸಾಹಿತ್ಯದ ಪ್ರಮುಖ ಕೃತಿಗಳಾದ " ಶಿಲಪ್ಪಧಿಕಾರಂ ಮತ್ತು  ತೊಳ್ಕಾಪಿಯಂ " ಎನ್ನುವ ಕೃತಿಯಲ್ಲಿ ಪ್ರಥಮವಾಗಿ ಉಲ್ಲೇಖಗೊಂಡಿತ್ತು.

         ನಮ್ಮ ಕರ್ನಾಟಕವು ಹಲವಾರು ಗುಡ್ಡ ಗಾಡು ಪ್ರದೇಶಗಳಿಂದ ಕೂಡಿದ್ದು ತಂಪಲಿಯ ನಾಡು ಎಂತಲೂ ಕರೆಯುತ್ತಾರೆ. ತಮಿಳನ್ನು ಬಿಟ್ಟರೇ ನಮ್ಮ ಭಾರತದ ಅಂತ್ಯಂತ ಪ್ರಾಚೀನ ದ್ರಾವಿಡ ಭಾಷೆಯೆಂದರೆ  ಅದು ನಮ್ಮ ಹೆಮ್ಮೆಯ ಕನ್ನಡ ಭಾಷೆ. ಈ ನಮ್ಮ ಜೀವದ ಭಾಷೆಗೆ 2008 ರಲ್ಲಿಯೇ ಶಾಸ್ತ್ರೀಯ ಸ್ಥಾನಮಾನ ದೊರಕಿದ್ದು ನಮ್ಮ ಹೆಮ್ಮೆಯಾಗಿದೆ. 2021 ರಲ್ಲಿ ಕರ್ನಾಟಕದ ಜನಸಂಖ್ಯೆಯು 68.4 ಮಿಲಿಯನ್ (6.84 ಕೋಟಿ) ಇದನ್ನು ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರದ ಪ್ರಕಾರ 31/ ಮೇ/ 2020 ನವೀಕರಿಸಲಾಗಿದೆ.2020 ರ ಮಧ್ಯದ ವೇಳೆಗೆ ಯೋಜಿತ ಜನಸಂಖ್ಯೆಯು 67,562,686 ಆಗಿದೆ.( ಗೂಗಲ ನಾ ಮಾಹಿತಿಯ ಪ್ರಕಾರ )

