ಮುಂಜಾನೆ ಮನಸು ಹೇಳುತ
ಹೃದಯವು ಭಾರವಾಗಿ ಏಳುತ
ಒಲ್ಲದ ಮನಸನು ಕೆಣಕುತ
ಇಲ್ಲಸಲ್ಲದ ನೋವ ನುಂಗುತ
ಅಳುವ ಕಂದನಾಗಿ ಮನದ ಒಳಗೆ
ಭುವಿಯ ಹಂದರವಾಗಿ ಕಾನನದಲಿ
ಕೇಳುವ ಕಣ್ಣುಗಳು ಬಡವಾಗಿ
ಪಕ್ಷಿಗಳ ಕಲರವ ಬೇಡವಾಗಿ
ಹೊರಗೆ ನಗುವ ನೋವ ಮೊಗವು
ನಗುವಿನಲ್ಲಿ ಮಗುವ ಕಂಡು
ಅಳುವ ದನಿಯ ಮನದ ಕೂಗು
ಜೀವವಿಲ್ಲಿ ನಶ್ವರ ಜೀವನವೆಂದು ಬೀಗು
ಸತ್ಯಕ್ಕಿಲ್ಲ ಬೆಲೆಯ ಸತ್ವ
ಹತ್ತಿಕ್ಕುತಿಹುದು ಸುಳ್ಳು ನಿತ್ಯ
ಕಾಮಾಲೆಯಂತೆ ಕಂಡ ಹಳದಿ
ಹೂಮಾಲೆ ಬಾಡಿತಲ್ಲಿ ತಳದಿ
ಸಿಹಿಯ ಕಹಿಯು ಮುಳ್ಳು ಚುಚ್ಚಿ
ಮಾಯದ ಗಾಯ ಬರೆಯ ಹಚ್ಚಿ
ಮೊಗ್ಗು ಮರಳಿ ದೀಪ ಹೊರಳಿ
ಮುಗ್ಧ ಮನಸ್ಸು ಕನಸು ನರಳಿ
✍🏻ರಂಜಿತ್ ಕುದುಪಜೆ.
S/o ದಾಮೋದರ ಕೆ.ಡಿ. , ತಣ್ಣಿಮಾನಿ ಗ್ರಾಮ, ಭಾಗಮಂಡಲ , ಮಡಿಕೇರಿ ಕೊಡಗು ಜಿಲ್ಲೆ- ೫୭೧೨೪୭
ಮೋ : ೯೪೮೦೭೩೨೫೭೬.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