   ಕನ್ನಡ,ನೆಲ,ಜಲ,ಭಾಷೆಯನ್ನು ಮರೆತ ಕೆಲವು ಕನ್ನಡಿಗರು

ಆದರೇ.. ವಿಪರ್ಯಾಸ ಎಂದರೆ ಕರ್ನಾಟಕದಲ್ಲಿರುವವರೆಲ್ಲ ಕನ್ನಡಿಗರಲ್ಲ , ಕನ್ನಡ ಭಾಷೆಯನ್ನು ಮಾತನಾಡುವವರೇ ನಿಜವಾದ ತಾಯಿ ಭುವನೇಶ್ವರಿ ಮಕ್ಕಳು ಅಪ್ಪಟ ಕನ್ನಡ ಭಕ್ತರು .ಕರ್ನಾಟಕದಲ್ಲಿ ನೆಲೆಸಿರುವಂತಹ ಜನರು ಕನ್ನಡಭಾಷೆಯನ್ನು ಬಿಟ್ಟು ಮಿಕ್ಕಿದ್ದೆಲ್ಲ ಭಾಷೆಯನ್ನು ಮಾತನಾಡುತ್ತಾರೆ ( ಹಲವು ಕನ್ನಡಿಗರು ಕೂಡಾ ) ಎನ್ನುವುದೇ ಬಹಳ ನೋವಿನ ವಿಷಯವಾಗಿದೆ. ನಮ್ಮ ನಾಡು,ನಮ್ಮ ಭಾಷೆ,ನಮ್ಮ ನೆಲ, ನಮ್ಮ ಜಲ,ನಮ್ಮ ತನ, ನಮ್ಮ ಮನವೆಲ್ಲ,ನಮ್ಮ ಕನ್ನಡಕ್ಕೆ ಮೀಸಲಿಡುವುದು ಕನ್ನಡಿಗರಾದ ನಮ್ಮೆಲ್ಲರ ಕರ್ತವ್ಯ ಮತ್ತು ಧರ್ಮವಾಗಬೇಕು .
             ನಮ್ಮ ಕರ್ನಾಟಕದಲ್ಲಿದ್ದು  ಈ ನೆಲ ನೀಡುವ ಅನ್ನವನ್ನು ತಿಂದು, ಕನ್ನಡ ಮಾತನಾಡೋಕ್ಕೆ ನಿಮಗೆ ಅಸಹ್ಯ ನಾ..??? ಅಥವಾ  ಕನ್ನಡ ಭಾಷೆಯೆಂದರೇ ನಿಮ್ಮ ಯೋಗ್ಯತೆಗೆ ಧಕ್ಕೆ ಬರುತ್ತಾ..?? ನಿಜಹೇಳಬೇಕೆಂದರೆ ನಿಮ್ಮಂತಹ ಅವಿವೇಕಿಗಳು, ಅಯೋಗ್ಯರು, ಕನ್ನಡತನವನ್ನು ಅರಿತಿಲ್ಲವಲ್ಲ ಇದರಿಂದಲೇ ನಮ್ಮ ಭಾಷೆ ನಮ್ಮ ನಾಡಿಗೆ ನಿಮ್ಮಂತವರಿಂದ ಕಳಂಕಬರುತ್ತಿದೆ.

ಸದ್ಯ ನಮ್ಮ ಕನ್ನಡ ಭಾಷೆ ನಾಡಿನ ಪರಿಸ್ಥಿತಿ ಹೇಗಾಗಿದೆ ಎಂದರೇ.. ಕನ್ನಡವನ್ನು ಮಾತನಾಡಿ, ಕನ್ನಡದಲ್ಲಿ ವ್ಯವಹರಿಸಿರಿ ಎಂದು ಬೋರ್ಡ ಹಾಕುತಿದ್ದೇವೆ. ಕ್ಲಬ್ ಪಾರ್ಟಿಗಳಲ್ಲಿ ಕನ್ನಡ ಹಾಡುಗಳನ್ನು ಹಾಕಿ, ಬೇರೆ ಬೇರೆ ರಾಜ್ಯಗಳಲ್ಲಿ ನಮ್ಮ ಕನ್ನಡಚಿತ್ರಗಳನ್ನು ಬಿಡುಗಡೆಮಾಡಲು ಚಿತ್ರಮಂದಿರಗಳನ್ನು ನೀಡಿ ಎಂದು ಕೈಚಾಚಿ ನಿಲ್ಲಬೇಕಾಗಿದೆ. ಕನ್ನಡದ ಜೈಕಾರವನ್ನು ಹಾಕಿ   ಕನ್ನಡದ ಕ್ರಿಕೆಟ್ ತಂಡವಾದ ಆರ್ ಸಿ ಬಿ ಯನ್ನು ಬೆಂಬಲಿಸಿ ಎಂದು ಎಲ್ಲರಲ್ಲಿ ಮನವಿ ಮಾಡಿಕೊಳ್ಳಬೇಕಾಗಿದೆ. ನಮ್ಮ  ತಾಯಿ ಭುವನೇಶ್ವರಿಗೆ ಹುಟ್ಟಿ ಪಕ್ಕದ ರಾಜ್ಯದವರನ್ನು ತಾಯಿ ಎನ್ನುತ್ತಿದ್ದಾರೆ. ಇದರ ಮೇಲೆ ನೀವು ತಿಳಿದುಕೊಳ್ಳಿ ನಮ್ಮ ಭಾಷೆಯ ಪರಿಸ್ಥಿತಿಯು ಎಷ್ಟೊಂದು ಹದಗಟ್ಟಿ ಹೋಗಿದೆ ಎಂದು. ಹಿರಿದಾದ  ಹೊಂದಿರುವ ನಮ್ಮ ನಾಡು

ಮಾಡುತ್ತಿರುವುದೇನು....???  ಮಾಡಬೇಕಾಗಿರುವುದೇನು..??

ಇನ್ನು ಸಾಹಿತ್ಯ ಸಂಗೀತಾ ಶಿಲ್ಪ ಕಲೆಗಳ ಕಡೆಗೆ ಬರೋಣ....  ದಾಸ ಸಾಹಿತ್ಯ, ಜನಪದ ಸಾಹಿತ್ಯ, ವಚನಸಾಹಿತ್ಯ, ಶಿಲ್ಪ ಕಲೆಗಳ ಸಾಹಿತ್ಯ,ವೈಚಾರಿಕತೆಯ ಸಂಪ್ರದಾಯಗಳು, ಹೀಗೆ ಹಲವು ಸಾಹಿತ್ಯಗಳನ್ನು ಹುಟ್ಟುಕೊಂಡಿದ್ದು ನಮ್ಮ ಈ ಕನ್ನಡ ಮಣ್ಣಿನಲ್ಲಿಯೆ.ಸಾಹಿತ್ಯವೆಂದರೆ ಕವಿ/ಲೇಖಕರುಗಳಾದ ಪಂಪ,ರನ್ನನಿಂದ ಹಿಡಿದು ಈ ಕಲಿಯುಗದ ಕವಿ /ಲೇಖಕರುಗಳಾದ ಕುವೆಂಪು, ದ. ರಾ. ಬೆಂದ್ರೆ, ಅನಂತಮೂರ್ತಿ, ಚಂದ್ರಶೇಖರ ಕಂಬಾರ ಹೀಗೆ ಹಲವು ಖ್ಯಾತರು ನೆನಪಾಗುತ್ತಾರೆ ಹೊರತು ಅವರ ಸಾಹಿತ್ಯವಲ್ಲ. ಎನ್ರೋ ಯಾವಾಗ ನೋಡಿದ್ರು ಕನ್ನಡ ಕನ್ನಡ ಅಂತಿರಲ್ಲಾ ಅಂಥದ್ದೆನಿದೆ ಕರ್ನಾಟಕದಲ್ಲಿ ಎನ್ನುವ ಅವಿವೇಕಿಗಳು ಒಮ್ಮೆ ಇವರ ಸಾಹಿತ್ಯವನ್ನು ಓದಿ ತಿಳಿದುಕೊಳ್ಳಿ ನಮ್ಮ ನಾಡಿನ ಆಳವಾದ ವೈಭವದ ಇತಿಹಾಸವನ್ನು. ಎಲ್ಲಾ ಸಾಹಿತ್ಯಗಳನ್ನು ನಾವು ಬಾಯಿಯಿಂದ ಹೇಳುತ್ತೇವೆಯೇ ಹೊರತು ಯಾವತ್ತೂ ಓದುವುದಿಲ್ಲ ಎಲ್ಲಿಯವರೆ ನಾವು ನಮ್ಮ ನಾಡಿನಬಗ್ಗೆ ಅರಿಯುವುದಿಲ್ಲವೋ ಅಲ್ಲಿಯವರೆಗೆ ನಾವು ನಿಜವಾದ ಕನ್ನಡಿಗರಲ್ಲ.


 ಕನ್ನಡತನವನ್ನು ಕಾಪಾಡುವುದು ಕನ್ನಡಿಗರ ಕರ್ತವ್ಯವಾಗಬೇಕು

ಮನೆ ಮನೆ ಮಾತಾಗಬೇಕು ಕನ್ನಡ, ನಾವಾಡೊ ಉಸಿರಾಗಬೇಕು ಕನ್ನಡ,ಪುಟ್ಟ ಕಂದನ ನಗು ಅಳುವಾಗಬೇಕು ಕನ್ನಡ, ನವೆಂಬರ್ 1 ಬಂದರೆ ಸಾಕು ಎಲ್ಲರ ಸ್ಟೇಟಸ್ ಗಳಲ್ಲಿ ನಮ್ಮ ನಾಡು ಕನ್ನಡ, ನಾನು ಶುದ್ಧ ಕನ್ನಡಿಗ, ಕನ್ನಡವೆಂದರೆ ನನ್ನ ಪ್ರಾಣ, ಎಂತೆಲ್ಲ ಗೊಳ್ಳು ವಿಷಯಗಳನ್ನು ಹಾಕುತ್ತಾರೆ. ನಮ್ಮ ಕನ್ನಡಸಾಹಿತ್ಯ ಉಳಿಯಬೇಕು,ಮಕ್ಕಳಿಗೆ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಕಲಿಸಬೇಕು ಎಂತೆಲ್ಲ ಹೇಳುವವರು ಎಷ್ಟು ಜನ ನಿಮ್ಮ ಮಕ್ಕಳನ್ನು ಕನ್ನಡ ಶಾಲೆಗಳಿಗೆ ಹಾಕಿದ್ದೀರಾ..ನೀವೇ ಪ್ರಶ್ನಿಸಿಕೊಳ್ಳಿ..???   ಉತ್ತರ ನಿಮ್ಮ ಮನಸ್ಸೇ ನೀಡುತ್ತದೆ.
ಸಾಹಿತ್ಯ ಉಳಿಯಬೇಕೆಂದರೆ ಸ್ಟೇಟಸ್ ಹಾಕೋದಲ್ಲ ಸಾಹಿತ್ಯವನ್ನು ಓದಬೇಕು ನಿಮ್ಮ ಮಕ್ಕಳಿಗೆ ಸಾಹಿತ್ಯದ  ಹಿರಿಮೆಯನ್ನು ಅರ್ಥೈಸಬೇಕು,ನಮ್ಮನ್ನು ಮಮ್ಮಿ ಪಪ್ಪಾ ಎಂದು ಕರೆಯಬೇಕು ಎಂದು ಹೇಳುವ ನೀವು ನಮ್ಮನ್ನು ಅಮ್ಮ ಅಪ್ಪಾ ಎಂದು ಕನ್ನಡದಲ್ಲಿ ಕರೆಯಬೇಕೆಂದು ಕಲಿಸಬೇಕು. ಕನ್ನಡದಲ್ಲಿ ವ್ಯವಹರಿಸಲು, ಮಾತಾಡಲು, ಕುಣಿಯಲು, ಹಾಡಲು ಹೇಳಿಕೊಡಬೇಕು ನಾವು ನೋಡುತ್ತೇವೆ ಕನ್ನಡ ಸಾಹಿತ್ಯ ಅದು ಹೇಗೆ ಅಭಿವೃದ್ಧಿಯನ್ನು ಕಾಣುವುದಿಲ್ಲವೆಂದು. ನಿಜ ಹೇಳಬೇಕೆಂದರೆ ನಾನು ಮೇಲೆ ಹೇಳಿದ್ದ ಯಾವುದನ್ನೂ ನೀವ್ಯಾರು ಮಾಡುವುದಿಲ್ಲ ಬದಲಿಗೆ ನೀವೇ ಮೊದಲು ಪುಸ್ತಕಗಳನ್ನು ಓದುವುದಿಲ್ಲ ನೀವೇ ಕನ್ನಡವನ್ನು ಮಾತಾಡುವುದಿಲ್ಲ, ವ್ಯವಹರಿಸುವುದಿಲ್ಲ  ಮೊದಲು ನೀವು ಬದಲಾಗಿ ಸ್ವ ಪರಿವರ್ತನೆಯಿಂದಲೇ ವಿಶ್ವ ಪರಿವರ್ತನೆ ಎನ್ನುವ ವಾಣಿಯನ್ನು ಅಳವಡಿಸಿಕೊಳ್ಳಿ,  ಬೆಳೆಯುವ ಪೈರು ಮೊಳಕೆಯಲ್ಲಿಯೇ ಎನ್ನುವ ಹಾಗೆ  ನಿಮ್ಮ ಮಕ್ಕಳ ಮನಸಲ್ಲಿ ಸತ್ಯವಾದ ಶ್ರೇಷ್ಠ ಸಾಹಿತ್ಯವಾದ ಬಸವಣ್ಣನವರ ವಚನಸಾಹಿತ್ಯವನ್ನು  ಮತ್ತು ಸಂವಿಧಾನವನ್ನು ನಿಮ್ಮ ಮಕ್ಕಳಿಗೆ ತಿಳಿಸಿ ಅದೇಗೆ ಅವರು ಭಕ್ತಿ ಜ್ಞಾನ ಭಂಡಾರಿಗಳಾಗುತ್ತಾರೆ.

ಇನ್ನು ಜನಪದ ಸಾಹಿತ್ಯಕ್ಕೆ ಬಂದರೆ.. ಇದಂತೂ ಕಣ್ಮರೆಯಾಗಿಯೇ ಹೋಗುತ್ತಿದೆ. ಹಿಂದೆ ನಮ್ಮ ಪೂರ್ವಜರು ಹುಟ್ಟುಹಾಕಿದ್ದ ಸಂಸ್ಕೃತಿ ಸಾಹಿತ್ಯವನ್ನೇ ಮುಂದಿನ ಪೀಳಿಗೆಗಳಾದ ನಾವು ಮರೆಯುತ್ತಿದ್ದೇವೆ. ಆದಷ್ಟು ನಮ್ಮ ಕನ್ನಡದ ಜನಪದ ಸಾಹಿತ್ಯವನ್ನು ಅಭಿವೃದ್ಧಿಗೊಳಿಸಿ.

       ಅಂಧತೆ ಮೌಢ್ಯತೆಯಿಂದ ಹೊರಬನ್ನಿ ಅವಿವೇಕಿಗಳೇ ನೀವು ಶಿಕ್ಷಣವನ್ನು ಪಡೆದಿದ್ದೀರಿ

        ಹಿಂದಿ ಯಾವುದೇ ಕಾರಣಕ್ಕೂ ರಾಷ್ಟ್ರಭಾಷೆಯಲ್ಲ ನಮ್ಮ ಸಂವಿಧಾನದಲ್ಲಿ  ಒಟ್ಟು 22 ಭಾಷೆಗಳಲ್ಲಿ ಹಿಂದಿಯು ಕೂಡಾ ಒಂದು ನಮ್ಮ ಕನ್ನಡವು ಕೂಡಾ ಒಂದು ಎಂದು ನಮ್ಮ ಭಾರತದ ಸಂವಿಧಾನದಲ್ಲಿ ಡಾ. ಬಾಬಾಸಾಹೇಬ ಅಂಬೇಡ್ಕರ್ ರವರು  ಉಲ್ಲೇಖಿಸಿದ್ದಾರೆ. ಮತ್ತು ವಿಶೇಷವೆಂದರೆ ಅವರವರ ರಾಜ್ಯದ ಪ್ರಾದೇಶಿಕ ಆಡು ಭಾಷೆಯೇ ಅವರ ರಾಷ್ಟ್ರಭಾಷೆಯಾಗಿದೆ ಇದನ್ನ ಮೊದಲು ತಿಳಿದುಕೊಳ್ಳಿ. ಹೀಗಾಗಿ ಹಿಂದಿ ರಾಷ್ಟ್ರೀಯ ಭಾಷೆ  ನಾವು ಕನ್ನಡವನ್ನು ಮಾತಾಡೋದಿಲ್ಲ ಎನ್ನುವ ತಿರ್ಪೆ ಶೋಕಿಗಳನ್ನೆಲ್ಲ ಬಿಟ್ಟು  ನೀವು ಎಲ್ಲಿ ಯಾವ ಭಾಷೆ ಮಾತಾಡುತ್ತಿರೋ ಗೊತ್ತಿಲ್ಲ ನಮ್ಮ ಕರ್ನಾಟಕದಲ್ಲಿದ್ದಾಗ ಕನ್ನಡ ಭಾಷೇನೆ ಮಾತಾಡಬೇಕು.


ಮರೆಯದಿರು ನೀನು ಕನ್ನಡಿಗ ಮತ್ತು ಭಾರತೀಯ ಈ ನಾಡಲ್ಲಿ ಈ ದೇಶದಲ್ಲಿ ಹುಟ್ಟಿದ್ದ ನಿನ್ನ ಜನ್ಮ ಪಾವನ

     ನಮ್ಮ ಭಾಷೆಗಾಗಿ ನಮ್ಮ ನೆಲಕ್ಕಾಗಿ ಯಾವುದೇ ಜಾತಿ ಭೇದ ಭಾವವಿಲ್ಲದೆ ಪರಸ್ಪರ ನಾವೆಲ್ಲರೂ ಒಂದು ಎನ್ನುವ ಭಾವನೆಯಿಂದ ನಾಡನ್ನು ಕಟ್ಟಿ ದೇಶವನ್ನು ಮೆರೆಯೋಣ.
ನಾವೆಲ್ಲರೂ ಒಂದಾಗಿ ಕನ್ನಡದ ದೇಶದ ಬಾವುಟವನ್ನು ಹಾರಿಸೋಣ . ಕನ್ನಡ ದೀಪವನ್ನು ಹಚ್ಚಿ ಭಾರತವನ್ನು ಬೆಳಗೋಣ. ನಾಡಿನ ಸೇವೆಯಲ್ಲಿ ನಿರತರಾಗಿ ದೇಶದ ರಕ್ಷಣೆಗೆ ನಮ್ಮ ಮನೆಮಕ್ಕಳನ್ನು ಕಳಿಸೋಣ.
ಭುವನೇಶ್ವರಿಯೆ ನಮ್ಮೆಲ್ಲರ  ತಾಯಿ ನಾವು ಕನ್ನಡಿಗರಲ್ಲರು ಅವಳ ಮಕ್ಕಳು ಎನ್ನುವ ಸಹೋದರತ್ವತೆ ಭಾವದಿಂದ ಸಮಾನತೆ  ಭಾತೃತ್ವದ ಅಂಶದಿಂದ ನಾವೆಲ್ಲ ಕನ್ನಡಿಗರು ನಾವೆಲ್ಲ ಭಾರತೀಯರು ಎಂದು ನಮ್ಮ ನಾಡು ನಮ್ಮ ದೇಶದ ಬಗ್ಗೆ ಹೆಮ್ಮೆ ಪಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ.

ಏಳೇಳು ಜನ್ಮದಲೂ ಕನ್ನಡ ಕುಲವಾಗಿರುವೆ
ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗ
- ಅಜೇಯ್. ಪಿ. ಎಸ್. 9036644390.
ಮು : ಮುತ್ತಂಗಿ, ಜಿ : ಬೀದರ್.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

1 ಕಾಮೆಂಟ್‌:

ಸಾಧನೆಗೆ ವಯಸ್ಸು ಮುಖ್ಯವಲ್ಲ, ಪ್ರಾಮಾಣಿಕ ಪ್ರಯತ್ನ ಮುಖ್ಯ..

ಸಾಧನೆಗೆ ವಯಸ್ಸು ಮುಖ್ಯವಲ್ಲ, ಪ್ರಾಮಾಣಿಕ ಪ್ರಯತ್ನ ಮುಖ್ಯ...  ಭೂಮಿಯ ಮೇಲೆ ಹುಟ್ಟಿರುವ ಪ್ರತಿಯೊಬ್ಬ ವ್ಯಕ್ತಿಯೂ ಕೂಡ ಒಂದಲ್ಲ ಒಂದು ರೀತಿಯಲ್ಲಿ ಸಾಧನೆ ಮಾಡಬೇಕೆಂಬ ಹಂ...